28.6 C
Hubli
ಏಪ್ರಿಲ್ 20, 2024
eNews Land
ಸುದ್ದಿ

ಹುಬ್ಬಳ್ಳಿ ಎಂ.ಜಿ. ಮಾರುಕಟ್ಟೆ ಅವ್ಯವಸ್ಥೆ ಸರಿಪಡಿಸಲು ಶಾಸಕ ಪ್ರಸಾದ ಅಬ್ಬಯ್ಯ ಸೂಚನೆ

ಇಎನ್ಎಲ್ ಧಾರವಾಡ: ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ದುರ್ಗದಬೈಲ್ ಹತ್ತಿರದ ಎಂ. ಜಿ. ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲನೆ ಮಾಡಿದರು.

 

ಎಂ. ಜಿ. ಮಾರುಕಟ್ಟೆಯಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಹಾಗೂ ಶೌಚಾಲಯ, ರಸ್ತೆಕಾಮಗರಿ , ಮಳೆನೀರಿನ ಸಮಸ್ಯೆ ಬಗ್ಗೆ ಸ್ಮಾರ್ಟ್ ಸಿಟಿ ಮತ್ತು ಮಹಾನಗರಪಾಲಿಕೆ ಅಧಿಕಾರಿಗಳು ಸಮಸ್ಯೆ ಅಲಿಸಿದರು.

ಶಾಸಕರು ಕೂಡಲೇ ಎಂ ಜಿ ಮಾರುಕಟ್ಟೆ ಯಲ್ಲಿನ ಅವ್ಯವಸ್ಥೆ ಸಮಸ್ಯೆ ಬಗೆಹರಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಆದೇಶಿಸಿದರು , ಸ್ವಚ್ಛ ಹಾಗೂ ಪಾರದರ್ಶಕ ಕೆಲಸ ಮಾಡಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು ಎಂದರು.

ಈ ವೇಳೆ ಪಟ್ಟಣ ಮಾರಾಟ ಸಮಿತಿ ಚುನಾಯಿತ ಪ್ರತಿನಿಧಿ ಜಾಫರ್ ಮುಲ್ಲಾನವರ್, ಬಿಲೇಪಸಾರ್, ಮೊಹಮ್ಮದ್ ಲೋದಿ, ರಫಿಕ ದಂಡೋತಿ, ಪರ್ಮಾ ಶೇಟ್,ನೂರಹ್ಮದ್, ಬಾಶಿರಹ್ಮದ್,ಇಕ್ಬಾಲ್, ಅಬ್ದುಲ್ ಘನಿ ಅದೋಣಿ,ಮನಿಯರ್, ಹಾಕಿಮಸಾಬ್, ಖಾದರ್ ಪಾಠವೇಗರ್ ಎಂ. ಜಿ. ಮಾರುಕಟ್ಟೆಯ ನೂರಾರು ವ್ಯಾಪಾರಸ್ಥರು ಹಾಜರಿದ್ದರು.

Related posts

ಡಿ.6ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ

eNEWS LAND Team

SOUTH WESTERN RAILWAY: CHANGE IN TRAIN SERVICES

eNEWS LAND Team

ಅಣ್ಣಿಗೇರಿ ಜನತೆಗೆ 24/7 ಕುಡಿಯುವ ನೀರು ಯಾವಾಗ? ದಾಹ ಇಂಗಿಸುವುದ್ಯಾವಾಗ?

eNEWS LAND Team