24 C
Hubli
ಮಾರ್ಚ್ 29, 2024
eNews Land
ಸುದ್ದಿ

ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಹುಮತದೊಂದಿಗೆ ಗೆಲುವು ಸಾಧಿಸುವುದು ನಿಶ್ಚಿತ: ಸಿಎಂ ಬೊಮ್ಮಾಯಿ

ಇಎನ್ಎಲ್ ಬೆಂಗಳೂರು: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಹಲವಾರು ಪಕ್ಷಗಳು ಬೆಂಬಲಿಸಿರುವುದರಿಂದ 2/3 ಬಹುಮತದೊಂದಿಗೆ ಗೆಲ್ಲುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಇದ್ದ ಹಿಂದಿನ ದಾಖಲೆಯನ್ನ ಮುರಿಯುವ ಎಲ್ಲಾ ಸಾಧ್ಯತೆಗಳಿವೆ. ದ್ರೌಪದಿ ಮುರ್ಮು ಅವರು ಮಾನವೀಯ ಗುಣಗಳನ್ನು ಹೊಂದಿದ್ದು, ಅತ್ಯುನ್ನತ ಸ್ಥಾನ ಕ್ಕೇರುವುದು ಭಾರತದ ಪ್ರಜಾಪ್ರಭುತ್ವ ಹಾಗೂ ಭವಿಷ್ಯಕ್ಕೆ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆ ನಮ್ಮದು ಎಂದರು.

ದೇಶಾದ್ಯಂತ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ದೆಹಲಿ, ಸಂಸತ್ತಿನಲ್ಲಿ, ರಾಜ್ಯ ಸಭಾ, ಲೋಕಸಭಾ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ನಡೆಯುತ್ತಿದೆ. ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿ ಶ್ರೀಮತಿ ದ್ರೌಪದಿ ಮುರ್ಮು ಅವರ ಹೆಸರಿಗೆ ಬಹಳಷ್ಟು ಸಹಮತ ಮತ್ತು ಸಂತೋಷ ದೇಶಾದ್ಯಂತ ಮೂಡಿಬಂದಿದೆ. ಎನ್.ಡಿ.ಎ ಮಿತ್ರ ಪಕ್ಷಗಳಷ್ಟೇ ಅಲ್ಲ ವಿರೋಧ ಪಕ್ಷದ ಲ್ಲಿಯೂ ಮುಕ್ತವಾಗಿ ಬೆಂಬಲ ಸೂಚಿಸಿದ್ದಾರೆ. ದ್ರೌಪದಿ ಮುರ್ಮು ಅವರು ಒಬ್ಬ ದಕ್ಷ ಆಡಳಿತಗಾರರಾಗಿ, ಮುನಿಸಿಪಾಲಿಟಿ ಉಪಾಧ್ಯಕ್ಷೆಯಾಗಿ,ಮಂತ್ರಿ, ಶಾಸಕರು ಮತ್ತು ರಾಜ್ಯಪಾಲರಾಗಿ ಅವರ ಸೇವೆ ಅಮೋಘವಾಗಿದೆ. ಬುಡಕಟ್ಟು ಸಮುದಾಯದಿಂದ ಬಂದವರು, ಉತ್ತಮ ಕೆಲಸ ಮಾಡಿದವರಿಗೆ ಅತ್ಯುನ್ನತ ಸ್ಥಾನ ಲಭಿಸುತ್ತಿದೆ. ಪ್ರಜಾಪ್ರಭುತ್ವದ ಹಿರಿಮೆ ಮತ್ತು ಗರಿಮೆ. ಇಂಥ ಕೆಲಸವನ್ನು ಎನ್.ಡಿ.ಎ.ಮುಖ್ಯಸ್ಥರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಯ್ಕೆ ಮಾಡಿ ಇದೀ ದೇಶದಲ್ಲಿ ಒಂದು ಸಂಚಲನ ಹಾಗೂ ಸಂದೇಶವನ್ನು ನೀಡಿದ್ದಾರೆ. ವಿರೋಧಪಕ್ಷದಲ್ಲಿರುವವರು ನಮ್ಮ ಕರ್ನಾಟಕದ ಜೆ.ಡಿ.ಎಸ್. ಮುಖ್ಯಸ್ಥರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಜಾರ್ಖಂಡ್ ಮುಕ್ತಿ ಮೋರ್ಚಾ, ವೈ. ಎಸ್.ಆರ್ ಪಕ್ಷ ಸೇರಿದಂತೆ ಹಲವಾರು ಪಕ್ಷಗಳು ಬೆಂಬಲಿಸಿರುವುದರಿಂದ ಗೆಲ್ಲುವುದು ನಿಶ್ಚಿತ ಎಂದರು.

Related posts

ಅತಿವೃಷ್ಟಿಗಾಗಿ ತುರ್ತು ಸಭೆ : ರೈತ ನೆಮ್ಮದಿಯಿಂದ ಇದ್ದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ: ಶಾಸಕ ನಿಂಬಣ್ಣವರ

eNEWS LAND Team

ನೈಋತ್ಯ ರೈಲ್ವೆಯಲ್ಲಿ ಭಾರತ್ ಗೌರವ್ ರೈಲುಗಳ ಸೇವಾ ಸೌಲಭ್ಯ

eNEWS LAND Team

ಉರುಸು ಪ್ರಯುಕ್ತ ಸಾಮೂಹಿಕ ಪ್ರಸಾದ ಸೇವನೆ :ಗ್ರಾಮಸ್ಥರು ಅಸ್ವಸ್ಥ

eNEWS LAND Team