22 C
Hubli
ಮಾರ್ಚ್ 24, 2023
eNews Land
ಸುದ್ದಿ

ಶಿರಸಂಗಿ ದೇಸಾಯಿಯವರ ಸ್ಥಳ ಪ್ರೇಕ್ಷಣೆಯ ಸ್ಥಳವಾಗಬೇಕು:ಬಸವಲಿಂಗ ಶ್ರೀಗಳು

Listen to this article

ಇಎನ್ಎಲ್ ನವಲಗುಂದ : ದಾನವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ಕೊಡುಗೆ ಅಪಾರವಾಗಿದೆ ಅಂತಹ ಮಹನೀಯರ ಸ್ಥಳವನ್ನು ಪ್ರೇಕ್ಷಣೆಯ ಸ್ಥಳವನ್ನಾಗಿ ಮಾಡಲು ಲಿಂಗರಾಜ ಟ್ರಸ್ಟ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಪಟ್ಟಣದ ತಡಿಮಠದಲ್ಲಿ ದಾನವೀರ ಶಿರಸಂಗಿ ಲಿಂಗರಾಜರ 161 ನೇ ಜಯಂತಿಯಂದು ಅವರ ಸಮಾಧಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಆಶಿರ್ವಚನ ನೀಡಿದರು.
ಪಟ್ಟಣದ ಸಾರ್ವಜನಿಕರ ಮೂಲ ಸೌಲಭ್ಯಗಳಾದ ಕುಡಿಯುವ ನೀರು ಬಳಕೆಗೆ ಕೆರೆ, ಧಾರ್ಮಿಕ ಕಾರ್ಯಗಳಿಗೆ ಭೂ ದಾನಗಳಂತಹ ಅನೇಕ ರೀತಿಯ ಸಾಮಾಜಿಕ ಕಾರ್ಯಗಳಿಗೆ ಶಿರಸಂಗಿ ಲಿಂಗರಾಜರ ಕೊಡುಗೆ ಅಪಾರ ಅದ್ಬುತವಾಗಿದೆ ಅವರ ನಡೆದಾಡಿದಂತಹ ನಾಡಿನಲ್ಲಿ ಅವರ ನೆನಪು ಉಳಿಯುವಂತೆ ಲಿಂಗರಾಜರ ಅಭಿಮಾನಿಗಳು ಮಾಡಬೇಕಾಗಿದೆ ಎಂದು ಹೇಳಿದರು.
ಹಿರಿಯರಾದ ರಾಯನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಶಿರಸಂಗಿ ಲಿಂಗರಾಜರ ಆಡಳಿತದ ಅವಧಿಯಲ್ಲಿ ನವಲಗುಂದ ಪಟ್ಟಣ ವ್ಯಾಪಾರಕ್ಕೆ ಪ್ರಸಿದ್ದಿಯಾಗಿದ್ದು ಇಲ್ಲಿಯ ನವಿಲುಗರಿ ವಿಜಯಪುರ ದರ್ಬಾರಕ್ಕೆ ರವಾನಿಯಾಗುತ್ತಿದ್ದು ಆದರೆ ಇವತ್ತು ಪಟ್ಟಣ ವ್ಯಾಪಾರದಿಂದ ವಂಚಿತವಾಗಿದೆ. ಶಿರಸಂಗಿ ಲಿಂಗರಾಜರು ಶಿಕ್ಷಣ ಪ್ರೇಮಿಗಳಾಗಿದ್ದರು ಹಾಗೂ ಶಿರಸಂಗಿ ಲಿಂಗರಾಜರು ನೀಡಿದ ಪಟ್ಟಣ ನೀಲಮ್ಮನ ಕೆರೆ ಇತರೆ ದಾನ ನೀಡಿದ ಸ್ಥಳಗಳಿಗೆ ಪುರಸಭೆ ಮುತುವರ್ಜಿ ವಹಿಸಿ ಪ್ರತಿವರ್ಷವು ಅವುಗಳ ಅಭಿವೃದ್ದಿಗೆ ಹಣವನ್ನು ತೆಗೆದಿಟ್ಟು ಅವರ ಕೊಟ್ಟುಂತಹವುಗಳನ್ನು ಉಳಿಸಿಕೊಂಡು ಹೋಗೂಣವೆಂದು ಹೇಳಿದರು.
