23 C
Hubli
ಸೆಪ್ಟೆಂಬರ್ 25, 2023
eNews Land
ಸುದ್ದಿ

ಉತ್ತಮ ಕೆಲಸ ಮಾಡಿದ್ದೀರಿ: ಪುರುಷೋತ್ತಮ

ಇಎನ್ಎಲ್ ಕಲಘಟಗಿ: ಇದು ಈ ವರ್ಷದ ಕೊನೆಯ ಸಭೆಯಾಗಿರುತ್ತದೆ. ಜನಪ್ರತಿನಿಧಿಗಳಿಲ್ಲದಿದ್ದರೂ ವಿಶೇಷ ಆಸಕ್ತಿ ವಹಿಸಿ ಉತ್ತಮ ಕೆಲಸ ಮಾಡಿದ್ದೀರಿ, ಕೋವಿಡ್ ಸಂದರ್ಭಗಳನ್ನು ಉತ್ತಮವಾಗಿ ನಿಭಾಯಿಸಿದ್ದೀರಿ ಎಂದು ಆಡಳಿತಾಧಿಕಾರಿಯಾಗಿದ್ದ ಪುರುಷೋತ್ತಮ ಹೇಳಿದರು.

ಇದನ್ನೂ ಓದಿ:ಇಂದು ಮಡಕಿಹೊನ್ನಿಹಳ್ಳಿಯಲ್ಲಿ ಕಲ್ಲು ಸಿಡಿ ಹೊಡೆಯುವ ಶಕ್ತಿ ಪ್ರದರ್ಶನ

ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿ ರೇಷ್ಮೆ ಇಲಾಖೆ ಅಧಿಕಾರಿಗೆ ತಮ್ಮ ಗುರಿಸಾಧನೆಗೆ 10 ಎಕರೆ ಇದ್ದು, 4 ಎಕರೆ ಮಾಡಿದ್ದೀರಿ, ಇನ್ನೂ ಹೆಚ್ಚಿನ ಆಸಕ್ತಿ ವಹಿಸಿ ರೈತರ ಮನ ಒಲಿಸಿ ಕ್ಷೇತ್ರ ವಿಸ್ತರಿಸಿರಿ ಎಂದರು. ಕೃಷಿ ಇಲಾಖೆ ಎನ್.ಎಫ್.ಕಟ್ಟೇಗೌಡ್ರ ಮಾತನಾಡಿ ರೈತರಿಗೆ ಬೆಳೆಹಾನಿಯನ್ನು ಸಮರ್ಪಕವಾಗಿ ರೈತರಿಗೆ ತಲುಪಿಸಿದ್ದೇವೆ, ತುಂತುರು ನೀರಾವರಿ, ಹನಿ ನೀರಾವರಿ, ಕೃಷಿ ಯಂತ್ರೋಪಕರಣಗಳನ್ನು ಸರ್ಕಾರ ನಿಗದಿಪಡಿಸಿದ ಗುರಿಯನ್ನು ತಲುಪಿಸಿದ್ದೇವೆ ಎಂದರು. ಸಹಾಯಕ ತೋಟಗಾರಿಕೆ ಅಧಿಕಾರಿ ಕಲ್ಲಪ್ಪ ಅಂಗಡಿ ರೈತರಿಗೆ ಸಂರಕ್ಷಿತ ಬೇಸಾಯ, ನರೇಗಾ ಪ್ರಗತಿ, ಇತ್ಯಾದಿ ಕುರಿತು ವಿವರಿಸಿದರು. ಆರೋಗ್ಯ ಇಲಾಖೆ ಡಾ.ಬಾಸೂರ ಮಾತನಾಡಿ 15 ರಿಂದ 17 ವರ್ಷದ ಮಕ್ಕಳಿಗೆ ಲಸಿಕಾ ಕಾರ್ಯಕ್ರಮವು ಶೇ 85% ಸಾಧಿಸಲಾಗಿದೆ ಎಂದರು.

ಇದನ್ನೂ ಓದಿ:ನೈಋತ್ಯ ರೈಲ್ವೆ ಭರ್ಜರಿ ಗಳಿಕೆ; ಸರಕು ಸಾಗಾಣಿಕೆಯಿಂದ ₹ 4160 ಕೋಟಿ ಗಳಿಕೆ

ಸಭೆಯ ನೇತೃತ್ವ ವಹಿಸಿದ್ದ ತಾಪಂ ಇ.ಓ. ಎಸ್.ಸಿ.ಮಠಪತಿ, ಮುಂದಿನ ಆರ್ಥಿಕ ವರ್ಷದ ಯೋಜನಾ ವರದಿಯನ್ನು ಅಚ್ಚುಕಟ್ಟಾಗಿ ತಯಾರಿಸಿ ಸಮರ್ಪಕವಾಗಿ ನಿರ್ವಹಿಸಿರಿ, ತಮ್ಮೆಲ್ಲರ ಸಹಕಾರದಿಂದ ಈ ಆರ್ಥಿಕ ವರ್ಷವು ಯಶಸ್ವಿಯಾಗಿದೆ ಎಂದರು. ಅರಣ್ಯ ಇಲಾಖೆ ಅಧಿಕಾರಿ ಶ್ರೀಕಾಂತ ಪಾಟೀಲ ಸೇರಿದಂತೆ ಎಲ್ಲ ಇಲಾಖೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಹೌ ಟು ಮೇಕ್ ಮನಿ ಎಂದು ಇಟ್ಟರು ಗುನ್ನಾ! ನಿಮ್ಮ ವಾಟ್ಸ್ ಆ್ಯಪ್ ಮೂಲಕ ಲಕ್ಷಕ್ಕೆ ಹೊಡಿಬಹುದು ಕನ್ನಾ!

Related posts

ಸಿದ್ದರಾಮಯ್ಯ‌ ಗಂಜಿಕೇಂದ್ರ ಹುಡುಕಿ ಹೊರಟಿದ್ದಾರೆ!; ಕೇಂದ್ರ ಸಚಿವ ಜೋಶಿ ಹೀಗೆ ಹೇಳಿದ್ಯಾಕೆ??

eNewsLand Team

ಹುಬ್ಬಳ್ಳಿ ಕಂಜಾರ ಬಾಟ್ ಮತ್ತು ಚಪ್ಪರಬಂದನಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

eNEWS LAND Team

ಇಎನ್ಎಲ್ ಬೆಳಗಿನ ಸಮಾಚಾರ

eNewsLand Team