ಮೇ 3, 2024
eNews Land
ರಾಜ್ಯ ಸುದ್ದಿ

ಹುಬ್ಬಳ್ಳಿ ಈ ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿ..? ಯಾವ್ದು ಗೊತ್ತಾ!!

ಇಎನ್ಎಲ್ ಬೆಂಗಳೂರು

ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ೨೦೨೦, ೨೦೨೧, ೨೦೨೨ ಹಾಗೂ ೨೦೨೩ನೇ ಸಾಲಿನ ʻ ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದುವಟ್ಟು ದತ್ತಿ ಪ್ರಶಸ್ತಿʼ ಪ್ರಕಟಿಸಲಾಗಿದೆ. ಮಹಾತ್ಮಾ ಗಾಂಧಿ ವಿಚಾರ ಧಾರೆಯನ್ನು ಪ್ರತಿಪಾದಿಸುತ್ತಾ ಅವರ ದಾರಿಯಲ್ಲಿ ಮುನ್ನಡೆದು ನಾಡು ನುಡಿಯ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ನೀಡುವ ಮಹತ್ವದ ಪ್ರಶಸ್ತಿ ಇದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಗಾಂಧಿವಾದಿ, ಸಾಹಿತಿಗಳಾದ ಎ. ಆರ್. ನಾರಾಯಣರಾವ್ ಘಟ್ಟ ಅವರು ʻ ಎ.ಆರ್.ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದುವಟ್ಟು ದತ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದು, ಮಹಾತ್ಮಾ ಗಾಂಧಿ ಅವರ ವಿಚಾರ, ಸಾಹಿತ್ಯ, ಗಾಂಧಿ ಜೀವನ ಸಾಧನೆ, ಸಾಹಿತ್ಯ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ, ಖಾದಿ ಮತ್ತು ಗ್ರಾಮೋದ್ಯೊಗ, ಪಾನ ನಿರೋಧ, ಅಸ್ಪೃಶ್ಯತಾ ನಿರ್ಮೂಲನೆ, ಕೋಮು ಸಾಮರಸ್ಯ ಸೇರಿದಂತೆ ಇತರ ಗಾಂಧಿ ತತ್ವಗಳನ್ನು ಪ್ರತಿಪಾದಿಸುವ ವ್ಯಕ್ತಿಗಳಿಗೆ ಅಥವಾ ಅಂತಹ ಸಂಘ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡುವುದು ದತ್ತಿ ದಾನಿಗಳ ಆಶಯವಾಗಿದೆ. ಪ್ರಶಸ್ತಿಯು ತಲಾ ೧೦,೦೦೦ (ಹತ್ತು ಸಾವಿರ) ರುಪಾಯಿ ನಗದು, ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ’ ತಿಳಿಸಿದ್ದಾರೆ.
ದತ್ತಿ ದಾನಿಗಳ ಆಶಯದಂತೆ ಗಾಂಧಿ ವಿಚಾರಧಾರೆಯಲ್ಲಿ ಕೆಲಸ ಮಾಡುತ್ತಿರವ ಸೂಕ್ತ ವ್ಯಕ್ತಿಗಳನ್ನು ʻ ಎ.ಆರ್.ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದುವಟ್ಟು ದತ್ತಿ ಪ್ರಶಸ್ತಿʼಗಾಗಿ ಆಯ್ಕೆ ಮಾಡಲಾಗಿದೆ. ೨೦೨೦ನೇ ಸಾಲಿನ ʻ ಎ.ಆರ್.ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದುವಟ್ಟು ದತ್ತಿ ಪ್ರಶಸ್ತಿʼಯನ್ನು ಬೆಂಗಳೂರಿನ ಶ್ರೀ ಕೋದಂಡರಾಮು, ೨೦೨೧ ನೇ ಸಾಲಿನ ಪ್ರಶಸ್ತಿಯನ್ನು ಧಾರವಾಡ ಜಿಲ್ಲೆ ಗರಗದ ʻಗರಗ ಕ್ಷೇತ್ರಿಯ ಸೇವಾ ಸಂಘʼ ( ಖಾದಿ ಕೇಂದ್ರ ಗರಗ), ೨೦೨೨ನೇ ಸಾಲಿನ ಪ್ರಶಸ್ತಿಯನ್ನು *ತುಮಕೂರಿನ ಶ್ರೀ ನರಸಿಂಹಯ್ಯ ಅವರಿಗೆ ಹಾಗೂ ೨೦೨೩ನೇ ಸಾಲಿನ ಪ್ರಶಸ್ತಿಯನ್ನು ಹುಬ್ಬಳ್ಳಿಯ, ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವನ್ನು ಪ್ರಶಸ್ತಿಗಾಗಿ ಆಯ್ಕೆ ಸಮಿತಿ ಆಯ್ಕೆ ಮಾಡಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿ ದಾನಿಗಳಾದ  ಎ. ಆರ್. ನಾರಾಯಣಘಟ್ಟ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ. ಭ ರಾಮಲಿಂಗಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ. ಬಿ. ಎಂ. ಪಟೇಲ್‌ಪಾಂಡು ಅವರು ಉಪಸ್ಥಿತರಿದ್ದರು.

Related posts

ಜನಸಂಖ್ಯೆ ನಿಯಂತ್ರಣ ಎಲ್ಲರ ಹೊಣೆ: ತಹಸೀಲ್ದಾರ ಅಮಾಸಿ

eNewsLand Team

ಜಮೀರ್ ಬಸ್ ಒರೆಸಿಕೊಂಡು ಇದ್ದ, ಶಾಸಕನಾಗಿ ಮಾಡಿದ್ದು ಹೆಚ್ಡಿಕೆ….

eNEWS LAND Team

ಫ್ಯಾಷನ್‌ಯುಗ ಮಹಿಳೆಯರಿಗೆ ಪೂರಕ: ಭಾಗ್ಯಶ್ರೀ ಜಾಗೀರದಾರ

eNEWS LAND Team