ಲಿಂಗರಾಜ ಟ್ರಸ್ಟಿ ನಿರ್ದೇಶಕರಾದ ಲಿಂಗರಾಜ ಎಸ್ ದೇಸಾಯಿಯವರು ಮಾತನಾಡಿ ಶ್ರೀಗಳು ಹಾಗೂ ಅಭಿಮಾನಿಗಳು ಲಿಂಗರಾಜ ವಾಡೆ, ತಡಿಮಠ ಪಟ್ಟಣದಲ್ಲಿರುವ ಮಹಾದಾನಿ ಶಿರಸಂಗಿ ಲಿಂಗರಾಜರ ಕುರುಹುಗಳನ್ನು ಉಳಿಸಿಕೊಂಡು ಹೋಗಲು ಶ್ರಮಿಸಿದ್ದಾರೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಜೀರ್ಣೂದ್ದಾರ ಮಾಡೊಣವೆಂದು ಹೇಳಿದರು.
ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ ಹಾಗೂ ಮುಖ್ಯಾಧಿಕಾರಿ ವೀರಪ್ಪ ಹಸಬಿ ಮಾತನಾಡಿ ಪುರಸಭೆಯಿಂದ ನೀಲಮ್ಮನ ಕೆರೆ ಅಭಿವೃದ್ದಿಗೆ ನೀಲನಕ್ಷೆಯನ್ನು ಹಾಕಿಕೊಂಡಿರುತ್ತೇವೆ. ಮಹಾದಾನಿಗಳ ಪುಣ್ಯಕ್ಷೇತ್ರವಾದ ಶಿರಸಂಗಿ ಲಿಂಗರಾಜ ಹೆಸರು ಅಜರಾಮರವಾಗಿ ಉಳಿಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತೇವೆಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ನಿಂಗಪ್ಪ ಹಳ್ಳದ, ಪುರಸಭೆ ಸದಸ್ಯ ಪ್ರಕಾಶ ಶಿಗ್ಲಿ, ಗೀತಾ ಜನ್ನರ, ಅಡಿವೆಪ್ಪ ಶಿರಸಂಗಿ, ಎಮ್.ಬಿ.ತೋಟಿ, ಮುಖಂಡರಾದ ಸಕ್ರಪ್ಪ ಹಳ್ಳದ, ಬಸವರಾಜ ಬಸೇಗೂಣ್ಣವರ, ಮಂಜುನಾಥ ಸುಬೇದಾರ, ಮಲ್ಲಿಕಾರ್ಜುನ ಜವಳಗಿ, ಬಸವರಾಜ ನರಗುಂದ, ವೀರುಪಾಕ್ಷಪ್ಪ ಕುಡವಕ್ಕಲಗೇರ, ಯಲ್ಲಪ್ಪ ಹಳ್ಯಾಳ, ಶಿವಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ಜಲಾದಿ ಇತರರು ಇದ್ದರು. ನಾಗಪ್ಪ ಸಂಗಟಿ ಸ್ವಾಗತಿಸಿದರು. ಶೇಖರಪ್ಪ ಇನಾಮತಿ ವಂದಿಸಿದರು.

Related posts

ಸನ್ನಡತೆ; ಐದು ಜೈಲು ಹಕ್ಕಿಗಳೀಗ ಫ್ರೀ ಬರ್ಡ್ಸ್!! ಯಾರವರು??

eNewsLand Team

2021-22ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭ ; ರೈತರೇ ಸ್ವತ: ಬೆಳೆ ಸಮೀಕ್ಷೆ ಮಾಡಬಹುದು

eNEWS LAND Team

ಬಂಜಾರ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಅಗತ್ಯ ನೆರವು: ಸಿಎಂ ಬೊಮ್ಮಾಯಿ

eNEWS LAND Team