ಇಎನ್ಎಲ್ ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಸುಮಾರು ಎರಡು ವರ್ಷಗಳಿಂದ ಹೆಣ್ಣು ಮಗಳೊಂದಿಗೆ ಸಲಿಗೆಯಿಂದ ನಡೆದುಕೊಂಡಿದ್ದಕ್ಕಾಗಿ ಸಿಟ್ಟು ತಾಳಲಾರದೆ ಯುವಕನ ಜೊತೆಗೆ ಜಗಳವಾಡುತ್ತಿದ್ದಾಗ ಕಲ್ಲಿನಿಂದ ಹೊಡೆದ ಪರಿಣಾಮ ಯುವಕ ಮೂರ್ಛೆ ಬಿದ್ದಿದ್ದು ಅವನನ್ನು ಕೂಡಲೇ ಕೆಎಂಸಿಗೆ ದಾಖಲಿಸಲಾಗಿತ್ತು ಆದರೆ ಕೆಲವೇ ಕ್ಷಣಗಳಲ್ಲಿ ಮರಣ ಹೊಂದಿರುವ ಘಟನೆ ಇಂದು ನಡೆದಿದ್ದು.
ಈ ಪ್ರಕರಣ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಕಲಘಟಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ . ಈ ಕುರಿತು ಸಿಪಿಐ ಪ್ರಭು ಸುರಿನನವರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.