24.3 C
Hubli
ಮೇ 26, 2024
eNews Land
ಆಧ್ಯಾತ್ಮಿಕ ಸುದ್ದಿ

ಸರಿಯಾದ ಮಾರ್ಗದಲ್ಲಿ ನಡೆಯೋದು ಯೋಗ: ವಚನಾನಂದಶ್ರೀ

ಇಎನ್ಎಲ್‌ ಅಣ್ಣಿಗೇರಿ: ಜ್ಞಾನಕ್ಷೇತ್ರ, ಧ್ಯಾನಕ್ಷೇತ್ರ, ಬೌದ್ಧಿಕ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರ, ಹೀಗೆ ಜೀವನದ ಎಲ್ಲಾ ರಂಗಗಳಲ್ಲೂ ಸಾಧನೆ ಸಾಧನ ಯೋಗ ಮನಸ್ಸನ್ನು ಶುಚಿತ್ವಗೊಳಿಸಿ, ಸಮರ್ಥಗೊಳಿಸುವ ಮನಸ್ಸು ಪರಿಪಕ್ಷಗೊಳಿಸಿ ಅರಳಿಸುವ ಅದ್ಭುತ ಸಾಧನ ಎಂದು ಹರಿಹರದ ಪಂಚಮಸಾಲಿ ಮಠದ ವಚನಾನಂದ ಶ್ರೀಗಳು ಆರ್ಶೀವಚನದಲ್ಲಿ ನುಡಿದರು.ತಾಲೂಕಿನ ಮಣಕವಾಡ ಗ್ರಾಮದ ಅನ್ನದಾನೇಶ್ವರ ಮಠದ ಲಿಂ.ಮೃತ್ಯುoಜಯ ಶ್ರೀಗಳ ಐದನೇ ದಿನದ ಅಜ್ಜನ ಸಂಭ್ರಮ ಶಿವಾನುಭವ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ಬಯಕೆ ಈಡೇರಿಸುವ ಶಕ್ತಿ ಯೋಗದಲ್ಲಿದೆ. ನಿರಂತರ ಸಾಧನೆ ಮಾಡಬೇಕು. ಭಕ್ತಿಯೋಗ, ಧ್ಯಾನಯೋಗ, ಜ್ಞಾನಯೋಗ, ಕರ್ಮಯೋಗದಲ್ಲಿ ಪಡೆಯಬಹುದು. ಭಕ್ತಿಯೋಗ ಪ್ರತಿಯೊಬ್ಬರಿಗೆ ಪರಮ ಸುಖ ಸಂತೋಷ ನೆಮ್ಮದಿ ನೀಡುವ ಯೋಗ.ಭಕ್ತಿ ನದಿ ಇದ್ದಂಗೆ, ಗಂಗಾ ನದಿ ಇದ್ದಂಗ, ಭಕ್ತಿ ಮಾರ್ಗದ ಪಥ ಎಲ್ಲರೂ ಪ್ರವೇಶಿಸಬಹುದು. ಈ ಮಾರ್ಗದಲ್ಲಿ ತನು-ಮನದಿಂದ ನಡೆದರೆ ಪಾಪಿ ಸಂತನಾಗುವ ಅಪರೂಪದ ಪಥವೆಂದರು.ಭಕ್ತಿಯೋಗದ ಚಿಂತನೆ ಹೇಳುವುದು ಕೇಳುವುದು ಮುಖ್ಯವಲ್ಲ. ಅಸ್ತವ್ಯಸ್ತಗೊಳಸುವ ಸಂಗತಿ ಮರೆತು ಸತ್ಸಂಗದಲ್ಲಿ ಬೆರತು ಲಿಂ.ಮೃತ್ಯುoಜಯ ಶ್ರೀಗಳ ಅಜ್ಜನ ಸಂಭ್ರಮದಲ್ಲಿ ಬದುಕಿನುದ್ದಕ್ಕೂ ಭಕ್ತಿಯೋಗದ ಶಾಂತಿ ಉದ್ದೇಶ ಅನುಭವಿಸುವುದು ಮುಖ್ಯವೆಂದು ನುಡಿದರು.

