28.2 C
Hubli
ಜೂನ್ 29, 2022
eNews Land
ಸುದ್ದಿ

ನೈಋತ್ಯ ರೈಲ್ವೆ: ಯಾವ ರೈಲು ರದ್ದು? ಮಾರ್ಗ ಬದಲಾವಣೆ, ಇಲ್ಲಿದೆ ಮಾಹಿತಿ

Listen to this article

ಇಎನ್ಎಲ್ ಡೆಸ್ಕ್ : 

ರೈಲು ಸೇವೆಯ ರದ್ದತಿ

ಭಾರೀ ಮಳೆಯ ಕಾರಣ ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಲ್ಲಿ ರೈಲು ಮಾರ್ಗದ ತಾತ್ಕಾಲಿಕ ತಡೆಯ ನಿಮಿತ್ತ ದಿನಾಂಕ 24. 11. 2021ರ ರೈಲು ಸಂಖ್ಯೆ 15227 ಯಶವಂತಪುರ – ಮುಜಫರ್ಪುರ ಎಕ್ಸ್ ಪ್ರೆಸ್ ಸೇವೆಯನ್ನು ರದ್ದುಗೊಳಿಸಲಾಗಿದೆ

ರೈಲುಗಳ ನಿಯಂತ್ರಣ

ದಿನಾಂಕ 26. 11. 2021 ರಂದು ಬೆಂಗಳೂರು ವಿಭಾಗದ ಹೊಸೂರು ಭಾಗದಲ್ಲಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವ ನಿಮಿತ್ತ ರೈಲು ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಯನ್ನು ಮಾಡಲಾಗಿದೆ.

1. ರೈಲು ಸಂಖ್ಯೆ 06262 ಹೊಸೂರು – ಕೆಎಸ್ಆರ್ ಬೆಂಗಳೂರು ಮೆಮು ರೈಲನ್ನು ಬೈಯ್ಯಪ್ಪನಹಳ್ಳಿಯಲ್ಲಿ 20 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

2. ರೈಲು ಸಂಖ್ಯೆ 07315 ಯಶವಂತಪುರ – ಸೇಲಂ ಕಾಯ್ದಿರಿಸದ ವಿಶೇಷ ಪ್ಯಾಸೆಂಜರ್ ರೈಲನ್ನು
ಲೊಟ್ಟೆಗೊಲ್ಲಹಳ್ಳಿಯಲ್ಲಿ 30 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಹುಬ್ಬಳ್ಳಿಲಿ ಝೋಮ್ಯಾಟೊ, ಸ್ವಿಗ್ಗಿ ರೀತಿ ಮನೆಮನೆಗೆ ಊಟ ಪೂರೈಸಲಿದೆ ಡಬ್ಬಾವಾಲಾ

eNewsLand Team

ಹೊಸಪೇಟೆ ಯಾರ್ಡಲ್ಲಿ ರೈಲು ಅಪಘಾತವಾಯ್ತಾ? ಆಗಿದ್ದೇನು? ಅಷ್ಟೊಂದು ಸಿಬ್ಬಂದಿಯ ಕಾರ್ಯಾಚರಣೆ!

eNewsLand Team

ಚನ್ನಪಟ್ಟಣದ ಜೀಪು ಖರೀದಿಸಿದ ಸಿಎಂ ಬೊಮ್ಮಾಯಿ

eNewsLand Team