24 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ನೇತಾಜಿ ಬೋಸ್ ಹಾಗೂ ಪ್ರಮೋದ ಮುತಾಲಿಕ: ಜನುಮ ದಿನ

ಇಎನ್ಎಲ್ ನವಲಗುಂದ: ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಹಾಗೂ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಜನ್ಮದಿನ ಸರಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣ ಹಂಪಲ ವಿತರಿಸಲಾಯಿತು.
ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದಜಿ ಹಾಗೂ ನೇತಾಜಿ ಅವರ ಜನ್ಮದಿನ ರೋಗಿಗಳಿಗೆ ಹಣ್ಣು ವಿತರಣೆ.

    ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ ಮುತಾಲಿಕ ಅವರ 67 ನೇ ವರ್ಷದ ಹುಟ್ಟಿದ ಹಬ್ಬದ ದಿನಾಚರಣೆ ಹಾಗೂ ನೇತಾಜಿ ಸುಭಾಷ ಚಂದ್ರ ಬೋಸ್ ಅವರ 125 ನೇ ದಿನಾಚರಣೆ ಅಂಗವಾಗಿ ತಾಲೂಕಾ ಶ್ರೀರಾಮ ಸೇನೆಯಿಂದ ರವಿವಾರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲಗಳ ವಿತರಣೆ ಮಾಡಿದರು.
ತಾಲೂಕಾ ಅಧ್ಯಕ್ಷ ವೀರಣ್ಣ ಪೂಜಾರ ಅವರು ಮಾತನಾಡಿ ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದಜಿ ಅವರು 100 ವರ್ಷ ಬಾಳಲಿ ಆರೋಗ್ಯವಂತರಾಗಿ ಸದಾ ಹಿಂದುತ್ವದ ಮಾರ್ಗದರ್ಶನ ಯುವಕರಿಗೆ ಸಿಗುವಂತಾಗಲಿ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನೇತಾಜಿ ಸುಭಾಷಚಂದ್ರ ಬೋಸ್ ಅವರು ಹಿಂದೂ ರಾಷ್ಟ್ರವನ್ನು ಒಗ್ಗೂಡಿಸಲು ಬ್ರೀಟಿಷರ ವಿರುದ್ದ ಯುವ ಸೇನೆಯನ್ನು ಕಟ್ಟುವುದರ ಮೂಲಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಅವರ ದಿನಾಚರಣೆ ಇಂದೇ ಇರುವುದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸರಕಾರಿ ಆಸ್ಪತ್ರೆಯಲ್ಲಿರುವಂತಹ ಬಡ ರೋಗಿಗಳಿಗೆ ಹಣ್ಣು ಹಂಬಲವನ್ನು ಹಂಚುವುದರ ಮೂಲಕ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವರಾಜ ಕುಂಬಾರ, ಜಗದೀಶ ವಡ್ಡರ, ಭೀಮಶಿ ನಿಂಬಣ್ಣವರ, ಶಿವು ಹೆಬ್ಬಾಳ, ದೇವರಾಜ ಪೂಜಾರ, ಸುನೀಲ ನರಸಪ್ಪನವರ, ಹುಚ್ಚಪ್ಪ ದೊಡಮನಿ, ಸರಕಾರಿ ಆಸ್ಪತ್ರೆ ವೈದರು ಹಾಗೂ ಶೂರ್ಷಕಿಯರು ಇದ್ದರು.

Related posts

ಜೆಡಿಎಸ್ ಪಕ್ಷದ ಪ್ರತಿಭಟನೆಗೆ ಮಣಿದ ಸರ್ಕಾರ:ಪ್ರಕಾಶ ಅಂಗಡಿ

eNEWS LAND Team

ದಿವಾಳಿ ಆಗಿಲ್ಲ: ಕಲಘಟಗಿ ಅರ್ಬನ್ ಬ್ಯಾಂಕ್ ಸ್ಪಷ್ಟಣೆ

eNEWS LAND Team

ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ ನವೀಕರಿಸಿ

eNEWS LAND Team