30 C
Hubli
ಮಾರ್ಚ್ 21, 2023
eNews Land
ಸುದ್ದಿ

ಜಿ.ಪಂ ಸಿಬ್ಬಂದಿಗಳಿಗೆ ವಾರದಲ್ಲಿ ಒಂದು ದಿನ ಸಮವಸ್ತ್ರ

Listen to this article

ಇಎನ್ಎಲ್ ಬಾಗಲಕೋಟೆ ಆಡಳಿತದಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯತ ವಾರದಲ್ಲಿ ಒಂದು ದಿನ ಸಮವಸ್ತ್ರ ಧರಿಸಿಲು ನಿರ್ಧರಿಸಿದ್ದು, ಹೊಸ ವರ್ಷಾಚರಣೆ ದಿನದಂದು ಜಿ.ಪಂ ವ್ಯಾಪ್ತಿಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಮವಸ್ತ್ರ ಧರಿಸುವ ಮೂಲಕ ಸಾಂಕೇತಿಕವಾಗಿ ಜಿ.ಪಂ ಸಿಇಓ ಟಿ.ಭೂಬಾಲನ್ ಚಾಲನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾ ಪಂಚಾಯತ ಸಿಇಓ ಅವರು ಐ.ಎ.ಎಸ್ ಅಧಿಕಾರಿಗಳಿಂದ ಹಿಡಿದು ಗ್ರೂಪ್ ಡಿ ವರೆಗೆ ವಾರದಲ್ಲಿ ಗುರುವಾರ ದಿನ ಸಮವಸ್ತ್ರ ಧರಿಸಿಲು ಮುಂದಾಗಿರುವುದಾಗಿ ತಿಳಿಸಿದರು. ಜಿಲ್ಲಾ ಪಂಚಾಯ ವ್ಯಾಪ್ತಿಯಲ್ಲಿ ಸಾಂಕೇತಿಕವಾಗಿ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕಾ ಪಂಚಾಯತ ವ್ಯಾಪ್ತಿ ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿಯೂ ಸಮವಸ್ತ್ರ ಧರಿಸುವ ಕಾರ್ಯ ನಡೆಯಲಿದೆ ಎಂದರು.
ಐ.ಎ.ಎಸ್ ಅಧಿಕಾರಿಗಳಿಂದ ಹಿಡಿದು ಗ್ರೂಪ್ ಡಿ ವರೆಗಿನ ಎಲ್ಲ ಸಿಬ್ಬಂದಿಗಳು ಸರಕಾರಿ ಸೇವೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಡಳಿತದಲ್ಲಿ ಶಿಸ್ತು, ಸುಧಾರಣೆ ತರುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಪುರುಷರಿಗೆ ಮಾತ್ರವಲ್ಲ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಮವಸ್ತ್ರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸರಕಾರಿ ನೌಕರರಿಗೆ ಸಮವಸ್ತ್ರ ಇರಬೇಕು ಎಂಬ ಮಾತು ಕೇಳು ಬರುತ್ತಿತ್ತು. ಇಂತಹ ಕಾರ್ಯಕ್ಕೆ ಬಾಗಲಕೋಟೆ ಜಿಲ್ಲಾ ಪಂಚಾಯತ ಚಾಲನೆ ನೀಡಿದ್ದು, ರಾಜ್ಯದಲ್ಲಿಯೇ ಇದು ಪ್ರಥಮವಾಗಿದ್ದು, ಇತರರಿಗೆ ಮಾದರಿಯಾಗಲಿದೆ.

Related posts

ಫಸ್ಟ್ ಟೈಂ ಸೂರ್ಯನ ಮುಟ್ಟಿದ ಮಾನವ ! 

eNewsLand Team

ಹೊಟ್ಟೆ ನೋವಿಗೆ ಹೀಗೆ ಮಾಡ್ಕೊಂಡ ಸುಳ್ಳದ ಹುಡುಗಿ!

eNewsLand Team

ಬ್ಯಾಡ್ ಬ್ಯಾಂಕ್ ಏನು? ಎತ್ತ? ಇಲ್ಲಿದೆ ಮಾಹಿತಿ

eNEWS LAND Team