23 C
Hubli
ಸೆಪ್ಟೆಂಬರ್ 25, 2023
eNews Land
ಜಿಲ್ಲೆ ಸುದ್ದಿ

ಜನಸಂಖ್ಯೆ ನಿಯಂತ್ರಣ ಎಲ್ಲರ ಹೊಣೆ: ತಹಸೀಲ್ದಾರ ಅಮಾಸಿ

ಇಎನ್ಎಲ್ ಅಣ್ಣಿಗೇರಿ: ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲರ ಜವಾಬ್ದಾರಿ ಮುಖ್ಯ ಎಂದು ತಹಸೀಲ್ದಾರ ಮಂಜುನಾಥ ಅಮಾಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಂ.ಬಿ.ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಂಯೋಗದಲ್ಲಿ ಎನ್.ಎಸ್.ವಿ. ಪಾಕ್ಷಿಕ-2021ರ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರ್.ವಿ.ಕುಪ್ತನ್ ಮಾತನಾಡಿ, ಸಂತಾನಹರಣ ಶಸ್ತ್ರಚಿಕಿತ್ಸೆ ಎಂದರೆ ಪುರುಷರು ಬಲಹೀನರಾಗುತ್ತಾರೆ ಎಂಬುದು ಪೂರ್ವಗ್ರಹ ಪೀಡಿತ. ಪುರುಷರನ್ನು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳಲು ಪ್ರೇರೆಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಎನ್.ಹೊಸಮನಿ ಮಾತನಾಡಿ, ಸಂತಾನ ಶಸ್ತ್ರ ಚಿಕಿತ್ಸೆ ಕುರಿತು ಉದ್ದೇಶ ಗುರಿಗಳನ್ನು ಅರಿತು ಸಾಗಬೇಕಿದೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಶೋಭಾ ಕುಲಕರ್ಣಿ ಎ.ಕೆ.ಪತ್ತಾರ, ಎಮ್.ಎ. ತಹಸೀಲ್ದಾರ, ಎಂ.ಎಂ.ಅಳಗವಾಡಿ, ಸುಭಾಸ ಮಂಗಳಿ ಭಾಗವಹಿಸಿದ್ದರು.

ಕಾಲೇಜಿನ, ರೆಡ್ ಕ್ರಾಸ್ ಘಟಕದ ಸುಲೇಶಾ ಬಿ. ಬೆಳಗಾಂ. ವಿಜಯಲಕ್ಷ್ಮಿ ಪಾಟೀಲ, ಎಸ್.ಎಸ್.ಸೂಡಿ, ಕೀರ್ತಿ ಕಳ್ಳೇರ, ಡಾ ಎ.ಸಿ.ವಾಲಿ, ವೈ.ಐ.ಚವ್ಹಾಣ, ಎಸ್.ವಿ.ಲೋಣಕರ, ಉಮಾದೇವಿ ಕಣವಿ, ಜಿ.ಜಿ.ಹಿರೇಮಠ, ಅಧ್ಯಾಪಕರ ವೃಂದ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

Related posts

ರೈತರ ಸಮಸ್ಯೆ ನೀಗಿಸಲು ಒಂದಾಗೋಣ: ಸಿಎಂ ಕರೆ

eNewsLand Team

ಅರಬ್‌ ರಾಷ್ಟ್ರಕ್ಕೆ ಆಹಾರ ಪೂರೈಕೆ: ಬ್ರೆಜಿಲ್ ಹಿಂದಿಕ್ಕಿ ಮೊದಲ ಸ್ಥಾನ ಪಡೆದ ದೇಶ ಯಾವ್ದು ಗೊತ್ತಾ?

eNewsLand Team

ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸ್ತೀವಿ ಎಂದು ಇದ್ದಿದ್ದು ಕಿತ್ಕೊಂಡ್ರು!

eNewsLand Team