34 C
Hubli
ಮಾರ್ಚ್ 23, 2023
eNews Land
ಸುದ್ದಿ

ಹೆಣ್ಮಕ್ಕಳ್ಳೇ ಸ್ಟ್ರಾಂಗು ಗುರು: ಬಿಇಓ ಉಮಾದೇವಿ ಬಸಾಪೂರ

Listen to this article

ಇಎನ್ಎಲ್ ಕಲಘಟಗಿ : ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಹೆಚ್ಚಿನ ಅಂಕ ಗಳಿಸಿ ಸೇನೆ, ವೈದ್ಯಕೀಯ ಸೇವೆ, ಕ್ರೀಡೆ, ಮುಂತಾದ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾಳೆ. ಆದ್ದರಿಂದ ಮಹಿಳೆಯರು ಶಿಕ್ಷಣ ಪಡೆದಾಗ ಜೀವನದಲ್ಲಿ ಎಂತಹ ಸವಾಲನ್ನು ಎದುರಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಹೇಳಿದರು.

ಇದನ್ನೂ ಓದಿ:ಕುಂದಗೋಳ; ಕಾರ್ಯಕ್ರಮಕ್ಕೆ ಗೈರಾಗಿ ಸಣ್ಣತನ ಪ್ರದರ್ಶಿಸಿದರಾ ಶಾಸಕಿ ಕುಸುಮಾವತಿ?

ತಾಲೂಕಿನ ದೇವಿಕೂಪ್ಪ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಕಲಘಟಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್’ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿ ,  ಮಹಿಳೆ ತನ್ನ ಹಕ್ಕಿಗಾಗಿ ಹೋರಾಟ ಮಾಡುವ ಮನೋಭಾವನೆ ಬೆಳಸಿಕೂಳ್ಳಬೇಕು, ಆಗ ವಿವಿಧ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.

ಇದನ್ನೂ ಓದಿ:ಹುಬ್ಬಳ್ಳಿ: ಖತರ್ನಾಕ ಕಿಲ್ಲರ್: ಭಿಕ್ಷುಕರೇ ಟಾರ್ಗೆಟ್!!

ಇಂದು ರಾಜ್ಯದಲ್ಲಿ ಶೇ.57ರಷ್ಟು ಮಹಿಳಾ ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಪುರುಷನಿಗಿಂತ ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲದಂತೆ ಮಹಿಳೆಯರು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು .

ಇದನ್ನೂ ಓದಿ:ನಡಕಟ್ಟಿನ ದಂಪತಿಗೆ ತೋಂಟದ ಸಿದ್ಧಲಿಂಗ ಶ್ರೀಗಳ ರಾಜ್ಯ ಪ್ರಶಸ್ತಿ ಹಾಗೂ ಸನ್ಮಾನ

ಕ.ಸಾ.ಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ಮಹಿಳೆಯರಿಗೆ ಇನ್ನೂ ಸಮಾನವಾದ ಅವಕಾಶ ಸಿಗುತ್ತಿಲ್ಲ, ಗಂಡು ಹೆಣ್ಣು ತಾರತಮ್ಯ ಹೋಗಬೇಕು, ಮಹಿಳೆಯರಿಗೆ ಸರಿಯಾದ ಗೌರವ ಸಿಗಬೇಕು, ಕುಟಂಬದ ಅಭಿವೃದ್ಧಿಯಾಗಲು ತಾಯಿಯ ಕೊಡುಗೆ ಅಪಾರವಾಗಿದೆ, ಗ್ರಾಮೀಣ ಭಾಗದ ಮಹಿಳೆಯರು ಮುಂದೆ ಬರಬೇಕು, ಇಂದಿನ ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ:.ನವೀನ್ ಪಾರ್ಥಿವ ಶರೀರ ಸೋಮವಾರ ಬೆಂಗಳೂರಿಗೆ: ಸಿಎಂ ಬೊಮ್ಮಾಯಿ

ಸ್ವಪ್ನಾ ಅರ್ಕಸಾಲಿ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಪುರದನಗೌಡ್ರ, 2022ನ್ನು “ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆಯ ಗುರಿ ಇಟ್ಟುಕೊಂಡು ” ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು.

ಇದನ್ನೂ ಓದಿ:ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಗೌರವ ಸಮರ್ಪಣೆ: ರೇಖಾ ಡೊಳ್ಳಿನವರ

ಈ ವೇಳೆ ಪರಮಾನಂದ ಒಡೆಯರ, ವಿ.ಬಿ ಕುಬಸದ, ಕುಮಾರ ಕೆ.ಎಫ್, ಹುಲೆಪ್ಪ ಭೋವಿ, ಸೌಮ್ಯ ನಾಯಕಿ, ವೀಣಾ ಎಂ,ರತ್ನಾ ಹೆಗಡೆ, ಜಯಾ ಹೊನ್ನಕಳಸಿ, ವಿಜಯಲಕ್ಷ್ಮಿ ಭರಾಡೆ, ಉಮೇಶ ಜೋಶಿ, ರವಿ ಬಡಿಗೇರ, ಪ್ರಕಾಶ ಲಮಾಣಿ, ಕಲ್ಲಪ್ಪ ಮಿರ್ಜಿ, ಪ್ರಭುಲಿಂಗಪ್ಪ ರಂಗಾಪೂರ, ರಮೇಶ ಸೋಲಾರಗೋಪ್ಪ, ಶಶಿ ಕಟ್ಟಿಮನಿ, ನಿತೀಶ ಪಾಟೀಲ ,ಉದಯ ಗೌಡರ, ಶಾಲಾ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಭಾರತ ದೇಶದ ಆತ್ಮ ಆಧ್ಯಾತ್ಮ ಧರ್ಮ: ಬಿ.ವೈ.ವಿಜಯೇಂದ್ರ

 

Related posts

ಅಣ್ಣಿಗೇರಿ: ಬೆಳೆಹಾನಿ ಪರಿಹಾರಕ್ಕೆ  ಪಕ್ಷಾತೀತ ರೈತ ಸಂಘದ ಆಗ್ರಹ

eNEWS LAND Team

ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ

eNEWS LAND Team

2-3 ದಿನದಲ್ಲೇ ಕೋವಿಡ್ ಡಬಲ್: ಧಾರವಾಡ ಡಿಸಿ ಹೇಳಿದ್ದೇನು ಗೊತ್ತಾ?

eNewsLand Team