29 C
Hubli
ಅಕ್ಟೋಬರ್ 8, 2024
eNews Land
ಪ್ರವಾಸ ಸುದ್ದಿ

ದೀಪಾವಳಿ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ

 

ಇಎನ್ಎಲ್ ಹುಬ್ಬಳ್ಳಿ :

ದೀಪಾವಳಿ ಮುಗಿಸಿ ಹಿಂದಿರುಗುವವರ ಅನುಕೂಲಕ್ಕಾಗಿ ನಗರದಿಂದ ನ.7ರಂದು ರವಿವಾರ
ಬೆಂಗಳೂರು, ಮುಂಬೈ, ಪುಣೆ,ಪಿಂಪ್ರಿ ಮತ್ತಿತರ ಸ್ಥಳಗಳಿಗೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ನವೆಂಬರ ತಿಂಗಳಲ್ಲಿ ಈ ಬಾರಿ1ರಂದು ಕರ್ನಾಟಕ ರಾಜ್ಯೋತ್ಸವ, 3ರಂದು ನರಕ ಚತುರ್ದಶಿ,5ರಂದು ಬಲಿ ಪಾಡ್ಯಮಿ ಹಾಗೂ 7ರಂದು ರವಿವಾರ ಪ್ರಯುಕ್ತ ಸಾಲು ಸಾಲು ರಜೆಗಳಿದ್ದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಲ್ಲಿ ನೆಲೆಸಿದ್ದ ಸಾವಿರಾರು ಮಂದಿ ತವರೂರುಗಳಿಗೆ ಬಂದಿದ್ದಾರೆ. ಮುಂಬೈ, ಪುಣೆ, ಗೋವಾ, ಬೆಂಗಳೂರು, ಮಂಗಳೂರು ಮತ್ತಿತರ ದೂರದ ಊರುಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ.

ದಸರಾ ಸಮಯದಲ್ಲಿ ಬೆಂಗಳೂರು ಮತ್ತಿತರ ಸ್ಥಳಗಳಿಂದ ರಾಜ್ಯದೊಳಗಿನ ಪ್ರದೇಶಗಳಿಂದ ಹೆಚ್ಚು ಜನ ಪ್ರಯಾಣಿಕರು ನಗರಕ್ಕೆ, ಜಿಲ್ಲೆಗೆ ಬಂದಿದ್ದರು. ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ವಿವಿಧ ಸ್ಥಳಗಳಿಂದ ದಿಂದ ಹೆಚ್ಚಿನ ಜನರು ಆಗಮಿಸಿದ್ದಾರೆ. ಅವರೆಲ್ಲರು ಹಬ್ಬ ಮುಗಿಸಿದ ನಂತರ ಮತ್ತೆ ತಮ್ಮ ಕಾರ್ಯ ಸ್ಥಳಗಳಿಗೆ ಹಿಂದಿರುಗಲಿದ್ದಾರೆ. ಅವರ ಅನುಕೂಲಕ್ಕಾಗಿ ನ.7ರಂದು ರವಿವಾರ ಹುಬ್ಬಳ್ಳಿಯಿಂದ ಬೆಂಗಳೂರು,ಪುಣೆ, ಪಿಂಪ್ರಿ,ಮುಂಬೈ,ಪಣಜಿ, ಕಲಬುರಗಿ, ಹೈದರಾಬಾದ್ ಮತ್ತಿತರ ಪ್ರಮುಖ ಸ್ಥಳಗಳಿಗೆ, ಪಣಜಿಯಿಂದ ಬೆಂಗಳೂರಿಗೆ ಹಾಗೂ ನೆರೆಯ ಜಿಲ್ಲೆಗಳಿಗೆ ವಿಶೇಷ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನಿತ್ಯದ ಬಸ್ ಗಳ ಜೊತೆಗೆ ವೋಲ್ವೋ, ಸ್ಲೀಪರ್, ರಾಜಹಂಸ ಹಾಗೂ ವೇಗದೂತ ಸಾರಿಗೆಗಳು ಸೇರಿದಂತೆ ಎಲ್ಲಾ ಬಗೆಯ ಬಸ್ ಗಳನ್ನು ಹೆಚ್ಚುವರಿಯಾಗಿ ರಸ್ತೆಗಿಳಿಸಲು ನಿರ್ಧರಿಸಲಾಗಿದೆ.

ಗದಗ,ಕೊಪ್ಪಳ,ರಾಯಚೂರು, ಬಾಗಲಕೋಟೆ, ವಿಜಯಪುರ ಕಡೆಗೆ ಹೋಗುವ ಹೊರ ಜಿಲ್ಲೆಗಳಿಗೆ ತೆರಳುವ ಬಸ್ಸುಗಳು ಹಾಗೂ ಜಿಲ್ಲೆಯೊಳಗೆ ಶಿರಹಟ್ಟಿ,ನವಲಗುಂದ,ಅಣ್ಣಿಗೇರಿ,ಕುಂದಗೋಳ,ತಡಸ,ಕಲಘಟಗಿ ಮತ್ತಿತರ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಸ್ ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.

ಪುಣೆ,ಪಿಂಪ್ರಿ,ಮುಂಬೈ,ಪಣಜಿ,ಹೈದರಾಬಾದ್, ಸೊಲ್ಲಾಪುರ ಮತ್ತಿತರ ಸ್ಥಳಗಳು ಸೇರಿದಂತೆ ಎಲ್ಲಾ ಪ್ರತಿಷ್ಟಿತ ಸಾರಿಗೆಗಳು, ಬೆಳಗಾವಿ, ಶಿರಸಿ,ಮಂಗಳೂರು, ಯಲ್ಲಾಪುರ,ಅಂಕೋಲ ಕಾರವಾರ,ದಾವಣಗೆರೆ, ಶಿವಮೊಗ್ಗ,ಬೆಂಗಳೂರು,ಮೈಸೂರು ಕಡೆಗೆ ಹೋಗುವ ಬಸ್ಸುಗಳು ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ .

ಮುಂಗಡ ಬುಕ್ಕಿಂಗ್, ರಿಯಾಯಿತಿ
ದೂರ ಮಾರ್ಗದ ಸಾರಿಗೆಗಳಿಗೆ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. KSRTC ಮೊಬೈಲ್ ಆ್ಯಪ್,www.ksrtc.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ, ಬಸ್ ನಿಲ್ದಾಣಗಳಲ್ಲಿ ಮತ್ತು ಫ್ರಾಂಚೈಸಿ ಕೌಂಟರ್ ಗಳಲ್ಲಿ ಮುಂಚಿತವಾಗಿ ಆಸನಗಳನ್ನು ಕಾಯ್ದಿರಿಸಬಹುದು.

Related posts

ಅಣ್ಣಿಗೇರಿ ತಾಲೂಕಿನ ಜೈನ ಸಮಾಜ ಬಾಂಧವರಿಂದ ಜೈನಮುನಿ ಹತ್ಯೆ ಖಂಡಿಸಿ ಮೌನಪ್ರತಿಭಟನೆ

eNewsLand Team

ಮಹಿಳೆಯರು ಆರ್ಥಿಕವಾಗಿ ಸಬಲರಾಗಿ: ಲಿಂಗರೆಡ್ಡಿ

eNEWS LAND Team

ಭಿಕ್ಷಕರಲ್ಲೂ ಸಂಘಟನೆ ಶಕ್ತಿ ಇದೆ, ಸಂಘಟನೆ ಅನಿವಾರ್ಯ: ಬಸವರಾಜ ಹೊರಟ್ಟಿ

eNEWS LAND Team