23 C
Hubli
ಸೆಪ್ಟೆಂಬರ್ 25, 2023
eNews Land
ಸುದ್ದಿ

ಪರಿಸರ ರಕ್ಷಿಸೋಣ : ಟಿಎಂಸಿ ಮುಖ್ಯಾಧಿಕಾರಿ ಗದ್ದಿಗೌಡ್ರ

ಇಎನ್ಎಲ್ ಕಲಘಟಗಿ:
ಜನರಿಗೆ ಅರಿವು ಮೂಡಿಸೋಣ ಅದರೊಂದಿಗೆ ಕಲಘಟಗಿ ಪಟ್ಟಣವನ್ನು ಮಾದರಿ ಪಟ್ಟಣ ಪಂಚಾಯತಿಯಾಗಿ ಮಾಡೋಣ ಎಂದು ಪ.ಪಂ.ಮುಖ್ಯಾಧಿಕಾರಿಯಾದ  ವೈ.ಜಿ.ಗದ್ದಿಗೌಡ್ರ ಹೇಳಿದರು. ಪಟ್ಟಣ ಪಂಚಾಯತಿಯ ಸಭಾ ಭವನದಲ್ಲಿ ಜರುಗಿದ 2022-23 ರ ಆಯ-ವ್ಯಯ ಪತ್ರಿಕೆ ತಯಾರಿಕೆಯ ಪೂರ್ವ ಸಮಾಲೋಚನೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿ ಘನತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದ್ದು, ಹಸಿಕಸ-ಒಣಕಸ ಬೇರ್ಪಡಿಸಲು ಇನ್ನೂ ಪ್ರಯತ್ನಿಸಬೇಕಾಗಿದೆ. ಸದ್ಯಕ್ಕೆ ಕಾರ್ಮಿಕರೇ ಈ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇಲ್ಲದಿದ್ದಲ್ಲಿ ಇದರಿಂದ ಪರಿಸರ ರಕ್ಷಣೆ ಹಾಳಾಗಿ ಅಂತರ್ಜಲಗಳು ವಿಷಪೂರಿತವಾಗುತ್ತವೆ.
ಇದರಿಂದ ಹುಟ್ಟುವ ಮಕ್ಕಳಲ್ಲಿ ಅಂಗವಿಕಲತೆ ಹೆಚ್ಚಾಗುತ್ತದೆ. ರೋಗಗಳು ಹೆಚ್ಚಾಗುತ್ತವೆ. ಎಲ್ಲರೂ ಸೇರಿ ಪರಿಸರವನ್ನು ರಕ್ಷಿಸೋಣ, ಓಮಿಕ್ರಾನ್ ಹಾವಳಿ ಹೆಚ್ಚಾಗಿದ್ದು, ವಾರಾಂತ್ಯದ ಕರ್ಫ್ಯೂ ಬಗ್ಗೆ ಎಚ್ಚರ ವಹಿಸಿರಿ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಗೌಳಿ, ಹಳ್ಳಿಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಪಟ್ಟಣದ ಅಭಿವೃದ್ಧಿಗೆ ನಾವು ಶ್ರಮಿಸಬೇಕಾಗಿದೆ. ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ. ಕಲಘಟಗಿ ನಂಜುoಡಪ್ಪ ವರದಿಯಂತೆ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕೋಣ ಎಂದರು. 
ಈ ಸಂದರ್ಭದಲ್ಲಿ ಸರ್ಕಾರವು ನಾಮನಿರ್ದೇಶನ ಮಾಡಿದ ಸದಾನಂದ ಚಿಂತಾಮಣಿ, ರಾಕೇಶ್ ಪದ್ಮರಾಜ, ಮಂಜುಳಾ ನಾಯಕ, ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷೆ ಅನಸೂಯಾ ಹೆಬ್ಬಳ್ಳಿಮಠ, ಯಲ್ಲವ್ವ ಶಿಗ್ಲಿ, ನಿಂಗಪ್ಪ ಹರಪ್ಪನಹಳ್ಳಿ, ಕವಿತಾ ಶಿರಸಂಗಿ, ಕೃಷ್ಣ ಲಮಾಣಿ, ಶಾಂತಾ ರಾಠೋಡ, ಬಸವರಾಜ ಕಡ್ಲಾಸ್ಕರ್, ವೃಷಭೇಂದ್ರ ಪಟ್ಟಣಶೆಟ್ಟಿ, ಶಕುಂತಲ ಬೋಳಾರ, ಕಲ್ಮೇಶ ಬೆಣ್ಣೆ, ಕೃಷ್ಣಾಜಿ ತಹಶೀಲದಾರ್, ಲಕ್ಷ್ಮಣ ಬೆಟಗೇರಿ, ಸುನೀಲ್ ಗಬ್ಬೂರ, ಲಕ್ಷ್ಮಿ ಪಾಲ್ಕರ, ನಾರಾಯಣ ವಾಘ್ಮೋಡೆ, ಮಾಲಾ ಲಮಾಣಿ, ಮಂಜುನಾಥ ಸಾಳೊಂಕೆ, ಶರಣಪ್ಪ ಉಣಕಲ್, ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಪರಶುರಾಮ ಹುಲಿಹೊಂಡ, ಮುಂತಾದವರಿದ್ದರು.

Related posts

SOUTH WESTERN RAILWAY SERVICE CANCELLATION

eNEWS LAND Team

ಮಳೆಗಾಲ ಪೂರ್ವದಲ್ಲಿ ಎಲ್ಲ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ; ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗದಂತೆ ಮುಂಜಾಗ್ರತೆ ವಹಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರವಿಕುಮಾರ ಸುರಪುರ

eNEWS LAND Team

ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ: ಪಿ.ಎಸ್. ವಸ್ತ್ರದ

eNEWS LAND Team