27 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಚಕ್ಕಡಿ ರಸ್ತೆ ಅಭಿವೃದ್ಧಿಗೆ ಶಾಸಕ ಎನ್.ಎಚ್.ಕೋನರಡ್ಡಿ ಚಾಲನೆ

ಇಎನ್‌ಎಲ್‌ ಅಣ್ಣಿಗೇರಿ: ಪಟ್ಟಣದ ವಿವಿಧ ಚಕ್ಕಡಿ ರಸ್ತೆಗಳನ್ನು ದುರಸ್ತಿಗೊಳಿಸಿ ಅಭಿವೃದ್ಧಿಗೊಳಿಸಲು ಬೆಂತೂರು ರಸ್ತೆ ಚಕ್ಕಡಿ ರಸ್ತೆಗೆ ಗುದ್ದಲಿ ಪೂಜೆ ಮಾಡುವ ಮೂಲಕ ನವಲಗುಂದ ವಿಧಾನಸಭಾ ಕ್ಷೇತ್ರದ ಚಕ್ಕಡಿ ರಸ್ತೆಗಳ ಹರಿಕಾರರೆಂದು ಖ್ಯಾತರಾದ ಶಾಸಕ ಎನ್.ಎಚ್.ಕೋನರಡ್ಡಿ ಚಾಲನೆ ನೀಡಿದರು. 

ನಂತರ ಮಾತನಾಡಿದ ಶಾಸಕರು ಈ ಹಿಂದೆ ತಮ್ಮ ಆಡಳಿತ ಅವಧಿಯಲ್ಲಿ ಚಕ್ಕಡಿ ರಸ್ತೆ ನಿರ್ಮಾಣಗೊಳಿಸಿ, ರೈತರು ಹೊಲಗದ್ದೆಗಳಿಗೆ ಸಂಚರಿಸಲು ಸುಗಮ ದಾರಿ ಕಲ್ಪಸಿಕೊಟ್ಟಿದ್ದರು. ಇನ್ನು ಹೆಚ್ಚು  ಚಕ್ಕಡಿ ರಸ್ತೆಗಳನ್ನು ನಿರ್ಮಿಸುವ ಮಹತ್ವಕಾಂಕ್ಷೆಯ ಗುರಿ ಹೊಂದಿರುವೆ. ಸರ್ಕಾರದಿಂದ ಅನುದಾನ ಪಡೆದು ಸದ್ಯ ಹದೆಗೆಟ್ಟ ಚಕ್ಕಡಿ ರಸ್ತೆಗಳನ್ನು ದುರಸ್ತಿಗೊಳಿಸಿ ಅಭಿವೃದ್ದಿಪಡಿಸಿದೆ. ಇನ್ನೀತರ ಗ್ರಾಮಗಳಲ್ಲಿ ರೈತರ ಸಹಕಾರ ಪಡೆದು ಸರ್ಕಾರದ ಅನುದಾನದಿಂದ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಚಕ್ಕಡಿ ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದೆಂದರು.

ಪಟ್ಟಣದಲ್ಲಿ ಜಲಜೀವನ ಮಷಿನ್ ಯೋಜನೆಯ 24/7 ಕುಡಿಯುವ ನೀರಿನ ಸರಭರಾಜು ಮನೆ ಮನೆಗೆ ನಲ್ಲೆ ಮುಖಾಂತರ ನೀರು ಪೂರೈಕೆಗೆ ಕಲ್ಪಿಸಿದ ಪೂರ್ಣಗೊಂಡ ಕಾಮಗಾರಿ ಪರೀಶಿಲಿಸಿ ಅನುಷ್ಠಾನಕ್ಕೆ ಚಾಲನೆ ನೀಡಿದೆ. ಪಟ್ಟಣದ 23 ವಾರ್ಡಗಳ ನಿವಾಸಿಗಳು ಕುಡಿಯುವ ನೀರು ಸಮರ್ಪಕವಾಗಿ ಸದ್ಭಳಿಕೆ

ಮಾಡಿಕೊಳ್ಳುತ್ತಿದ್ದಾರೆಂದರು.

ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ರಜೀಯಾಬೇಗಂ ರೊಕ್ಕದಕಟ್ಟಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜಕರಡ್ಡಿ, ಸ್ಥಾಯಿ ಸಮಿತಿ ಚೇರಮನ್ ಅಮೃತಪ್ಪ ಮೀಸಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬಾಜಾನ ಮುಲ್ಲಾನವರ, ಪುರಸಭೆಯ ಕಾಂಗ್ರೆಸ್ ಸದಸ್ಯರು, ಅಣ್ಣಿಗೇರಿ ತಾಲೂಕ ಕಾಂಗ್ರೆಸ್ ಬ್ಲಾಕ್ ಕಮಿಟಿ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ರೈತ ಮುಖಂಡ ಭಗವಂತ ಪುಟ್ಟಣ್ಣವರ, ಪುರಸಭೆ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ಸಕ್ರಪ್ಪ ಪಲ್ಲೇದ, ನಿಂಗಪ್ಪ ಯಳವತ್ತಿ, ಮುದಕಪ್ಪ ಕಪ್ಪತ್ತನವರ, ಕೊಟ್ರಪ್ಪ ಗುರಿಕಾರ, ಮುಕ್ಕಣ್ನಪ್ಪ ಯಳವತ್ತಿ, ಸಾಗರ ಕಾಳಪ್ಪನವರ, ಈರಣ್ಣ ಪಟ್ಟೇದ, ದಾವಲಸಾಬ ದರವಾನ, ಪ್ರದೀಪ ಲೆಂಕಿನಗೌಡ್ರ, ಉಪಸ್ಥಿತರಿದ್ದರು.   

 

ENL Annigeri: To repair and develop various chakkadi roads in the town, MLA NH Konardy, who is known as the pioneer of chakkadi roads of Navlagunda Assembly Constituency, started by performing Guddali Puja on Bentoor Road Chakkadi Road.

The MLA who spoke later had earlier constructed the Chakkadi road during his administration and envisioned a smooth way for the farmers to travel to the fields. It has an ambitious goal of building more Chakkadi roads. It has repaired and developed the currently dilapidated Chakkadi roads with a grant from the government. He said that steps will be taken to construct a new Chakkadi road in the assembly constituency with the cooperation of farmers in other villages and with the help of the government.

24/7 supply of drinking water in the town Jaljeevan machine project for door to door water supply has been reviewed and implemented. The residents of 23 wards of the town have adequate drinking water

They are doing it.

On this occasion, Basanagowda Patil, Municipal President Raziyabegum Rokkadakatti, Vice President Vijayalakshmi Jakardi, Standing Committee Chairman Amritappa Meesi, former Standing Committee President Babajana Mullanavara, Municipal Congress Members, Annigeri Taluk Congress Block Committee President Manjunath Mayannavara, Farmers’ Leader Bhagwanth Puttannavara, Municipal Chief Executive Vy. G Gaddigowdara, Sakrappa Palleda, Ningappa Yalavatti, Mudakappa Kappatanavara, Kotrappa Gurikara, Mukkannappa Yalavatti, Sagara Kalappavanavara, Eranna Patteda, Davalasaba Daravana, Pradeepa Lenkinagoudra, were present.

Related posts

ಹುಬ್ಳಿಗೆ ಬಂತು ಎಲೆಕ್ಟ್ರಾನಿಕ್ ರೈಲು! ಎಸ್ಎಸ್ಎಸ್ ನಿಲ್ದಾಣದಲ್ಲಿ ಹೊಸ ಅಧ್ಯಾಯ ಆರಂಭ

eNewsLand Team

ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸವಿನೆನಪಿಗೆ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಉತ್ಸವ

eNEWS LAND Team

ವಿದ್ಯುತ್ ಚಾಲಿತ ವಾಹನಗಳ ನೋಂದಣಿ; ರಾಜ್ಯಕ್ಕೆ ಎಷ್ಟನೇ ಸ್ಥಾನ? ತಿಳ್ಕೋಬೇಕಾದ ಇಂಪಾರ್ಟೆಂಟ್ ವಿಷ್ಯ

eNewsLand Team