35 C
Hubli
ಮಾರ್ಚ್ 28, 2023
eNews Land
ಸುದ್ದಿ

ಮನಕುಲ ಕಲ್ಯಾಣವೇ  ರೇಣುಕಾಚಾರ್ಯರ ಸಂದೇಶ: ಅಭಿನವ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು

Listen to this article

ಇಎನ್ಎಲ್ ಅಣ್ಣಿಗೇರಿ: ಜಂಗಮರು ಕಾಯಕ ದಾಸೋಹ ಪ್ರಸಾದ ಭಕ್ತಿ, ಶೃದ್ಧೆ, ನಿಷ್ಠೆ, ಸಂಸ್ಕಾರ, ಸಂಸ್ಕೃತಿ ಸಂಪ್ರದಾಯ, ಧರ್ಮತತ್ವ ಸಿದ್ದಾಂತ,ಆಚರಣೆ ಮೂಲಕ ಆದಿಗುರು ರೇಣುಕಾಚಾರ್ಯರು ಹಾಕಿ ಕೊಟ್ಟ ಧರ್ಮದ ಹಾದಿಯಲ್ಲಿ ಬದುಕಿನ ಬೆಳಕನ್ನು ಕಾಣಬೇಕಿದೆ ಎಂದು ಅಡ್ನೂರು ಬ್ರಹ್ಮಮಠದ ಅಭಿನವ ಪಂಚಾಕ್ಷರಿ ಶಿವಾಚಾರ್ಯಶ್ರೀ ನುಡಿದರು.

ಇದನ್ನೂ ಓದಿ:ದಿವಾಳಿ ಆಗಿಲ್ಲ: ಕಲಘಟಗಿ ಅರ್ಬನ್ ಬ್ಯಾಂಕ್ ಸ್ಪಷ್ಟಣೆ

ಅಣ್ಣಿಗೇರಿ ತಾಲೂಕಿನ ಜಂಗಮಶ್ರೋಭಿವೃದ್ಧಿ ಸಂಘ ಪುರದೀರೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ ಶ್ರೀಮದ್ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ಜಂಗಮರು ಎಷ್ಟು ಜನ ಲಿಂಗವನ್ನು ಕೊರಳಲ್ಲಿ ಧರಿಸಿದ್ದೀರಿ? ದುಷ್ಟವ್ಯಸನ ತ್ಯಜಿಸಿ, ಧರ್ಮಾಚರಣೆ ಬಿಟ್ಟು, ಇಷ್ಟಲಿಂಗ ಪೂಜಿಸದೇ ಕೇವಲ ಮನೆ ಗೂಟಕ್ಕೆ ಹಾಕತ್ತಿರೋದು ಜಂಗಮಮೂರ್ತಿಗಳಿಗೆ ಶೋಭೆ ತರುವುದಿಲ್ಲ. ಕೇವಲ ಜಂಗಮರೆoದರೇ ಸಾಲದು? ಅಖಂಡ ವೀರಶೈವ ಲಿಂಗಾಯತ ಸಮಾಜ ಗುರುಸ್ಥಾನದಲ್ಲಿರುವ ಜಂಗಮ ಸಮಾಜವನ್ನು  ಗೌರವಿಸುತಿರೋದು ಮರೆಯಬಾರದು. ನಿಮ್ಮ ನಡೆ-ನುಡಿ ಅಚಾರ-ವಿಚಾರ, ಸತ್ಯಶುದ್ಧಕಾಯಕ, ಧರ್ಮತತ್ವ ಸಂದೇಶಪಾಲನೆ, ಧರ್ಮರಕ್ಷಣೆ ಮಾಡದೇ ಸಕಲ ಮಾನವ ಕುಲದ ಜೀವಾತ್ಮರಿಗೆ ಲೇಸು ಬಯಸದೇ, ನೀವು ಭಕ್ತರ ಉದ್ಧಾರ ಮಾಡಲು ಹೇಗೆ ಸಾದ್ಯವೆಂದರು? ಸನಾತನ ಧರ್ಮದ ಭಕ್ತಿಮಾರ್ಗ ಆದಿಗುರು ರೇಣುಚಾರ್ಯರು ಮನಕುಲ ಧರ್ಮತತ್ವ ಸಂದೇಶ ಅರಿದು ಆಚರಣೆಯಲ್ಲಿ  ತೊಡಗಬೇಕೆಂದರು.

ಇದನ್ನೂ ಓದಿ:ಡೇಂಜರಸ್ ಅಪ್ಸರಾ!! ಇದು ಆರ್’ಜಿವಿಯ ಲೆಸ್ಬಿನ್ ಕ್ರೈಂ ಸಿನಿಮಾ! ಏ.8ಕ್ಕೆ ತೆರೆಗೆ..

