28 C
Hubli
ಸೆಪ್ಟೆಂಬರ್ 21, 2023
eNews Land
ಸುದ್ದಿ

ಸೂಫಿ ಸಂತರು ಶಿರಸಂಗಿ ಲಿಂಗರಾಜರ ಅಭಿನವ ಸಂಬಂಧಕ್ಕೆ ಸಾಕ್ಷಿಯಾಗಿದೆ:ಬಸವಲಿಂಗ ಶ್ರೀಗಳು.

ಇಎನ್ಎಲ್ ನವಲಗುಂದ : ಶಿರಸಂಗಿ ಲಿಂಗರಾಜರ ಆಳ್ವೀಕೆಯಲ್ಲಿಯೇ ಸೂಪಿ ಸಂತರ ಜೊತೆ ಅಭಿನವ ಸಂಬಂಧವಿದೆ. ಸೂಪಿ ಸಂತರಲ್ಲಿ ಲಿಂಗರಾಜರು ಭಕ್ತಿ ಭಾವದಿಂದ ನಡೆದುಕೊಂಡು ಅವರು ಇಲ್ಲಿಯ ವಾಸಮಾಡಬೇಕೆಂದು ಜಮೀನುಗಳನ್ನು ನೀಡಿ ಸೂಪಿ ಸಂತರನ್ನು ಉಳಿಸಿಕೊಂಡು ಅವರ ಸಲಹೆಗಳನ್ನು ಪಡೆಯುತ್ತಿರುವದು ಭಾವ್ಯಕ್ಯತೆಗೆ ಹಾಕಿರುವಂತಹ ಬೂನಾದಿಯಾಗಿದೆ ಎಂದು ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಪಟ್ಟಣದ ದಾನವೀರ ಶಿರಸಂಗಿ ಲಿಂಗರಾಜರ 161 ನೇ ಜಯಂತಿಯಂದು ಸೂಪಿ ಸಂತರ ದರ್ಗಾಕ್ಕೆ ಆಗಮಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು.

