35 C
Hubli
ಮಾರ್ಚ್ 19, 2024
eNews Land
ಸುದ್ದಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಆಡಳಿತದಲ್ಲಿ ದೇಶದ ಅಭಿವೃದ್ಧಿ ಉತ್ತುಂಗಕ್ಕೆ ಏರಲಿ: ಸಿಎಂ ಬೊಮ್ಮಾಯಿ

ಇಎನ್ಎಲ್ ಬೆಂಗಳೂರು: ಮುಂಬರುವ ದಿನಗಳಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕರ್ನಾಟಕದ ಜೊತೆಗೆ ಅನ್ಯೋನ್ಯ ಸಂಬಂಧವನ್ನು ಹೊಂದಿ, ಅವರ ಆಡಳಿತ ಕಾಲದಲ್ಲಿ ದೇಶ ಅಭಿವೃದ್ಧಿಯ ಉತ್ತುಂಗಕ್ಕೇರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ರಾಷ್ಟ್ರಪತಿ ಚುನಾವಣೆಯಂದು ಪ್ರಜಾಪ್ರಭುತ್ವ ಗೆದ್ದಿದೆ. ಭಾರತದ ಅತ್ಯಂತ ಉನ್ನತವಾದ ಸ್ಥಾನ ರಾಷ್ಟ್ರಪತಿ ಸ್ಥಾನ. ಆ ಸ್ಥಾನಕ್ಕೆ ಹಿಂದುಳಿದ ಪ್ರದೇಶದಿಂದ ಬಂದ ಒಬ್ಬ ಮಹಿಳೆ ಅತ್ಯುನ್ನತ ಹುದ್ದೆಗೇರುವುದು ಪ್ರಜಾಪ್ರಭುತ್ವದ ಶಕ್ತಿ. ಸಮಾಜದ ಕಟ್ಟ ಕಡೆಯ ವರ್ಗದವರಿಗೂ ಕೂಡ ಈ ದೇಶದ ಆಡಳಿತದಲ್ಲಿ ಅವಕಾಶವಿದೆ ಎನ್ನುವುದನ್ನು ಚುನಾವಣೆ ತೋರಿಸುತ್ತದೆ ಎಂದರು.

ನಮ್ಮ ಪ್ರಧಾನಮಂತ್ರಿ ನರೇಂದ್ರಮೋದಿಯವರ ನಿರ್ಣಯ, ಪಕ್ಷದ ಅಧಕ್ಷರಾದ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರ ಸರ್ವ ರೀತಿಯ ಪ್ರಯತ್ನ ಇದಕ್ಕೆ ಕಾರಣ. ನಿರೀಕ್ಷೆಗಿಂತ ಹೆಚ್ಚಿನ ಮತ ಬಂದಿವೆ. ಬಿಜೆಪಿ , ಎನ್.ಡಿ.ಎ ಪಕ್ಷಗಳಲ್ಲದೆ ವಿರೋಧ ಪಕ್ಷಗಳು ಕೂಡ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಈ ಉನ್ನತ ಸ್ಥಾನ ಸಿಗಬೇಕೆನ್ನುವುದನ್ನು ಬಹಿರಂಗವಾಗಿ ಹೇಳಿವೆ. ರಾಜಕೀಯವಾಗಿ ವಿಭಿನ್ನ ನಿಲುವು ಮತ್ತು ತತ್ವಗಳಿರುವ ಪಕ್ಷಗಳೂ ಕೂಡ ಒಂದಾಗಿರುವದು, ಅವರ ವ್ಯಕ್ತಿತ್ವಕ್ಕಾಗಿ. ಸುದೀರ್ಘ ಆಡಳಿತದ ಅನುಭವವಿದೆ.
ಮುನಿಸಿಪಾಲಿಟಿ ಅಧ್ಯಕ್ಷರಾಗಿ, ಶಾಸಕರಾಗಿ, ಮಂತ್ರಿಗಳಾಗಿ ಹಾಗೂ ರಾಜ್ಯಪಾಲರಾಗಿ ಯಶಸ್ವಿಯಾಗಿ ಕೆಲಸ ಮಾಡಿದ ಅನುಭವ ಎಲ್ಲರಿಗೂ ಮೆಚ್ಚುಗೆಯಾಗಿದೆ. ಕೆಲವೇ ಕೆಲವು ಪಕ್ಷಗಳನ್ನು ಬಿಟ್ಟರೆ ಬಹುತೇಕವಾಗಿ ಎಲ್ಲರೂ ಬೆಂಬಲವ ನೀಡಿದ್ದಾರೆ. ನಮಗೆ ಬಂದಿರುವ ಮಾಹಿತಿಯ ಪ್ರಕಾರ ಸದ್ಯಕ್ಕೆ ಇನ್ನೂ ಮೂರು ಸುತ್ತಿನ ಎಣಿಕೆ ಬಾಕಿ ಇದೆ. 5, 77, 777 ಮತಗಳು 68.87 ದ್ರೌಪದಿಯವರಿಗೆ ಬಂದಿದೆ. ಯಶವಂತ್ ಸಿನ್ಹಾ ಅವರು 2, 61, 062 ಮತಗಳು ಬಂದಿವೆ.

