35 C
Hubli
ಮಾರ್ಚ್ 28, 2023
eNews Land
ಸುದ್ದಿ

ಕಿತ್ತೂರು ಅರಮನೆ ಪ್ರತಿರೂಪ ನಿರ್ಮಾಣ: ಡಿಪಿಆರ್ ಸಲ್ಲಿಸಲು ಮುಖ್ಯಮಂತ್ರಿ ಸೂಚನೆ

Listen to this article

ಇಎನ್ಎಲ್ ಬೆಳಗಾವಿ:

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವು ಕಿತ್ತೂರು ಸಂಸ್ಥಾನದ ಅರಮನೆಯ ಪ್ರತಿರೂಪವನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಈ ಪರಿಕಲ್ಪನೆಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಡಿ.ಪಿ.ಆರ್., ಅಂದಾಜುಪಟ್ಟಿ, ನೀಲನಕ್ಷೆಗಳನ್ನು ಸಿದ್ಧಪಡಿಸಿ, ಅನುಮೋದನೆಗಾಗಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.

ಅವರು ಇಂದು ಸುವರ್ಣ ವಿಧಾನಸೌಧದಲ್ಲಿ ಪ್ರಾಧಿಕಾರವು ಈ ಯೋಜನೆಯ ಕುರಿತ ಪ್ರದರ್ಶಿಸಿದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಕಿತ್ತೂರು ಕೋಟೆಯ ಆವರಣದಲ್ಲಿರುವ ಅರಮನೆಯ ಅವಶೇಷಗಳನ್ನು ಸಂರಕ್ಷಿಸುವಂತೆಯೂ ಈ ಸಂದರ್ಭದಲ್ಲಿ ಸೂಚಿಸಿದರು.

ಈ ಉದ್ದೇಶಿತ ಅರಮನೆಯಲ್ಲಿ ಕಿತ್ತೂರು ಸಂಸ್ಥಾನದ ಇತಿಹಾಸ, ಚನ್ನಮ್ಮಳ ಹೋರಾಟ, ಸ್ಥಳೀಯ ಸಂಸ್ಕೃತಿ, ಜನಜೀವನ ಬಿಂಬಿಸಲು ಬಹುಮಾಧ್ಯಮ ಬಳಕೆ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಪ್ರಾಧಿಕಾರ ಸದಸ್ಯರುಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ರೆಡ್ ರೋಸ್ ಕೊಡಲು ಹೋಗಿ, ಪೊಲೀಸರ ಅತಿಥಿಯಾದ ಕಾಂಗ್ರೆಸಿಗರು

eNEWS LAND Team

ಯೋಗ ಮಾಡೋಕೆ ಮೈಸೂರಿಗೆ ಬರ್ತಾರೆ ಪ್ರಧಾನಿ ನರೇಂದ್ರ ಮೋದಿಜಿ!

eNewsLand Team

ಆಸ್ಪತ್ರೆಗೆ ಮಗು ತೋರಿಸಲು ಬಂದ ದಂಪತಿ ಅಪಘಾತದಲ್ಲಿ ಸಾವು, ಮಗು ಸ್ಥಿತಿ ಹೇಗಿದೆ?

eNewsLand Team