29 C
Hubli
ಸೆಪ್ಟೆಂಬರ್ 26, 2023
eNews Land
ಸುದ್ದಿ

ಪಿಎಂಜಿಕೆವೈ: 2022ರ ಮಾರ್ಚ್ ತನಕ ವಿಸ್ತರಣೆ

ಇಎನ್ಎಲ್ ಬ್ಯೂರೋ

ದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಂಡಿದ್ದ ಕೇಂದ್ರ ಸರ್ಕಾರದ ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PM-GKY) ಯನ್ನು ಉಚಿತ ಪಡಿತರ ನೀಡಲು 2022ರ ಮಾರ್ಚ್​ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ.

ಈ ಯೋಜನೆಯ ಹಂತ-I ಮತ್ತು ಹಂತ-II ಕ್ರಮವಾಗಿ ಏಪ್ರಿಲ್‌ನಿಂದ ಜೂನ್, 2020 ಮತ್ತು ಜುಲೈನಿಂದ ನವೆಂಬರ್, 2020 ರವರೆಗೆ ಇತ್ತು.

ಯೋಜನೆಯ ಹಂತ-III ಮೇನಿಂದ ಜೂನ್, 2021ರವರೆಗೆ ಇತ್ತು. ಯೋಜನೆಯ ಹಂತ-IV ಪ್ರಸ್ತುತ ಜುಲೈ-ನವೆಂಬರ್, 2021ರ ವರೆಗೆ ಇದೆ. ಪ್ರಸ್ತುತ PMGKAY-IV ಅಡಿಯಲ್ಲಿ ವಿತರಣೆ ನಡೆಯುತ್ತಿದೆ.

ಇದುವರೆಗೆ ಸುಮಾರು 74.64 ಕೋಟಿ, 74.4 ಕೋಟಿ, 73.75 ಕೋಟಿ, 70.8 ಕೋಟಿ ಮತ್ತು 35.8 ಕೋಟಿ ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ.

Related posts

ಕಾಂಗ್ರೆಸ್ 40 ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ. ಯಾರ್ಯಾರು ಪ್ರಚಾರಕರು ನೋಡಿ!

eNEWS LAND Team

ಗಡಿ ಚೆಕ್ ಪೋಸ್ಟ್ ಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿ : ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಗುರುದತ್ತ ಹೆಗಡೆ

eNewsLand Team

ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ: ಪಿ.ಎಸ್. ವಸ್ತ್ರದ

eNEWS LAND Team