29 C
Hubli
ಸೆಪ್ಟೆಂಬರ್ 26, 2023
eNews Land
ಸುದ್ದಿ

ಗರ್ಭಿಣಿ‌ ಪತ್ನಿಯ ಪತಿ ಮರ್ಡರ್; ನಡೆದಿದೆ ತನಿಖೆ

ಇಎನ್ಎಲ್ ಹುಬ್ಬಳ್ಳಿ: ತಾಲೂಕಿ‌ನ ನೂಲ್ವಿ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಗೆ ಬಡಿಗೆಯಿಂದ‌ ಹೊಡೆದು ಕೊಲೆ ಮಾಡಲಾಗಿದೆ. ಆಸ್ತಿ ಗಲಾಟೆ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನಿಖೆ ಸಾಗಿದೆ.

ಶಂಭು ಕಮಡೊಳ್ಳಿ (34 ) ಕೊಲೆಯಾದವನು. ಶುಕ್ರವಾರ ರಾತ್ರಿ ಮನೆಯಿಂದ ಹೋದವನು ಶನಿವಾರ ಬೆಳಗ್ಗೆ ಮನೆಯ ಸ್ವಲ್ಪ ದೂರದಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾನೆ.

ವಿಷಯ ತಿಳಿದ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆಯ ಪಕ್ಕದಲ್ಲಿ ಶವ ಪತ್ತೆಯಾಗಿದ್ದರಿಂದ ಮತ್ತು ತಲೆಗೆ ಗಾಯಗಳಾಗಿದ್ದರಿಂದ ಹಲವಾರು ಅನುಮಾನಗಳು ಮೂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಪತ್ನಿ ಗರ್ಭಿಣಿ ಆಗಿದ್ದಾಳೆ.

ಇನ್ನೂ ತನಿಖೆ ಕೈಗೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ನಗರದ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Related posts

ಹುಬ್ಬಳ್ಳಿಯ ಐತಿಹಾಸಿಕ ಚಂದ್ರಮೌಳೇಶ್ವರ‌ ದೇವಸ್ಥಾನ ಇನ್ನಾದ್ರೂ ಅಭಿವೃದ್ಧಿ ಆಗತ್ತಾ?

eNewsLand Team

ಉಮ್ಮಳಿಸಿ ಬಂದ ದುಃಖ ತಡೆದು ಮಾತನಾಡಿದ ಸಿಎಂ; ಯಾಕೆ ಗೊತ್ತಾ? ಇದು ದೇಶದ ವಿಷ್ಯ!!

eNewsLand Team

ರಾಣೇಬೆನ್ನೂರು: ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ 5 ಎಕರೆ ಭೂಮಿ ಮಂಜೂರು

eNewsLand Team