24 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಹುಬ್ಬಳ್ಳಿ: ಪುನೀತ್ ರಾಜ್‍ಕುಮಾರಗೆ ಶ್ರದ್ಧಾಂಜಲಿ ಸಲ್ಲಿಸಲು 500ಕಿಮೀ ಓಡುತ್ತಿರುವ ದ್ರಾಕ್ಷಾಯಿಣಿ!

ಇಎನ್ಎಲ್ ಧಾರವಾಡ: ಪುನೀತ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು, ನೇತ್ರದಾನದ ಜಾಗೃತಿಗಾಗಿ ಸುಮಾರು 500 ಕಿಮೀ. ಓಟ ಆರಂಭಿಸಿರುವ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಸತ್ಕರಿಸಲಾಯಿತು.

ಮನಗುಂಡಿ ಗ್ರಾಮದಿಂದ ಬೆಂಗಳೂರಿನ
ಪುನೀತರಾಜಕುಮಾರ ಅವರ ಸಮಾಧಿ ಸ್ಥಳದವರೆಗೆ ಸುಧೀರ್ಘ ಓಟವನ್ನು ದ್ರಾಕ್ಷಾಯಿಣಿ ಸೋಮವಾರ ಆರಂಭಿಸಿದ್ದಾರೆ.
ಮಂಗಳವಾರ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಹಾಸಭಾ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಶಿಮರದ ಅವರ ನೇತೃತ್ವದಲ್ಲಿ ಶಾಲು-ಮಾಲೆ ಹಾಕಿ ಸತ್ಕರಿಸಿ, ಮಹಸಭಾದಿಂದ 10ಸಾವಿರ ರುಪಾಯಿಗಳನ್ನು ಪ್ರೋತ್ಸಾಹ ಧನ ನೀಡಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿದ ಗುರುರಾಜ ಹುಣಶಿಮರದ, ಮೂರು ಮಕ್ಕಳ ತಾಯಿ ದ್ರಾಕ್ಷಾಯಣಿ ಪಾಟೀಲ ಅವರ ಪುನೀತರ ಮೇಲಿನ ಅಭಿಮಾನ ಮತ್ತು ಓಟದ ಮೂಲಕ ಸಮಾಧಿ ತಲುಪುವ
ಛಲ ಶ್ಲಾಘನೀಯ ಎಂದರು.

ದ್ರಾಕ್ಷಾಯಿಣಿ ಪಾಟೀಲ ಮಾತನಾಡಿ, ಪುನೀತರಾಜಕುಮಾರ ಅವರ ಅಭಿಮಾನಿಯಾಗಿ ಬೆಳೆದಿರುವೆ. ಅವರ ಹಠಾತ್ ನಿಧನದಿಂದ ಬಹಳ ದುಃಖವಾಗಿದೆ. ಅವರು ಮಾಡಿದ ಸಮಾಜ ಸೇವೆಗಳಿಂದ ಪ್ರೇರೇಪಿತಳಾಗಿ ನೇತ್ರದಾನ ಮತ್ತು ರಕ್ತದಾನಗಳನ್ನು ಪ್ರೋತ್ಸಾಹಿಸಲು ಮತ್ತು ನನ್ನ ಕ್ರೀಡೆಯ ಮೂಲಕವೇ ಅಗಲಿದ ಪುನೀತವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದರು.

ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ್, ಶಶಿ ಡಂಗನವರ,ಮೈಲಾರ ಉಪ್ಪಿನ, ಬಸವರಾಜ ಸಗರದ, ಪ್ರಭು ಚೌಟೆ, ತುಳಸಿಕಾಂತ ಖೋಡೆ ಇತರರು ಉಪಸ್ಥಿತರಿದ್ದರು.

Related posts

ಕೆಎಸ್’ನ ಸಾಹಿತ್ಯ ಪ್ರಶಸ್ತಿ,, ಕಾವ್ಯಗಾಯನ ಪ್ರಶಸ್ತಿ ಪ್ರಕಟ

eNewsLand Team

ಧಾರವಾಡ ಜಿಲ್ಲೆಯ ವನಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಗ್ರಾಮ  ವಾಸ್ತವ್ಯ

eNEWS LAND Team

ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮಾ ಅದ್ಧೂರಿ ಆಚರಣೆ

eNEWS LAND Team