ಇಎನ್ಎಲ್ ಡೆಸ್ಕ್
ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲಾಗುವ ಲಾಹೋರ್‌ಗೆ, ಈಗ ಜಗತ್ತಿನಲ್ಲೇ ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ ಕಳಂಕ ಅಂಟಿದೆ.
ಸ್ವಿಟ್ಜರ್‌ಲೆಂಡ್ ಮೂಲದ ‘ಪ್ಲಾಟ್‌ಫಾರ್ಮ್ ಐಕ್ಯೂಏರ್’ ಎಂಬ ವಾಯು ಗುಣಮಟ್ಟದ ಮೇಲೆ ನಿಗಾ ಇಡುವ ಕಂಪನಿ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ.
‘ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಲಾಹೋರ್ ಅಗ್ರ ಸ್ಥಾನ ಪಡೆದಿದೆ. ನಗರಗಳ ವಾಯು ಗುಣಮಟ್ಟ ಅಳೆಯುವ ಅಮೆರಿಕದ ಎಕ್ಯೂಐ ಎಂಬ ಅಳತೆಗೋಲಿನ ಪ್ರಕಾರ, ಬುಧವಾರ ಬೆಳಿಗ್ಗೆ 9.49ಕ್ಕೆ ಲಾಹೋರ್‌ನ ವಾಯು ಗುಣಮಟ್ಟ ಸೂಚ್ಯಂಕ 203 ದಾಖಲಾಗಿದೆ.
ನಂತರದ ಸ್ಥಾನದಲ್ಲಿರುವ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 183’ ಎಂದು ಕಂಪನಿ ವಿವರಿಸಿದೆ. ವಾಯು ಗುಣಮಟ್ಟ ಸೂಚ್ಯಂಕ 169 ಹೊಂದಿರುವ ಢಾಕಾ ಮೂರನೇ ಸ್ಥಾನದಲ್ಲಿದ್ದರೆ, ಸೂಚ್ಯಂಕ 168 ದಾಖಲಾಗಿರುವ ಕೋಲ್ಕತ್ತ ನಾಲ್ಕನೇ ಸ್ಥಾನದಲ್ಲಿದೆ.