26.4 C
Hubli
ಏಪ್ರಿಲ್ 18, 2024
eNews Land
ಸುದ್ದಿ

ಹಿರಿಯನಾಗರಿಕರ ಕ್ಷೇಮಾಭಿವೃದ್ದಿ ಸಂಘದಿಂದ ನೇತಾಜಿ ದಿನಾಚರಣೆ

ಇಎನ್ಎಲ್ ನವಲಗುಂದ: ಪಟ್ಟಣದಲ್ಲಿ ಹಿರಿಯನಾಗರಿಕರ ಕ್ಷೇಮಾಭಿವೃದ್ದಿ ಸಂಘದಿಂದ ಸಸಿ ನೆಡುವುದರ ಮೂಲಕ ನೇತಾಜಿ ಸುಭಾಷ ಚಂದ್ರ ಬೋಸ್ ಅವರ 125 ನೇ ದಿನಾಚರಣೆ. ನೇತಾಜಿ ಅವರಂತಹ ದೇಶಪ್ರೇಮಿಗಳ ಹೋರಾಟದಿಂದ ನಾವೆಲ್ಲರು ಚೆನ್ನಾಗಿದ್ದೇವೆ : ಆನಂದ ಹೊಸಗೌಡರ.


 ನೇತಾಜಿ ಸುಭಾಷ ಚಂದ್ರ ಬೋಸ್ ಅವರ 125 ನೇ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಆಚರಿಸಿದರು ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರಲ್ಲಿಯೂ ಬರಬೇಕೆಂದು ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಹಾಗೂ ಮಹದಾಯಿ ಕಳಸಾ ಬಂಡೂರಿ ಹುಟ್ಟು ಹೋರಾಟಗಾರ ಆನಂದ ಹೊಸಗೌಡರ ಹೇಳಿದರು.


ಅವರು ರವಿವಾರ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘ ಹಾಗೂ ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಸಹಯೋಗದಲ್ಲಿ ಸಸಿ ನೆಡುವುದರ ಮೂಲಕ ನೇತಾಜಿ ಸುಭಾಷ ಚಂದ್ರ ಭೋಸ್ ಅವರ 125 ನೇ ದಿನಾಚರಣೆಯನ್ನು ಆಚರಿಸಲಾಯಿತು.
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನೇತಾಜಿ ಸುಭಾಷ ಚಂದ್ರ ಬೋಸ್, ಭಗತಸಿಂಗ್, ಚಂದ್ರ ಶೇಖರ ಆಜಾದರಂತಹ ಅನೇಕ ದೇಶಪ್ರೇಮಿಗಳು ಹೋರಾಟದ ಫಲದಿಂದ ನಾವೆಲ್ಲರು ಚನ್ನಾಗಿದ್ದೇವೆಂದು ಹೇಳಿದರು.
ರೈತ ಮುಖಂಡ ಬಸನಗೌಡ ಪಾಟೀಲ ಮಾತನಾಡಿ ಸ್ವಾತಂತ್ರ್ಯಕ್ಕಿಂತ ಮೊದಲು ಭಾರತ ದೇಶದಲ್ಲಿರುವ ಬ್ರೀಟಿಷರನ್ನು ಬಗ್ಗು ಪಡೆಯಲು ಹಲವಾರು ದೇಶಪ್ರೇಮಿಗಳು ತಮ್ಮ ಪ್ರಾಣವನ್ನು ಕೊಟ್ಟಿದ್ದಾರೆ. ಅಂತವರಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ಅವರು ಪ್ರಮುಖರಾಗಿದ್ದಾರೆ. ಅವರ ದೇಶ ಪ್ರೇಮ ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದೆ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘ ಹಾಗೂ ಪಿಂಜಾರ ನದಾಫ ಮನ್ಸೂರಿ ಸಂಘದವರು ಅನೇಕ ಸಮಾಜ ಮುಖಿ ಕಾರ್ಯ ಸ್ಮರಣೀಯವಾಗಿದೆ ಎಂದು ಹೇಳಿದರು.


ನೇತಾಜಿ ಸುಭಾಷಚಂದ್ರ ಬೋಸ್ ಅವರ 125 ನೇ ಜನ್ಮದಿನೋತ್ಸವದ ಅಂಗವಾಗಿ ಸಸಿ ನೆಟ್ಟು ಚಿಕ್ಕ ಮಕ್ಕಳಿಂದ ನೀರು ಹಾಕುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಧಾಪ, ಪಿಂಜಾರ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಅಬ್ದುಲರಝಾಕ ನದಾಫ, ಪುಂಡಲೀಕ ಮುಧೋಳೆ, ಅಂದಪ್ಪ ಬಳ್ಳೂಳ್ಳಿ, ಶಶಿಧರ ಶಲವಡಿ, ಪರಶುರಾಮ ಕಲಾಲ, ಚನಬಸಪ್ಪ ಈಟಿ ಇತರರಿದ್ದರು.

Related posts

ಇಂದು ಬಿಎಫ್‌ಸಿ ನಾರ್ತ್ ಈಸ್ಟ್ ಯುನೈಟೆಡ್ ಹಣಾಹಣಿ

eNewsLand Team

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ವೀಕ್ಷಿಸಿದ ಗೃಹಲಕ್ಷ್ಮೀಯರು

eNEWS LAND Team

ಹರ್ ಘರ್ ತಿರಂಗಾ ಅಭಿಯಾನ: ಭಾರತೀಯರು ಒಂದು ಎಂಬ ಸಂದೇಶ ಸಾರಬೇಕು: ಸಿಎಂ ಬೊಮ್ಮಾಯಿ

eNEWS LAND Team