24 C
Hubli
ಸೆಪ್ಟೆಂಬರ್ 27, 2023
eNews Land
ಸುದ್ದಿ

ವಿಪ: ಮೋದಿ- ದೇವೇಗೌಡ‌ ಜುಗಲ್ ಬಂದಿ ?

ಇಎನ್ಎಲ್ ದೆಹಲಿ: ದೆಹಲಿಯ ಸಂಸತ್ ಭವನದಲ್ಲಿ ಮಂಗಳವಾರ ಪ್ರಧಾನಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಭೇಟಿ ಆಗಿದ್ದಾರೆ. ದೇವೇಗೌಡ ಅವರನ್ನು ಮೋದಿ ಬರಮಾಡಿಕೊಂಡ ಫೋಟೋ ಎಲ್ಲೆಡೆ ವೈರಲ್ ಆಗಿದೆ.

 

ಭೇಟಿ ವೇಳೆ ಡಿ.10ರಂದು ರಾಜ್ಯದ 25 ಸ್ಥಾನಗಳಿಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿ ಮೋದಿ ಅವರ ಜತೆ ಪ್ರಸ್ತಾಪಿಸಿದ್ದಾರೆ.

ಜೆಡಿಎಸ್ ಸ್ಪರ್ಧಿಸದಿರುವ ಕ್ಷೇತ್ರಗಳಲ್ಲಿ ಬೆಂಬಲ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಗಾಗಲೇ ಎರಡು ಬಾರಿ ಮಾತನಾಡಿದ್ದಾರೆ. ಮೈತ್ರಿ ವಿಚಾರ ನಿಮಗೆ ಬಿಟ್ಟಿದ್ದು ಎಂದು ಮೋದಿ ಅವರಿಗೆ ತಿಳಿಸಿದ್ದೇನೆ. ಈ ಬಗ್ಗೆ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರ ಜತೆಗೆ ಮಾತನಾಡುವುದಾಗಿ ಮೋದಿ ತಿಳಿಸಿದ್ದಾರೆ. ನಮ್ಮಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

Related posts

ಬಿಎಸ್’ವೈ ಜಲರಕ್ಷಣೆ ನೀಡಿದ ಆಧುನಿಕ ಭಗೀರಥ: ಸಿಎಂ ಬೊಮ್ಮಾಯಿ

eNEWS LAND Team

ಉರುಸು ಪ್ರಯುಕ್ತ ಸಾಮೂಹಿಕ ಪ್ರಸಾದ ಸೇವನೆ :ಗ್ರಾಮಸ್ಥರು ಅಸ್ವಸ್ಥ

eNEWS LAND Team

ಏರುಗತಿಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ

eNewsLand Team