ಸಾನಿಧ್ಯವಹಿಸಿದ್ದ ಅಭಿನವ ಮೃತ್ಯುಂಜಯ ಶ್ರೀಗಳು ಆರ್ಶೀವಚನದಲ್ಲಿ “ಸಿದ್ಧ: ಭವತಿ, ಅಮೃತ: ಭವತಿ, ತೃಪ್ತ: ಭವತಿ,”ಭಕ್ತಿ ಮತ್ತು ಭಕ್ತನಲ್ಲದವನ ಬದುಕು ಹೇಗಿರುತ್ತದೆ? ಭಕ್ತಿರಸವನ್ನು ತುಂಬಿದಾಗ ವ್ಯಕ್ತಿಯ ಬದುಕು ಹೇಗಿರುತ್ತದೆ. ಭಕ್ತನಾದವ ಹೇಗೆ ವಿಚಾರ ಮಾಡುತ್ತಾನೆ? ಹೇಗೆ ಕಾರ್ಯ ಮಾಡುತ್ತಾನೆ? ಆತನ ದೃಷ್ಟಿಕೋನುಗಳು ಹೇಗೆ ಬದಲಾಗುತ್ತವೆ? ಎಂಬುದನ್ನು ತಿಳಿಯಬೇಕಾದರೆ ಭಕ್ತಿ ಉಳ್ಳುವ ಭಕ್ತ, ಭಕ್ತಿ ಪರಮಪ್ರೇಮ. ಶ್ರೇಷ್ಠವಾದುದು. ಇತಿಮಿತಿಗಳನ್ನು ಕಳೆದುಕೊಂಡ ಅಪ್ರತಿಮ ಅಂತರಾತ್ಮದ ಭಕ್ತಿ ಪ್ರೇಮವನ್ನು ಪ್ರೀತಿಸಿದರೇ ನಮ್ಮ ದೃಷ್ಟಿ ಕೋನುಗಳು ಬದಲಾಗಿ ನರಕ ಸ್ವರ್ಗವಾಗಿ, ಬದುಕೆಲ್ಲಾ ಅದ್ಭುತವಾಗಿ, ಜಯ-ಅಪಜಯಗಳು ಮರೆಯಾಗುತ್ತವೆ. ಅದು “ಸಿದ್ಧ: ಭವತಿ”
ಭಕ್ತ ಭಕ್ತಿರಸವನ್ನು ಸವಿದಾಗ ಅಂತರಾಳದಲ್ಲಿ ಭಯ ಇರುವುದಿಲ್ಲ.ಹೊರಗಿನ ಭಯ ಮಾಯವಾಗುತ್ತದೆ. ಯಾರು ಎನೇ ಮಾಡಿದರೂ, ಕಷ್ಟ ಬಂದರೂ ಸಾವು,ಅಪಮಾನ, ಜಯ, ಅಪಜಯ, ಎಲ್ಲವನ್ನು ಸ್ವಾಗತಿಸೋದು ಅದು “ಅಮೃತ ಭವತಿ:”
ಅತೃಪ್ತಿಯ ಬದುಕಿನಲ್ಲಿ ಬದುಕುವುದಾದರೇ ಸಾಮಾನ್ಯ ಎನು? ಬದುಕಿನಲ್ಲಿ ಶಿಸ್ತು ಸಂತೃಫ್ತಿ ಮೈಗೂಡಿಸಿಕೊಂಡು ತೃಪ್ತಿ ಪಡುವುದು. ಅದು “ತೃಪ್ತಿ ಭವತಿ” ಭಕ್ತರು ಭಕ್ತಿಯಿಂದ ಬೇಕಾದಷ್ಟು ಬದಲಾವಣೆಗಳನ್ನು ಕಾಣಲು ಸಾಧ್ಯವೆಂದು ನುಡಿದರು.
ಈ ಸಂದರ್ಭದಲ್ಲಿ ನವಲಗುಂದ ಪುರಸಭೆ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಮಣಕವಾಡ, ಬೆನ್ನೂರು, ಹುಬ್ಬಳ್ಳಿ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಿದ್ದರು. ವಿರೇಶ ಕುಬಸದ ನಿರೂಪಿಸಿದರು.

 

Related posts

ಶರಣ ಧರ್ಮದ-ಲಿಂಗಾಯತ ಧರ್ಮದ ತಿರುಳು: ವ್ಯಕ್ತಿಯ ನೈತಿಕ ಬದುಕಿನ ಹುರುಳು

eNEWS LAND Team

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಬೆಳಗಾವಿ ಅಧಿವೇಶನ : ಸಿಎಂ

eNEWS LAND Team

ಡಿ. 18 ರಂದು ಮೆಗಾ ಲೋಕ ಅದಾಲತ್

eNEWS LAND Team