27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಕನ್ನಡ ಭಾಷೆಗೆ ಆದ್ಯತೆ ಕೊಡೋನಾ, ಬೇರೆ ಭಾಷೆ ಪ್ರೀತಿಸೋಣ: ಸಿ.ಎಮ್.ನಿಂಬಣ್ಣವರ

ಇಎನ್ಎಲ್ ಕಲಘಟಗಿ: ಕನ್ನಡ ಸಾಹಿತ್ಯವು ಅತೀ ಮೌಲ್ಯಯುತವಾಗಿದೆ, ಆದ್ದರಿಂದ ಇದು ಕನ್ನಡಾಂಬೆಯನ್ನು ಪೂಜಿಸುವ ಕಾರ್ಯಕ್ರಮವಾಗಿದೆ ಎಂದ ಶಾಸಕ ನಿಂಬಣ್ಣವರ.

ಇದನ್ನೂ ಓದಿ:ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಾಗ ತಹಸೀಲ್ದಾರ ಯಲ್ಲಪ್ಪ ಗೊಣ್ಣೆನ್ನವರ  ಏನ..ಹೇಳ್ಯಾರ್ ನೋಡ್ರಿ!

ಸ್ಥಳೀಯ ದಾಸ್ತಿಕೊಪ್ಪದ ಹನ್ನೆರಡು ಮಠದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ  ಉದ್ಘಾಟಕರಾಗಿ  ಮಾತನಾಡಿ, ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರೂ ಈ ನಾಡನ್ನು ಪ್ರೀತಿಸಲೇಬೇಕು, ಹಿಂದೆ ನಾನು ಶಿಕ್ಷಕನಾಗಿದ್ದ ಅವಧಿ ಪುಣ್ಯದ ಕಾಲ, ಕನ್ನಡ ಭಾಷೆಗೆ ಆದ್ಯತೆ ಕೊಡೋಣ, ಬೇರೆ ಭಾಷೆಗಳನ್ನು ಪ್ರೀತಿಸೋಣ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿಸೋಣ, ಪ್ರತಿ ತಿಂಗಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿರಿ, ಸಾಹಿತ್ಯ ಸೇವೆ ಮಾಡಿರಿ. ಲಿಂಗರಾಜ ಅಂಗಡಿ ಅವರು ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ, ಅವರ ಮಾರ್ಗದರ್ಶನದಲ್ಲಿ ಮುಂದುವರೆಯಿರಿ ಎಂದರು. ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದ ಅಂಗಡಿ ಮನುಷ್ಯನಿಗೆ ಜವಾಬ್ದಾರಿ ಮುಖ್ಯ, ತಾವೆಲ್ಲರೂ ಉತ್ತಮವಾಗಿ ಕೆಲಸ ಮಾಡಿ ಸಾಹಿತ್ಯ ಕ್ಷೇತ್ರವನ್ನು ಬೆಳೆಸಿರಿ, ಕಲಘಟಗಿಯಲ್ಲಿ ಅದ್ಭುತ ಕಲೆಗಾರರಿದ್ದಾರೆ, ಸದ್ಯಕ್ಕೆ ನಮಗೆ ಇಲ್ಲಿ ಸ್ವಂತ ಜಾಗೆ ಇಲ್ಲ ವ್ಯವಸ್ಥೆ ಮಾಡಿ ಕೊಡಿರಿ ಎಂದು ಶಾಸಕರಲ್ಲಿ ವಿನಂತಿಸಿಕೊoಡರು. ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮಲ್ಲಿಕಾರ್ಜುನ ಪುರದನಗೌಡರ ಮಾತನಾಡಿ ನಾವೆಲ್ಲರೂ ಸ್ವ-ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತೇವೆ, ಹೊಸ ಪದಾಧಿಕಾರಿಗಳು ಸಹಕರಿಸಿದ್ದರಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ಇದನ್ನೂ ಓದಿ:ಕಲಘಟಗಿಯಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಇಲ್ಲ : ಶಾಸಕ ನಿಂಬಣ್ಣವರ
          ಗೌರವ ಕಾರ್ಯದರ್ಶಿ ಪರಮಾನಂದ ಒಡೆಯರ, ವೀರಣ್ಣ ಬ ಕುಬಸದ, ಗೌರವ ಕೋಶಾಧ್ಯಕ್ಷ ರಮೇಶ ಸೋಲಾರಕೊಪ್ಪ, ಹಾಗೂ  ಎಲ್ಲಪ್ಪ ಮಾಳಗಿ, ರಮೇಶ ಮರೆಮ್ಮಗೋಳ, ಭೀಮಣ್ಣ ಬೇವಿನಗಿಡದ, ವಿಜಯಲಕ್ಷ್ಮಿ ದೇಶಪಾಂಡೆ, ಸೀತಮ್ಮ ಚಿನ್ನಪ್ಪನವರ, ಅಣ್ಣಪ್ಪ ಓಲೇಕಾರ, ಉಮಾದೇವಿ ಬಸಾಪುರ, ಅನಿತಾ ಹತ್ತಿ, ಬಸವರಾಜ ದೊಡಮನಿ, ಆಯ.ವಿ.ಜವಳಿ, ಗುರುಲಿಂಗ ಉಣಕಲ್, ವಿ.ಎಸ್.ನಾಗಾಲೋತಿಮಠ,  ರಮೇಶ ಹೊಲ್ತಿಕೋಟಿ, ಡಾ.ಸುರೇಶ ಕಳಸಣ್ಣವರ ಪದಾಧಿಕಾರಿಗಳಾಗಿ ಧಾರವಾಡ ಜಿಲ್ಲಾ ಕ.ಸಾ.ಪ ದ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್.ಕೌಜಲಗಿ ಪ್ರಮಾಣ ವಚನ, ಬೋಧನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.

