eNews Land
ಅಪರಾಧ ಸುದ್ದಿ

ಚಡ್ಡಿ ಖರೀದಿಗೆ ಹೋಗಿ ಲಕ್ಷ ಕಳೆದುಕೊಂಡ! ಆನ್ಲೈನ್ ಮುಂಡಾಮೋಚ್ತು!!

Listen to this article

ಇಎನ್‌ಎಲ್ ಹುಬ್ಬಳ್ಳಿ; ಆನ್‌ಲೈನ್ ಮಾರ್ಕೆಟ್‌ನಲ್ಲಿ ಖರೀದಿಸಿದ ಬಟ್ಟೆ ಮರಳಿಸಿ, ಹಣ ವಾಪಾಸ್ಸು ಪಡೆಯಲೆಂದು ಇಲ್ಲಿನ ರವಿನಗರದ ಬಿ.ಎಂ. ಬನ್ನೆ ಅವರು ನೀಡಿದ್ದ ಬ್ಯಾಂಕ್ ಖಾತೆ ಹಾಗೂ ಐಎಫ್‌ಎಸ್‌ಸಿ ನಂಬರ್ ಪಡೆದ ವಂಚಕರು, ಅವರ ಖಾತೆಯಿಂದ ?೨.೮೪ ಲಕ್ಷ ವರ್ಗಾಯಿಸಿಕೊಂಡಿದ್ದಾರೆ. ಬನ್ನೆ ಅವರು ಸ್ನ್ಯಾಪ್ ಡೀಲ್ ಆನ್‌ಲೈನ್ ಮಾರ್ಕೆಟ್‌ನಲ್ಲಿ 999 ರುಪಾಯಿ ನೀಡಿ ಬರ್ಮೊಡಾ ಖರೀದಿಸಿದ್ದರು.

ಅದು ಇಷ್ಟವಾಗಿಲ್ಲವೆಂದು ವಾಪಸ್ಸು ಕಳುಹಿಸಿದ್ದರು. ಹಣ ಮರಳಿ ಬರದಿದ್ದಾಗ, ಆನ್‌ಲೈನ್‌ನಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದರು. ಹಣ ಮರಳಿಸುವುದಾಗ ನಂಬಿಸಿದ ವಂಚಕ, ಇವರಿಂದ ಬ್ಯಾಂಕ್ ಮಾಹಿತಿ ಪಡೆದು, ಮಾಹಿತಿ ತಂತ್ರಜ್ಞಾನದ ಸಹಾಯದಿಂದ ಮತ್ತೊಂದು ಬ್ಯಾಂಕ್ ಖಾತೆಯಿಂದಲೂ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ದೇಶಭಕ್ತರನ್ನು ಗೌರವಿಸಿ- ವದಂತಿಗಳನ್ನು ಹರಡದಿರಲು ಸಿಎಂ ಮನವಿ

eNEWS LAND Team

ಸರಳ ವಾಸ್ತು ಸಂಸ್ಥಾಪಕ ಚಂದ್ರಶೇಖರ್ ಗುರೂಜಿ ಹತ್ಯೆ

eNEWS LAND Team

ಹುಬ್ಬಳ್ಳಿ ಸಿದ್ಧಾರೂಢಮಠ ಮೂರಸಾವಿರ ಮಠದ ದರ್ಶನ ಪಡೆದ ಜೆ.ಪಿ.ನಡ್ಡಾ

eNEWS LAND Team