22 C
Hubli
ಅಕ್ಟೋಬರ್ 1, 2023
eNews Land
ಸುದ್ದಿ

ಜೆಡಿಎಸ್ ಪಕ್ಷದ ಪ್ರತಿಭಟನೆಗೆ ಮಣಿದ ಸರ್ಕಾರ:ಪ್ರಕಾಶ ಅಂಗಡಿ

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಬಸ್ ನಿಲ್ದಾಣ ಹತ್ತಿರ ವಿವೇಕಾನಂದ ವೃತ್ತದ ಆವರಣದಲ್ಲಿ ಆಯೋಜಿಸಿದ ರೈತ ಹೋರಾಟ ಸತ್ಯಾಗ್ರಹ ವೇದಿಕೆಯಲ್ಲಿ ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ, ಫೆ.14ರಂದು ಬೆಳಿಗ್ಗೆ 10 ಗಂಟೆಗೆ ಅಮರಣ ಉಪವಾಸ ಸತ್ಯಾಗ್ರಹ ಕೈಗೊಂಡ ಜೆಡಿಎಸ್ ಧಾ.ಜಿ.ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ, ಶಲವಡಿ ಎ.ಪಿ.ಎಮ್.ಸಿ.ಸದಸ್ಯ ಶ್ರೀಶೈಲಪ್ಪ ಮೂಲಮನಿ ಅವರಿಗೆ ಎಳೆನೀರು ಕುಡಿಸಿ, ಕೇಂದ್ರ, ಹಾಗೂ ರಾಜ್ಯ ಸರ್ಕಾರ ಕಡಲೆ ಖರೀದಿ ಕೇಂದ್ರ ತಕ್ಷಣವೇ ತೆರೆಯಲು ಫೆ.14 ರಂದು ರಾತ್ರಿ ಹೊರಡಿಸಿದ ಆದೇಶ ಪ್ರತಿಯನ್ನು ತಹಶೀಲ್ದಾರ ಮಂಜುನಾಥ ಅಮಾಸಿ ಫೆ.15 ರಂದು ನೀಡಿದ ನಂತರ ಮಧ್ಯಾಹ್ನ 1.00 ಗಂಟೆಗೆ ಅಮರಣ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.
ಜೆಡಿಎಸ್ ಮುಖಂಡ ಪ್ರಕಾಶ ಅಂಗಡಿ ಮಾತನಾಡಿ, ರೈತರ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದಾಗ, ರೈತರ ಬೆಳೆಗಳು ಕಟಾವು ಆಗಿ, ಒಕ್ಕಲಿ ಮಾಡಿ, 15 ದಿನದೊಳಗೆ ಬೆಂಬಲ ಬೆಲೆ ನಿಗಧಿಗೊಳಿಸಿ, ನೊಂದಣಿ ಹಾಗೂ ಖರೀಧಿಸುವುದು ಕಾನೂನು ಕ್ರಮವಾಗಿದೆ. ಆ ಪ್ರಕ್ರಿಯೇ ಪ್ರಾರಂಭಿಸದೇ ಸರ್ಕಾರ ರೈತ ವಿರೋಧಿ ನೀತಿ ತಾಳಿದೆ. ಅಧ್ದರಿಂದ ನಮ್ಮ ಪಕ್ಷದ ಪ್ರತಿಭಟನೆಗೆ ಸರ್ಕಾರ ಮಣಿದು ಬೆಂಬಲ ಬೆಲೆ ನೊಂದಣಿ ಹಾಗೂ ಖರೀಧಿ ಕ್ರಿಯೆ ಪ್ರಾರಂಭಿಸಿದ್ದು ನಮ್ಮ ಪ್ರತಿಭಟನೆಗೆ ಸಂದ ಜಯವಾಗಿದೆಂದರು.ರೈತಪರವೆoದು ಸರ್ಕಾರಗಳು ಹೇಳುತಿವೆ ವಿನಹ: ಸಕಾಲಕ್ಕೆ ರೈತರ ಕಷ್ಟಗಳನ್ನು ನಿಭಾಯಿಸುವಲ್ಲಿ ವಿಫಲವಾಗಿವೆ.