ಈ ಸಂದರ್ಭದಲ್ಲಿ ಕರ್ನಾಟಕ ಜನತೆ ಹಾಗೂ ನಮ್ಮ ಜನಪ್ರತಿನಿಧಿಗಳ ಪರವಾಗಿ ದ್ರೌಪದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ನೀಡಿದ ಬೆಂಬಲಕ್ಕಾಗಿ ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಪಕ್ಷದ ಅಧ್ಯಕ್ಷರಾದ ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಿರ್ಣಯವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ, ಅವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
.
ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರದ ಸಮಾರಂಭದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ. ರಾಷ್ಟ್ರ ಹಾಗೂ ರಾಜ್ಯದ ಪದಾಧಿಕಾರಿಗಳೂ ಕೂಡ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.ಪಕ್ಷದ ನಿಲುವನ್ನು ಇಡೀ ದೇಶ ಒಪ್ಪಿಕೊಂಡಿದೆ. ನರೇಂದ್ರ ಮೋದಿಯವರ ನಿಲುವಿಗೆ ದೇಶ ಸಮರ್ಥನೆ ಮಾಡಿಕೊಂಡಿರುವುದು ಪಕ್ಷದ ಸರ್ವ ಕಾರ್ಯಕರ್ತರಿಗೂ ಸಂತೋಷವನ್ನು ತಂದಿದೆ.

ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ
ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಭಕ್ತವತ್ಸಲಂ ಅವರ ಸಮಿತಿ ಸಲ್ಲಿಸಿರುವ ವರದಿಯನ್ನು ಸರ್ವೋಚ್ಛ ನ್ಯಾಯಾಲಯದ ಮುಂದೆ ಸಲ್ಲಿಸಲಾಗುತ್ತದೆ. ನ್ಯಾಯಾಲಯ ನೀಡುವ ನಿರ್ದೇಶನದಂತೆ ಮುಂದಿನ ತೀರ್ಮಾನಗಳಾಗುತ್ತವೆ. ಜುಲೈ 28 ರೊಳಗೆ ಕ್ಷೇತ್ರಗಳ ಪುನರ್ ವಿಂಗಡನೆಯಾಗಬೇಕು ಹಾಗೂ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯಲು ಸೂಚಿಸಲಾಗಿತ್ತು ಎಂದರು.

ರಾಜಕೀಯ ದಿವಾಳಿತನ
ಕಾಂಗ್ರೆಸ್ ನಾಯಕರು ಕಣ್ಣಮುಂದೇ ತಾವೇ ಕಾರ್ ತೆಗೆದುಕೊಂಡು ಬಂದು ಸುಡುವುದು ಇಡೀ ದೇಶದಲ್ಲಿ ನಗೆಪಾಟಲಾಗಿದೆ. ಅವರೇನು ಬಿಂಬಿಸಲು ಹೊರಟಿದ್ದಾರೆ ಎಂದು ತಿಳಿಯುತ್ತಿಲ್ಲ. ರಾಜಕೀಯ ದಿವಾಳಿತನ. ತಮ್ಮದೇ ಕಾರು ತಂದು ಪ್ರತಿಭಟಿಸಿ ಸುಡುವುದನ್ನು ಎಲ್ಲೂ ಕೇಳಿರಲಿಲ್ಲ. ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಹಿರಿಯರಿದ್ದಾರೆ, ಅನುಭವಸ್ಥರು. ಅವರ ಬಗ್ಗೆ ಅಪಾರವಾದ ಗೌರವವಿದೆ. ಅವರ ವಿಚಾರಗಳನ್ನು ವಿಧಾನಸಭೆಯಲ್ಲಿ ಕೇಳುತ್ತಿರುತ್ತೇವೆ. ಸಾಮಾನ್ಯವಾಗಿ ರಮೇಶ್ ಕುಮಾರ್ ವಸ್ತುಸ್ಥಿತಿಯನ್ನು ಮಾತನಾಡುತ್ತಾರೆ. ಸತ್ಯವನ್ನು ಆಡಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ ಎಂದರು.

Related posts

ಸಿದ್ದರಾಮಯ್ಯ, ಸುರ್ಜೇವಾಲಾ ವಿರುದ್ಧ ಬಿಜೆಪಿ ದೂರು

eNewsLand Team

ಎಸ್‍ಡಿಎಂಗೆ ಮುನೇನಕೊಪ್ಪ , ಶೆಟ್ಟರ್ ಭೇಟಿ ; ಕವಿ ಕಣವಿ ಆರೋಗ್ಯ ವಿಚಾರಣೆ

eNewsLand Team

ಕಸಾಪ: ಧಾರವಾಡ ಅಧ್ಯಕ್ಷರಾಗಿ ಡಾ.ಲಿಂಗರಾಜ ಅಂಗಡಿ ಪುನರಾಯ್ಕೆ

eNEWS LAND Team