34 C
Hubli
ಏಪ್ರಿಲ್ 30, 2024
eNews Land
ಸುದ್ದಿ

ಲಿಂಗಾಯತ ಸಿಎಂಗಳಬಗ್ಗೆ ಸಿದ್ರಾಮಯ್ಯ ಹೇಳಿಕೆಗೆ ಜನ ಪಾಠ ಕಲಿಸುತ್ತಾರೆ: ಸಿಎಂ ಬೊಮ್ಮಾಯಿ‌

ಇಎನ್ಎಲ್ ಬೆಂಗಳೂರು: ಲಿಂಗಾಯತ ಸಿಎಂಗಳ ಬಗ್ಗೆ ಸಿದ್ದರಾಮಯ್ಯ ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಅವರೊಬ್ಬ ಹಿರಿಯ ನಾಯಕ. ಅವರು ಲಿಂಗಾಯತ ಸಮುದಾಯದ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯವನ್ನೇ ಭ್ರಷ್ಟ ಅನ್ನೋದು ತಪ್ಪು. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಇಂದು ಬಸವ ಜಯಂತಿ. ಇಂದಿನಿಂದ ನಮ್ಮ ಪ್ರಚಾರ ಆರಂಭಿಸುತ್ತಿದ್ದೇವೆ. ನಾವು ಬಸವ ತತ್ವದಡಿ ಆಡಳಿತ ನಡೆಸಿದ್ದೇವೆ. ಅದರ ಮೂಲಕವೇ ಪ್ರಚಾರ ಆರಂಭಿಸುತ್ತೇವೆ. ಸಿದ್ದರಾಮಯ್ಯ ಅವರು ಒಬ್ಬ ಹಿರಿಯ ನಾಯಕರಾಗಿ ಈ ರೀತಿಯ ಹೇಳಿಕೆ ನೀಡಬಾರದಿತ್ತು. ಅವರವರ ಸಮಾಜದ ನಾಯಕರು ಅವರ ಯೋಗ್ಯತೆ, ಕ್ಷಮತೆಯಲ್ಲಿ ಕೆಲಸ ಮಾಡುತ್ತಾರೆ. ಅವರ ಘನತೆಗೆ ಇದು ತಕ್ಕ ಹೇಳಿಕೆ ಅಲ್ಲ ಎಂದರು.

ರಾಹುಲ್ ಗಾಂಧಿ ಅವರು ಈ ಹಿಂದೆ ಮೋದಿ ಅವರ ಹೆಸರಿಗೆ ಕೊಟ್ಟ ಹೇಳಿಕೆಯ ರೀತಿಯಲ್ಲಿ ಸಿದ್ದರಾಮಯ್ಯ ಈಗ ಮಾತಡಿದ್ದಾರೆ. ಮುಂದಿನ ದಿನಗಳಲ್ಲಿ ಜನತೆ ಇದಕ್ಕೆ ಉತ್ತರ ಕೊಡುತ್ತಾರೆ. ತಕ್ಕ ಪಾಠ ಕಲಿಸುತ್ತಾರೆ ಎಂದರು.

Related posts

“ಒಂದು ರೂಪಾಯಿ” ಶುಲ್ಕದಲ್ಲಿ ಕೆಎಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

eNEWS LAND Team

ಅವಶ್ಯಕತೆ ಅನುಸಾರವಾಗಿ ಯೋಜನಾ ವರದಿ ತಯಾರಿಸಿ: ಎನ್.ಎಫ್.ಕಟ್ಟೆಗೌಡರ

eNEWS LAND Team

ಹುಬ್ಬಳ್ಳಿ: ಖತರ್ನಾಕ ಕಿಲ್ಲರ್: ಭಿಕ್ಷುಕರೇ ಟಾರ್ಗೆಟ್!!

eNEWS LAND Team