28 C
Hubli
ಸೆಪ್ಟೆಂಬರ್ 21, 2023
eNews Land
ಸಿನೆಮಾ ಸುದ್ದಿ

ಕೋಟಿಗೊಬ್ಬ-3 ಹಾಟ್ ಬ್ಯೂಟಿ ಶ್ರದ್ಧಾ ದಾಸ್ ಈ ಫೋಟೋ ನೋಡಿದ್ರೆ ಹುಡುಗರು ಹಿಟ್ ವಿಕೇಟ್!

‌ಇಎನ್ಎಲ್ ಫಿಲ್ಮ್ ಡೆಸ್ಕ್

ಕೋಟಿಗೊಬ್ಬ 3 ನಲ್ಲಿ ಇಂಟರ್ ಪೋಲ್ ಅಧಿಕಾರಿಯಾಗಿದ್ದರೂ ಬಿಕಿನಿಯಲ್ಲಿ ಕಾಣಿಸಿ ಬಿಸಿಯುಸಿರು ಏರಿಸಿದ್ದ ಶ್ರದ್ಧಾ ದಾಸ್ ಮತ್ತೆ ಹುಡುಗರ ಹಾರ್ಟಿಗೆ ಕನ್ನ ಹೊಡೆದಿದ್ದಾರೆ.

 

ಈ ಬಾರಿ ಸ್ವಿಮ್ಮಿಂಗ್ ಫೂಲ್ ಒಳಗಿದ್ದು ಗುಲಾಬಿ ಧಿರಿಸು ತೊಟ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಶೃದ್ಧಾ ನ್ಯಾಚುರಲ್ ಬ್ಯೂಟಿಗೆ ನೆಟ್ ಬಾಯ್ಸ್ ಹಿಟ್ ವಿಕೆಟ್ ಆಗಿದ್ದಾರೆ.

ಈ ಮುಂಬೈ ಬೆಡಗಿ ಕೆ-3 ದಲ್ಲಿ ಹಿರೋಯಿನ್ ಮೊಡೋನಾ ಸೆಬಾಸ್ಟಿಯನ್’ಗಿಂತ  ಹೆಚ್ಚು ಗಮನ ಸೆಳೆದಿದ್ದರು.

ಸಿನಿಮಾದಲ್ಲಿ ಸಿಕ್ಕ ಅವಕಾಶಗಳಿಗೆ ಸಂಪೂರ್ಣ ನ್ಯಾಯ ಒದಗಿಸುವ ಈಕೆ ಗುಂಟೂರು ಟಾಕೀಸ್​ ಸಿನಿಮಾದಲ್ಲಿ ಸಖತ್ ಹಾಟ್ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಇವರ ಡಿಮ್ಯಾಂಡ್​ ಹೆಚ್ಚಿತ್ತು.

ಸದಾ ಇನ್ಸ್ಟಾಗ್ರಾಂನಲ್ಲಿ ತಮ್ಮ ಸೌಂದರ್ಯ ಬಿಚ್ಚಿಡುವ ಶ್ರದ್ಧಾ, ಸಿನಿಮಾಗಳು, ಶಾರ್ಟ್ ಮೂವಿಗಳು ಹಾಗೂ ವೆಬ್ ಸೀರಿಸ್ ಗಳ ಮೂಲಕ ಸಾಕಷ್ಟು ಬ್ಯುಸಿ ಇದ್ದಾರೆ. ಈಚೆಗೆ ಇನ್ಸ್ಟಾದಲ್ಲಿ ಹಾಕಿದ್ದ ಬಿಕಿನಿ ಫೋಟೋ ಸಾಕಷ್ಟು ಸದ್ದು ಮಾಡಿತ್ತು.

2008ರಲ್ಲಿ ‘ಸಿದ್ದು ಫ್ರಮ್‌ ಸಿಕಾಕುಳಂ’ ಮೊದಲ ಬಾರಿಗೆ ಶ್ರದ್ಧಾ ನಟಿಸಿದರು. 2012ರಲ್ಲಿ ಹೊಸ ಪ್ರೇಮ ಪುರಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಬಳಿಕ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಅದರಲ್ಲಿ ಪ್ರಮುಖವಾಗಿ ‘ಆರ್ಯ 2’ ಕೂಡ ಒಂದು. ಸದ್ಯ ಕನ್ನಡ, ತೆಲುಗು, ಬೆಂಗಾಲಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಶ್ರದ್ಧಾ ಜರ್ನಲಿಸಂನಲ್ಲಿ ಪದವಿ ಪಡೆದಿದ್ದು, ಸದಾ ಯೋಗ ಮಾಡುತ್ತಾರೆ ಈ ಬಹುಭಾಷಾ ನಟಿಗೆ ಪ್ರಾಣಿಗಳೆಂದರೆ ಮುದ್ದು.

 

 

ಶ್ರದ್ಧಾ ನಟಿಸಿರುವ ಸ್ಲೀಪರ್ ಸೆಲ್ ಇನ್ನಷ್ಟೇ ತೆರೆ ಕಾಣಬೇಕಿದೆ.

 

 

Related posts

ಡಾರ್ಲಿಂಗ್ ಕೃಷ್ಣ “ದಿಲ್ ಪಸಂದ್” ಫಸ್ಟ್ ಲುಕ್ ಸೂಪರ್!

eNewsLand Team

ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

eNEWS LAND Team

ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ: ಪಿ.ಎಸ್. ವಸ್ತ್ರದ

eNEWS LAND Team