ಇದನ್ನೂ ಓದಿ:ಹುದ್ದೆ ಮುಖ್ಯ ಅಲ್ಲ, ಸಂಘಟನೆ ಮುಖ್ಯ: ಎಮ್.ಅರವಿಂದ
          ಕಾರ್ಯಕ್ರಮದಲ್ಲಿ  ಕೆ.ಬಿ.ಪಾಟೀಲ ಕುಲಕರ್ಣಿ, ಡಾ.ಎಚ್.ಬಿ.ಪಾಟೀಲ, ಶಿವಾನಂದಯ್ಯ ಗಚ್ಚಿನಮಠ, ಸಿ.ಬಿ.ಹೊನ್ನಿಹಳ್ಳಿ, ಪ್ರೊ.ಗಂಗಾಧರ ಗುಮ್ಮಗೋಳಮಠ, ಶಿವಣ್ಣ ಅರಳಿಹೊಂಡ,  ಎಮ್.ಆರ್.ತೋಟಗಂಟಿ, ಅಶೋಕ ಅರ್ಕಸಾಲಿ, ನ್ಯಾಯವಾದಿ ಬಿ.ವಿ.ಪಾಟೀಲ, ಕ.ಸಂ.ಸೇನೆ ಅಧ್ಯಕ್ಷ ಸಾತಪ್ಪ ಕುಂಕೂರ, ಮಾಜಿ ಜಿ.ಪಂ.ಸದಸ್ಯರಾದ ಬಸವರಾಜ ಕರಡಿಕೊಪ್ಪ , ಆಯ್.ಸಿ.ಗೋಕುಲ್, ಮುಕ್ಕಲ ಗ್ರಾ.ಪಂ. ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ, ಸೋಮಶೇಖರ ಬೆನ್ನೂರ, ಮಂಜುನಾಥ ಮುರಳ್ಳಿ, ಹಾಗೂ ಸಮಸ್ತ ಸಾಹಿತ್ಯಾಸಕ್ತ ಬಳಗದವರು ಉಪಸ್ಥಿತರಿದ್ದರು. ಅನ್ನಪೂರ್ಣ ತರಬೇತಿ ಮಕ್ಕಳಿಂದ ಪ್ರಾರ್ಥನೆ, ಭರತನಾಟ್ಯಗಳನ್ನು ಏರ್ಪಡಿಸಲಾಗಿತ್ತು.

ಇದನ್ನೂ ಓದಿ:ದಿವಾಳಿ ಆಗಿಲ್ಲ: ಕಲಘಟಗಿ ಅರ್ಬನ್ ಬ್ಯಾಂಕ್ ಸ್ಪಷ್ಟಣೆ

Related posts

ಏರುಗತಿಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ

eNewsLand Team

2021-22ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭ ; ರೈತರೇ ಸ್ವತ: ಬೆಳೆ ಸಮೀಕ್ಷೆ ಮಾಡಬಹುದು

eNEWS LAND Team

ಹೊಸ ವರ್ಷಾಚರಣೆಗೆ ಕಡಿವಾಣ, ಕೋವಿಡ್ ಮಾರ್ಗಸೂಚಿ ಬಿಡುಗಡೆ: ಸಿಎಂ ಬೊಮ್ಮಾಯಿ

eNEWS LAND Team