23 C
Hubli
ಜುಲೈ 23, 2024
eNews Land
ಸುದ್ದಿ

ಹೊಸ ನಾಯಕತ್ವದಲ್ಲಿ ಕಮಾಲ್ ಮಾಡುತ್ತಾ ಆರ್’ಸಿಬಿ??

ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್

ಎಂಟು ವರ್ಷಗಳ ನಂತರ ಹೊಸ ನಾಯಕತ್ವದಲ್ಲಿ ಚೊಚ್ಚಲ ಕಪ್ ಗೆಲ್ಲುವ ಉತ್ಸಾಹದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ಎದುರಿಸುತ್ತಿದ್ದು ವಿಜಯದ ಆರಂಭದ ನಿರೀಕ್ಷೆಯಲ್ಲಿದೆ.

ನಾಯಕತ್ವ ತ್ಯಜಿಸಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲು ಸಿದ್ಧರಾಗಿರುವ ವಿರಾಟ್ ಕೊಹ್ಲಿ ತಮ್ಮ ಹಿಂದಿನ ಲಯಕ್ಕೆ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ. ಫಾಫ್‌ ಡುಪ್ಲೆಸಿ ಹೊಸ‌ ನಾಯಕನಾಗಿ ನೇಮಕಗೊಂಡಿದ್ದರೂ, ಕೊಹ್ಲಿಯ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ.

ಕರ್ನಾಟಕದ ತಾರಾ ಆಟಗಾರ ಮಯಾಂಕ್ ಅಗರ ವಾಲ್ ಮುಂದಾಳತ್ವದ ಪಂಜಾಬ್ ಕಿಂಗ್ಸ್, ಆರ್‌ಸಿಬಿಗೆ ಮೊದಲ ಎದುರಾಳಿ, ಮೊದಲ ಬಾರಿಗೆ ಮಯಾಂಕ್ ಪೂರ್ಣಾವಧಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ತಮ್ಮ ಸಾಮರ್ಥ್ಯ  ಸಾಬೀತುಪಡಿಸಲು ಕಾಯುುುತ್ತಿದ್ದಾರೆ.

2016ರ ಐಪಿಎಲ್‌ನಲ್ಲಿ 900ಕ್ಕೂ ಹೆಚ್ಚು ರನ್ ಗಳಿಸಿದ್ದ ಕೊಹ್ಲಿ ಮತ್ತೊಮ್ಮೆ ಅಂಥದ್ದೇ ಪ್ರದರ್ಶನ ತೋರಿ ಟೀಕಾಕಾರರ ಬಾಯಿ ಮುಚ್ಚಿಸಲು ಕಾಯುತ್ತಿದ್ದಾರೆ. ಆರ್ ಸಿಬಿ ಈ ಬಾರಿ ಹೊಸ ಸಂಯೋಜನೆಯೊಂದಿಗೆ ಆಡಲಿದೆ. ಯುವ ಆಟಗಾರರಾದ ಅನುಜ್ ರಾವತ್, ಸುಯತ್ ಪ್ರಭುದೇಸಾಯಿ, ಮಹಿಪಾಲ್ ಲೊಮಾರ್, ಶರ್ಫಾನೆ ರುಥರ್‌ಫೋರ್ಡ್, ಫಿನ್ ಆಲೆನ್ ಅವಕಾಶಗಳಿಗೆ ಕಾಯುತ್ತಿದ್ದಾರೆ. ಅನುಭವಿಗಳಾದ ಡು ಪ್ಲೆಸಿ, ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್, ಡೇವಿಡ್ ವಿಲ್ಲಿ, ಸಿದ್ದಾರ್ಥ್ ಕೌಲ್, ಜೋಶ್ ಹೇಜಲ್‌ವುಡ್, ಹರ್ಷಲ್, ಹಸರಂಗ, ಮೊಹಮದ್ ಸಿರಾಜ್‌ರ ಬಲವೂ ಆರ್ ಸಿಬಿಗಿದೆ. ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಜೋಶ್ ಹೇಜಲ್‌ವುಡ್ ಹಾಗೂ ಜೇಸನ್ ಬೆಹ್ರೆನ್‌ಡೂರ್ಫ್ ಮೊದಲ 2 ಪಂದ್ಯಗಳಿಗೆ ಲಭ್ಯರಿಲ್ಲ.

ಮತ್ತೊಂದೆಡೆ ಪಂಜಾಬ್‌ಗೆ ಮೊದಲ ಪಂದ್ಯದಲ್ಲಿ ಜಾನಿ ಬೇರ್‌ಸ್ಟೋವ್, ಕಗಿಸೋ ರಬಾಡ ಅವರ ಅನುಪಸ್ಥಿತಿ ಕಾಡಲಿದೆ. ಬೇರ್‌ಸ್ಟೋವ್ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದು, ರಬಾಡ ಈಗಷ್ಟೇ ಬಾಂಗ್ಲಾದೇಶ ಲ್‌ವುಡ್ ವಿರುದ್ಧದ ಸರಣಿ ಮುಗಿಸಿದ್ದಾರೆ.

ಹೀಗಾಗಿ ತಂಡ ತನ್ನ ಹಿರಿಯ ಶಿಖರ್ ಧವನ್, ಇಂಗ್ಲೆಂಡ್ ಅಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್, ರಲ್ಲಿ ಜಾನಿ 9 ಕೋಟಿ ರು.ಗೆ ಬಿಕರಿಯಾಗಿದ್ದ ಆಕ್ರೌಂಡರ್ ಶಾರುಖ್ ಅನುಪಸ್ಥಿತಿ ಖಾನ್ ಮೇಲೆ ಹೆಚ್ಚು ನಿರೀಕ್ಷೆ ಇರಿಸಿದೆ.

Related posts

ಸಿಡಿಎಸ್ ರಾವತ್ ‌ದುರ್ಮರಣ; Mi-17V-5 ಚಾಪರ್ ಬಗ್ಗೆ ನಿಮಗೆಷ್ಟು ಗೊತ್ತು?

eNewsLand Team

ಚಕ್ಕಡಿ ರಸ್ತೆ ಅಭಿವೃದ್ಧಿಗೆ ಶಾಸಕ ಎನ್.ಎಚ್.ಕೋನರಡ್ಡಿ ಚಾಲನೆ

eNewsLand Team

ನೇಕಾರರ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ ಹಾಗೂ ದರ ಒದಗಿಸಲು ಕ್ರಮ: ಸಿಎಂ ಬೊಮ್ಮಾಯಿ

eNEWS LAND Team