ನರಗುಂದ ಪುಣ್ಯಾರಣ್ಯ ಪತ್ರಿವನ ಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಮಾತನಾಡಿ ಜಂಗಮಧರ್ಮದ ಬಗ್ಗೆ ಸ್ವಾಭಿಮಾನವಿರಲಿ, ಅನ್ಯ ಧರ್ಮಗಳ ಬಗ್ಗೆ ಸಂಹಿಷ್ಣತೆ ಇರಲಿ, ನೂರೊಂದು ಭಕ್ತರ ಉದ್ಧಾರಕ್ಕೆ ಅವತರಿಸಿ ಒಬ್ಬ ಜಂಗಮ ಜನ್ಮತಾಳುತ್ತಾನೆ ಹೊರೆತು ನೂರೊಂದು ಮಂಗ ಸತ್ತ ನಂತರ ಜಂಗಮ ಜನ್ಮತಾಳುವುದಿಲ್ಲ. ಪ್ರತಿವರ್ಷ ಮಾರ್ಚ-16 ರಂದು ರೇಣುಕಾಚಾರ್ಯ ಜಯಂತಿ ಸರ್ಕಾರದ ವತಿಯಿಂದ ಆಚರಿಸಲು ಘೋಷಣೆ ಮಾಡಿದ್ದು ಶ್ಲಾಘನೀಯವೆಂದರು. ಜoಗಮ ಸಂಘಟನೆ ಒಗ್ಗಟ್ಟು ಹೆಚ್ಚಿದರೇ, ಸರ್ಕಾರದಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಅನೇಕ ಸೌಲಭ್ಯಗಳನ್ನು ನ್ಯಾಯಸಮ್ಮತ ಬೇಡಿಕೆ ಮೂಲಕ ಪಡೆಯಲು ಸಾಧ್ಯ. ಬೇಡಜಂಗಮ ಪರಿಶಿಷ್ಟಜಾತಿ ಪ್ರಮಾಣ ಪತ್ರ ಅಲ್ಪ ಜಂಗಮ ಸಮಾಜಕ್ಕೆ ಸರ್ಕಾರ ಕಲ್ಪಿಸಿದರೇ ಸರ್ಕಾರ ಸೌಲಭ್ಯಗಳನ್ನು ಪಡೆಯಲು ಸಾಧ್ಯವೆಂದರು.

ಇದನ್ನೂ ಓದಿ:ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ. ಶಿವಕುಮಾರ ಶ್ರೀ ಹೆಸರು: ಸಿಎಂ

ಹೊಸಳ್ಳಿ ಬೂದೀಶ್ವರಮಠದ ಬೂದೀಶ್ವರ ಶ್ರೀಗಳು ಮಾತನಾಡಿ, ಶಿವಪಥವನರಿವೊಡೆ ಗುರುಪಥಮೊದಲು ಗುರುಸ್ಥಾನದಲ್ಲಿರುವ ಜಂಗಮಮೂರ್ತಿಗಳೇ ಸಕಲ ಭಕ್ತರ ಉದ್ಧಾರ, ಲೇಸು ಬಯಸುವ ಗುಣ ನಿಮ್ಮಲ್ಲಿರಬೇಕು. ಸನ್ಮಾರ್ಗದ ನಡೆ-ನುಡಿ ಆಚಾರ-ವಿಚಾರ, ಧರ್ಮ, ಸಂಸ್ಕಾರ, ಲಿಂಗಪೂಜೆ, ತತ್ವಸಿದ್ದಾಂತ, ವ್ಯಕ್ತಿತ್ವ ರೂಪಿಸಿಕೊಂಡು ಅದಿಗುರು ರೇಣುಕಾಚಾರ್ಯರು ಮನಕುಲ ಉದ್ಧಾರಕ್ಕೆ ಹಾಕಿಕೊಟ್ಟ ಧರ್ಮ ಹಾದಿಯಲ್ಲಿ ಉಜ್ವಲ ಭವಿಷ್ಯ ನಿರ್ಮಿಸುವ ಭಕ್ತಸಮೂಹದ ಜಂಗಮಮೂರ್ತಿಗಳು ತಾವಾಗಬೇಕೆಂದರು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ  ತಮ್ಮ ಮಾತಾಪಿತೃರ ಸವಿನೆನಪಿಗೆ 2 ಲಕ್ಷರೂಗಳನ್ನು ಜಂಗಮ ಶ್ರೋಯೋಭಿವೃದ್ಧಿ ಸಂಘಕ್ಕೆ ನೀಡಿದ್ದಾರೆ. 10 ಲಕ್ಷ ರೂಗಳನ್ನು ಸಮುದಾಯ ಭವನಕ್ಕೆ ಸರ್ಕಾರ ಅನುದಾನದಲ್ಲಿ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆಂದು ಸಂಘದ ಉಪಾಧ್ಯಕ್ಷ ಸೋಮಶೇಖರಯ್ಯ ಹಿರೇಮಠ ಹೇಳಿದರು.