ಎಂದು ಆರೋಪಿಸಿದರು. ರೈತರು ಬೆಳೆ ಬರುವ ಒಂದು ತಿಂಗಳ ಪೂರ್ವದಲ್ಲಿ ಬೆಂಬಲ ಬೆಲೆ ನೊಂದಣಿ ಕ್ರಿಯೆ ಆರಂಭಿಸಲು ಜೆಡಿಎಸ್ ಪಕ್ಷ ಆಗ್ರಹಿಸುತ್ತದೆ. ಈಗಾಗಲೇ ೪೦% ರೈತರು ಕಡಲೆಕಾಳು ಖಾಸಗಿವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದು, ತಕ್ಷಣವೇ ಇಂದಿನಿoದ ನೊಂದಣಿ ಕಾರ್ಯ ಕೈಗೊಳ್ಳಬೇಕೆಂದರು. ರೈತರ ಹೋರಾಟದ ಅಮರಣ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ ಪಕ್ಷಾತೀತ ರೈತಮುಖಂಡರು, ಸಹಕಾರ ನೀಡಿದ ಜಿಲ್ಲಾಡಳಿತ, ತಾಲೂಕಾಡಳಿತ, ಪೋಲಿಸ್,ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ. ಕೃತಜ್ಞತೆ ಸಲ್ಲಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆ ಕಡಲೆ ಖರೀದಿ ಕೇಂದ್ರ ತೆರೆಯಲು ಆದೇಶ ಹೊರಡಿಸಿದ್ದು, ಕ್ವಿಂಟಲ್‌ಗೆ ₹5230 ರೂಗಳು ಬೆಂಬಲ ಬೆಲೆ ನಿಗಧಿಪಡಿಸಿದ್ದು, ನೊಂದಣಿ ಕಾಲಾವಧಿ ೪೫ ದಿನಗಳು ಹಾಗೂ ಖರೀದಿ ಅವಧಿ 90 ದಿನಗಳಿದ್ದು, ಪ್ರತಿ ಎಕರೆಗೆ ರೈತರಿಂದ 4 ರಿಂದ 15 ಕ್ವಿಂಟಲ್ ಎಪ್.ಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿಸುವಲ್ಲಿ ಮಾರ್ಗಸೂಚಿ ನೀಡಿದೆ. ಅತಿವೃಷ್ಟಿ ಮಳೆಯಿಂದ ಬೆಳೆಹಾನಿಯಾಗಿ ಕಡಲೆ ಬೆಳೆ ಮಾತ್ರ ರೈತರ ಕೈಗುಟುಕುವಂತಾಗಿದ್ದು, ರೈತರ ಕಡಲೆಕಾಳು ೨೫ ಕ್ವಿಂಟಲ್ ಖರೀದಿಸಬೇಕೆಂದು ಜೆಡಿಎಸ್ ಮುಖಂಡ ಬಿಬಿ.ಗಂಗಾಧರಮಠ ಸರ್ಕಾರಕ್ಕೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ದಾ.ಜಿ.ಅಧ್ಯಕ್ಷ ಬಿ.ಬಿ.ಗಂಗಾಧರಮಠ, ,ಪಿಎಸ್.ಆಯ್. ಎಲ್.ಕೆ.ಜ್ಯೂಲಿಕಟ್ಟಿ ನಿಂಗಪ್ಪ ಬಡೇಪ್ಪನವರ, ಶಿವಶಂಕರ ಕಲ್ಲೂರ, ವಿರೇಶ ಶಾನಭೋಗರ, ಬಸವರಾಜ ಹಾದಿಮನಿ, ಚಂಬಣ್ಣ ಹಾಳದೋಟರ, ಆಯ್.ಜಿ.ಸಮುದ್ರಿ, ಭಗವಂತ ಪುಟ್ಟಣ್ಣವರ, ಗುರುಸಿದ್ದಪ್ಪ ಕೊಪ್ಪದ, ಶೇಖಪ್ಪ ಸೊಟಕನಾಳ, ನಾರಾಯಣ ಮಾಡೊಳ್ಳಿ, ಬಸಪ್ಪ ಕರ್ಲವಾಡ, ಮಲ್ಲಪ್ಪ ಬ್ಯಾಹಟ್ಟಿ, ಎಲ್ಲಪ್ಪ ಮೊರಬಸಿ, ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತ ಮುಖಂಡರು ಉಪಸ್ಥಿತರಿದ್ದರು.

 

Related posts

ಜೀವನ ನೀರ ಮೇಲಿನ ಗುಳ್ಳೆ ! ಎಲ್ಲಾ ಭಗವಂತನ ಇಚ್ಛೆ

eNEWS LAND Team

ಅಣ್ಣಿಗೇರಿಲಿ ಅನ್ನದಾತನ ಆತ್ಮಹತ್ಯೆ; ಸಾಯುವಂಥದ್ದು ಏನಾಗಿತ್ತು?

eNewsLand Team

ಅಣ್ಣಿಗೇರಿ ಪುರಸಭೆ ಚುನಾವಣೆಗೆ 37 ನಾಮಪತ್ರ ಸಲ್ಲಿಕೆ.

eNEWS LAND Team