ಪಟ್ಟಣದ ಸಾರ್ವಜನಿಕರ ಮೂಲ ಸೌಲಭ್ಯಗಳಾದ ಕುಡಿಯುವ ನೀರು ಬಳಕೆಗೆ ಕೆರೆ, ಧಾರ್ಮಿಕ ಕಾರ್ಯಗಳಿಗೆ ಭೂ ದಾನಗಳಂತಹ ಅನೇಕ ರೀತಿಯ ಸಾಮಾಜಿಕ ಕಾರ್ಯಗಳಿಗೆ ಶಿರಸಂಗಿ ಲಿಂಗರಾಜರ ಕೊಡುಗೆ ಅಪಾರ ಅದ್ಬುತವಾಗಿದೆ ಅವರ ನಡೆದಾಡಿದಂತಹ ನಾಡಿನಲ್ಲಿ ಅವರ ನೆನಪು ಉಳಿಯುವಂತೆ ಲಿಂಗರಾಜರ ಅಭಿಮಾನಿಗಳು ಮಾಡಬೇಕಾಗಿದೆ ಎಂದು ಹೇಳಿದರು.
ದರ್ಗಾದ ಹಿರಿಯರಾದ ರಿಯಾಜ ಪೀರಜಾದಿ ಮಾತನಾಡಿ ಶಿರಸಂಗಿ ಲಿಂಗರಾಜರ ಆಡಳಿತದ ಅವಧಿಯಲ್ಲಿ ಜಾಯಗೊಂಡರು ಆನಾರೋಗ್ಯದಲ್ಲಿದ್ದಾಗ ಈ ಭಾಗದಲ್ಲಿ ಸಂಚರಿಸುತ್ತಾ ಬಂದ ಸೂಪಿ ಸಂತರು ಜಾಯಗೊಂಡ ಲಿಂಗರಾಜರನ್ನು ಆರೋಗ್ಯ ಸುದಾರಿಸಿದ್ದರು ಸಂತರ ಮಾಡಿದ ಉಪಕಾರವಾಗಿ ಅವರಿಗೆ ಜಮೀನು ನೀಡಿ ನೀವು ಇಲ್ಲಿಯ ಇರಬೇಕೆಂದು ಅವರ ಜೊತೆಗೆ ಅಂದಿನಿಂದ ಎಲ್ಲ ರೀತಿಯ ಗೌರವ ನೀಡಿರುವುದು ಇಲ್ಲಿ ಸ್ಮರಿಸಬಹುದು. ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಉಳಿದಿರುವ ಶಿರಸಂಗಿ ಲಿಂಗರಾಜ ಕಿರು ಪುಸ್ತಕವನ್ನು ಬಿಡುಗಡೆ ಮಾಡಲು ಲಿಂಗರಾಜ ಟ್ರಸ್ಟ ಮುಂದಾಗಬೇಕ ಅಂದಾಗ ಮುಂದಿನ ಪೀಳಿಗೆಯವರಿಗೆ ಇತಿಹಾಸದ ಚಿತ್ರಣ ಉಳಿಯಲು ಸಾದ್ಯವೆಂದು ಹೇಳಿದರು.
ಹಿರಿಯರಾದ ರಾಯನಗೌಡ ಪಾಟೀಲ ಮಾತನಾಡಿ ಶಿರಸಂಗಿ ಲಿಂಗರಾಜರು ಸೂಪಿ ಸಂತರ ಜೊತೆಗೆ ಒಳ್ಳೇಯ ಬಾಂಧವ್ಯ ಇರುವುದರಿಂದ ಅಂದಿನಿಂದಲೂ ಲಿಂಗರಾಜರ ಜಯಂತಿಯಂದು ಶಿರಸಂಗಿ ಲಿಂಗರಾಜರ ಸಮಾಧಿಗೆ ಪೂಜೆ ಸಲ್ಲಿಸಿ ಸೂಪಿ ಸಂತರ ದರ್ಗಾದಲ್ಲಿ ಪೂಜೆ ಸಲ್ಲಿಸುತ್ತಾ ಬಂದಿರುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ನಿಂಗಪ್ಪ ಹಳ್ಳದ, ಪುರಸಭೆ ಸದಸ್ಯ ಪ್ರಕಾಶ ಶಿಗ್ಲಿ, ಗೀತಾ ಜನ್ನರ, ಅಡಿವೆಪ್ಪ ಶಿರಸಂಗಿ, ಎಮ್.ಬಿ.ತೋಟಿ, ಮುಖಂಡರಾದ ನಾಗಪ್ಪ ಸಂಗಟಿ, ಮೈನುದ್ದೀನ ಪೀರಜಾದಿ, ನೇತಾಜಿ ಕಲಾಲ, ಸಕ್ರಪ್ಪ ಹಳ್ಳದ, ಬಸವರಾಜ ಬಸೇಗೂಣ್ಣವರ, ಅಬ್ಬಾಸ ದೇವರಿಡು, ಮಂಜುನಾಥ ಸುಬೇದಾರ, ಮಲ್ಲಿಕಾರ್ಜುನ ಜವಳಗಿ, ಬಸವರಾಜ ನರಗುಂದ, ವೀರುಪಾಕ್ಷಪ್ಪ ಕುಡವಕ್ಕಲಗೇರ, ಶೇಖರಪ್ಪ ಇನಾಮತಿ, ಯಲ್ಲಪ್ಪ ಹಳ್ಯಾಳ, ಶಿವಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ಜಲಾದಿ.

Related posts

ನಾಡೋಜ ಡಾ.ಚೆನ್ನವೀರ ಕಣವಿ ಆರೋಗ್ಯ ಚೇತರಿಕೆ ಸಿಎಂ ಭರವಸೆ

eNEWS LAND Team

ಮಾರ್ಕೆಟ್ ಓಪನಿಂಗ್ ಹೇಗಿದೆ?

eNewsLand Team

ಅಸಮಾನತೆ ತೊಡೆಯುವಲ್ಲಿ ಅಂಬೇಡ್ಕರ್ ಬಸವಣ್ಣನವರ ಪಾತ್ರಮುಖ್ಯ: ಡಾ.ಎ.ಸಿ.ವಾಲಿ

eNewsLand Team