25 C
Hubli
ಮೇ 25, 2024
eNews Land
ಸುದ್ದಿ

ಧಾರಾಕಾರ ಮಳೆ; ಉತ್ತರ ಕನ್ನಡ, ಉಡುಪಿ ಶಾಲೆಗೆ‌ ರಜೆ, ಕೊಡಗಲ್ಲಿ ಗುಡ್ಡ ಕುಸಿತ

ಇಎನ್ಎಲ್ ಬೆಂಗಳೂರು

ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಹವಾಮಾನ ಇಲಾಖಾ ಮುನ್ಸೂಚನೆ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಉತ್ತರ ಕನ್ನಡದಾದ್ಯಂತ ಸೋಮವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ. ಮಂಗಳವಾರ ಬೆಳಿಗ್ಗೆಯೂ ದಟ್ಟವಾಗಿ ಮೋಡ ಕವಿದಿದ್ದು, ವರ್ಷಧಾರೆ ಮುಂದುವರಿದಿದೆ. ಹಲವು ನದಿಗಳು ಹಾಗೂ ಹಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಶಿರಸಿಯಲ್ಲಿ ರಸ್ತೆ ಮೇಲೆ ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.

ಇನ್ನು, ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿರುವ ಕಾರಣ ಎಲ್ಲ ಶಾಲಾ ಕಾಲೇಜುಗಳಿಗೆ, ಅಂಗನವಾಡಿಗಳಿಗೆ ಮಂಗಳವಾರ ರಜೆ ನೀಡಲಾಗಿದೆ.
ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಎಡೆಬಿಡದೆ ಮಳೆ ಸುರಿದ ಪರಿಣಾಮ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಇಡೀ ಧಾರಾಕಾರ ಮಳೆಯಾಗಿದ್ದು, ಮಂಗಳವಾರವೂ ಮಳೆ ಮುಂದುವರಿದಿದೆ.
ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜು ಹಾಗಬೆಂಗಳೂರು
ಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ರಜೆ ಘೋಷಣೆ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದೆ. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೊಣ್ಣಂಗೇರಿಯಲ್ಲಿ ಬರೆ ಕುಸಿತ. ರಸ್ತೆ ಸಂಚಾರಕ್ಕೆ‌ ಸಮಸ್ಯೆ. ಇನ್ನಷ್ಟು ಕುಸಿಯುವ‌ ಭೀತಿ ಉಂಟಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲೂ ಆರಿದ್ರಾ ಮಳೆ ಎಡೆಬಿಡದೆ ಸುರಿಯುತ್ತಿದೆ. ತುಂಗಾ ಡ್ಯಾಮ್ ಪ್ರದೇಶದಲ್ಲಿ ಒಳಹರಿವು ಹೆಚ್ಚಳವಾಗಿದೆ. ಸೋಮವಾರ ತಡರಾತ್ರಿಯಿಂದಲೇ ಡ್ಯಾಮ್ ನಿಂದ 44,000 ಕ್ಯೂ ಸೆಕ್ ನೀರು, ಹೊರಕ್ಕೆಜಿಲ್ಲೆಯಲ್ಲೂ

ಧಾರವಾಡ ಜಿಲ್ಲೆಯಲ್ಲೂ ಸೋಮವಾರ ತಡರಾತ್ರಿಯಿಂದ ಮಳೆ ಮುಂದುವರಿದಿದೆ. ನವಲಗುಂದ, ಅಣ್ಣಿಗೇರಿ, ಕುಂದಗೋಳ ತಾಲೂಕಿನ ಹಲವೆಡೆ ಮಳೆ ಸತತವಾಗಿ ಸುರಿಯುತ್ತಿದೆ. ಬೆಣ್ಣೆ ಹಳ್ಳ, ರಾಡಿ ಹಳ್ಳ, ತುಪರಿ ಹಳ್ಳ ಉಕ್ಕಿ ಹರಿಯುವ, ಜಮೀನು ಜಲಾವೃತ ಆಗುವ ಆತಂಕ ಎದುರಾಗಿದೆ.

ಇದನ್ನು ಓದಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಭೀಕರ ಹತ್ಯೆ: ಲವ್ ಕಂ ರಾಜಕೀಯ ದ್ವೇಷ ಕಾರಣ ?

Related posts

ಸನ್ನಡತೆ; ಐದು ಜೈಲು ಹಕ್ಕಿಗಳೀಗ ಫ್ರೀ ಬರ್ಡ್ಸ್!! ಯಾರವರು??

eNewsLand Team

RUNNING OF SPECIAL TRAIN BETWEEN SIR M VISVESVARAYA TERMINAL, BENGALURU AND TIRUCHCHIRAPPALLI

eNEWS LAND Team

ಇ-ಶ್ರಮ್ ತಂತ್ರಾಂಶದ ಮೂಲಕ ಅಸಂಘಟಿತ ಕಾರ್ಮಿಕರ‌ ಮಾಹಿತಿ ಸಂಗ್ರಹಿಸಿ: ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ

eNEWS LAND Team