24 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ನೂತನ ಚರ್ಮಶಿಲ್ಪಿ ಭವನ ಉದ್ಘಾಟನೆ: ಎಲ್ಲಿ?

ಸಮಾಜ ಉದ್ಧಾರ ಮಾಡುವ ಕೆಲಸಗಳು ನಡೆಯಲಿ: ಸಚಿವ ಪ್ರಲ್ಹಾದ್ ಜೋಶಿ

ಇಎನ್ಎಲ್ ಧಾರವಾಡ: ಪ್ರಜಾಪ್ರಭುತ್ವದಲ್ಲಿ ಜನರ ಕಲ್ಯಾಣ ಕಾರ್ಯಗಳು ಆಗಬೇಕು. ಸಮಾಜದ ಉದ್ಧಾರ ಮಾಡುವ ಕೆಲಸಗಳು ನಡೆಯಬೇಕಾಗಿದೆ. ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರು ಹಿಂದುಳಿದ ವರ್ಗಗಳ ಜನರ ಉದ್ಧಾರಕ್ಕಾಗಿ ಬದುಕಿ ಬಾಳಿದರು. ಹಸಿರು ಕ್ರಾಂತಿಗೆ ಜಗಜೀವನ್ ರಾಂ ಅವರ ಕೊಡುಗೆ ಅಪಾರವಾದದ್ದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯ ವಾರ್ಡ್ ನಂ.73ರ ಹಳೇ ಹುಬ್ಬಳ್ಳಿ ಘೋಡಕೆ ಓಣಿಯಲ್ಲಿ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಚರ್ಮ ಶಿಲ್ಪಿ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುರಾತನ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಆಗಿರುವುದು ಒಳ್ಳೆಯದು. ಲೀಡಕರ್ ಫುಟ್ ವೇರ್ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಸಮಯದಲ್ಲಿ ದೇಶದಲ್ಲಿ 80 ಕೋಟಿ ಜನರಿಗೆ ಆಹಾರ ನೀಡಲಾಗಿದೆ. ನೇಕಾರನಗರದ ಕಲ್ಯಾಣ ಬಸವೇಶ್ವರ ಜೀರ್ಣೋದ್ಧಾರ ಮಾಡಲಾಗುವುದು. ನಗರದ ಎಂಟು ವರ್ತುಲಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಮೊದಲು ದೇವಸ್ಥಾನ ಚಿಕ್ಕದಾಗಿತ್ತು. ಈಗ ದೊಡ್ಡದಾಗಿ ನಿರ್ಮಾಣ ಮಾಡಲಾಗಿದೆ. ಸಮಾಜಕ್ಕೆ ಅನುಕೂಲಕರವಾಗಲಿದೆ‌. ಸಮುದಾಯ ಭವನಗಳ ಮೂಲಕ ಶೋಷಿತ ವರ್ಗದ ಕಾರ್ಯಕ್ರಮಗಳಿಗೆ ಉಪಯೋಗವಾಗಲಿದೆ. ಸಮಾಜದಲ್ಲಿನ ಹಿಂದುಳಿದ ವರ್ಗಗಳ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಚರ್ಮಗಾರಿಕೆ ಮೂಲಕ ಉದ್ಯೋಗಗಳನ್ನು ಕೈಗೊಳ್ಳಬಹುದಾಗಿದೆ ಎಂದರು.

ಪಾಲಿಕೆ ಸದಸ್ಯೆ ಶೀಲಾ ಕಾಟಕರ, ಡಾ.ಬಾಬು ಜಗಜೀವನ್ ರಾಂ ನಿಗಮ ಲಿಡಕರ್ ಸಂಯೋಜಕರಾದ ರುದ್ರೇಶ್ ಎ.ಎಸ್, ವೆಂಕಟೇಶ ಇಬ್ರಾಹಿಂಪುರ, ಡೋರ್ ಕಕ್ಕಯ್ಯಾ ಸಮಿತಿಯ ಅಧ್ಯಕ್ಷರಾದ ಜಗನಾಥ ಮಹಾದೇವ ಸೋನೋನೆ, ವಿಶ್ವನಾಥ ಘೋಡಕೆ, ಸುಮಿತ್ರಾ ಗುಂಜಾಳ,ಪರಶುರಾಮ ಘೋಡಕೆ, ಸುಮಾ ಘೋಡಕೆ, ಜಿ.ಆರ್. ಘೋಡಕೆ, ಶಾಂತಾ ಹಿರೇಮಠ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ:ತಾಲೂಕಿನಾದ್ಯಾಂತ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಕಾರ್ಯಕ್ರಮಕ್ಕೆ ಚಾಲನೆ

eNewsLand Team

ಅಣ್ಣಿಗೇರಿ: ಇಸ್ರೋ ವಿಜ್ಞಾನಿ ಆರ್.ವಿ.ನಾಡಗೌಡರಿಂದ ವಿದ್ಯಾರ್ಥಿಗಳ ಜೊತೆ ಸಂವಾದ

eNEWS LAND Team

ಅಂತಾರಾಜ್ಯ ಜಲವಿವಾದ: ಏಪ್ರಿಲ್’ನಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ: ಬೊಮ್ಮಾಯಿ

eNewsLand Team