ಇದನ್ನೂ ಓದಿ:ಹೌ ಟು ಮೇಕ್ ಮನಿ ಎಂದು ಇಟ್ಟರು ಗುನ್ನಾ! ನಿಮ್ಮ ವಾಟ್ಸ್ ಆ್ಯಪ್ ಮೂಲಕ ಲಕ್ಷಕ್ಕೆ ಹೊಡಿಬಹುದು ಕನ್ನಾ!

ಜಂಗಮ ಶ್ರೋಯೋಭಿವೃದ್ಧಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮಹಿಳಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳು, ಪುರಸಭೆ ಚುನಾಯಿತ ಸದಸ್ಯರು, ಸಾಧಕರು, ತಾಲೂಕಿನ ಸುತ್ತಮುತ್ತಲಿನ ಗಾಮಗಳ ಜಂಗಮ ಮುಖಂಡರು, ಪ್ರತಿಭಾವಂತ ವಿದ್ಯಾರ್ಥಿಗಳು, ರಾಜಕೀಯ ಮುಖಂಡರನ್ನು ಸನ್ಮಾನಿಸಿ ಗೌರವಸಿದರು. ಪ್ರಾಸ್ತವಿಕವಾಗಿ ಮಹಾಂತೇಶ ವಸ್ತ್ರದ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜೆಡಿಎಸ್ ಮುಖಂಡ ಬಸವರಾಜ ಗಂಗಾಧರಮಠ, ಪಿಎಸ್ಆಯ್ ಎಲ್.ಕೆ.ಜ್ಯೂಲಿಕಟ್ಟಿ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಭವ್ಯಮೆರವಣಿಗೆಯನ್ನು  ರಾಜ್ಯ ಯುವ ಜಂಗಮ ಸಮಾಜ ಘಟಕ ಅಧ್ಯಕ್ಷ ಬಂಗಾರೇಶ ಹಿರೇಮಠ ಚಾಲನೆ ನೀಡಿದರು. ವಿವಿಧ ವಾದ್ಯ ಮಜಲು, ಭಜನೆ, ಡೊಳ್ಳು ಭಕ್ತರ ಜಯಘೋಷದೊಂದಿಗೆ ಜರುಗಿತು.

ಇದನ್ನೂ ಓದಿ:ನೈಋತ್ಯ ರೈಲ್ವೆ ಭರ್ಜರಿ ಗಳಿಕೆ; ಸರಕು ಸಾಗಾಣಿಕೆಯಿಂದ ₹ 4160 ಕೋಟಿ ಗಳಿಕೆ

ಈ ಸಂದರ್ಭದಲ್ಲಿ ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಶಿವಯೋಗಿ ಸುರಕೋಡ, ಶಶೀಧರ ಮುಖಂಡಮಠ, ಜಗದೀಶ ಅಬ್ಬಿಗೇರಿ ಮಠ, ಪ್ರಕಾಶ ಕರವೀರಮಠ, ನಿಜಗುಣೆಪ್ಪ ಅಕ್ಕಿ, ಈಶ್ವರಯ್ಯ ಪುರದೀರಪ್ಪನಮಠ, ಭಾರತಿ ಸುರೇಶ ಹಿರೇಮಠ, ಜಂಗಮ ಸಮಾಜದ ಭಾಂದವರು, ಭಕ್ತರು, ಉಪಸ್ಥಿತರಿದ್ದರು. ವಿ.ಎಮ್.ಹಿರೇಮಠ ಸ್ವಾಗತಕೋರಿ,  ಎಮ್.ವಿ.ಮುತ್ತಲಗೇರಿ ನಿರೂಪಿಸಿ, ಈರಣ್ಣಾ ಕರವೀರಮಠ ವಂದಿಸಿದರು.  

ಇದನ್ನೂ ಓದಿ:ಬ್ರಾಹ್ಮಣ ವಧು ವರರ ಸಮಾವೇಶ!! ಎಲ್ಲಿ? ಯಾವಾಗ?ಇಲ್ಲಿದೆ ಡಿಟೈಲ್ಸ್

Related posts

ಇಂದಿನಿಂದ ಜಿಲ್ಲಾದ್ಯಂತ 15 ರಿಂದ 18 ವರ್ಷದೊಳಗಿನವರಿಗೆ ಕೋವಿಡ್-19 ಲಸಿಕೆ

eNEWS LAND Team

ಅಣ್ಣಿಗೇರಿ ಪುರಸಭೆ ಚುನಾವಣೆಗೆ ಮಹೂರ್ತ ಫಿಕ್ಸ್.

eNEWS LAND Team

ಸಾವರ್ಕರ್ ವಿಚಾರಗಳು ಅಮರ : ಸಿಎಂ ಬೊಮ್ಮಾಯಿ

eNEWS LAND Team