29 C
Hubli
ಸೆಪ್ಟೆಂಬರ್ 26, 2023
eNews Land
ಸುದ್ದಿ

 ಕಪ್ಪೆಗಳ ಉಳಿವಿಗಾಗಿ ಜಾಗೃತಿ ಮೂಡಿಸಲು ಕರ್ನಾಟಕದಲ್ಲಿ ಕಪ್ಪೆಗಳ ಹಬ್ಬ ಆಯೋಜನೆ

ಇಎನ್ಎಲ್ ಬ್ಯೂರೋ : 

ಕರಿಪ್ಪೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ತುರ್ತುಸ್ಥಿತಿ ಈಗ ದೇಶದೆಲ್ಲೆಡೆ ಇದೆ. ಹೀಗಾಗಿ ಇತ್ತೀಚೆಗೆ ದೇಶದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಮಂಡೂಕಗಳ ಬಗ್ಗೆ ಜಾಗೃತಿ ಮೂಡಿಸುವ ಹಬ್ಬವೊಂದನ್ನು ಆಯೋಜಿಸಲಾಗಿದೆ.

ರೈತೋಪಯೋಗಿ ಜೀವವೈವಿಧ್ಯತೆಯ ಪ್ರತೀಕ “ಕಪ್ಪೆ”ಗಳ ಸಂತತಿ ಅಳಿಯುತ್ತಿದೆ. ಅಳಿದುಳಿದಿರುವ ಒಂದಿಷ್ಟು ಕಪ್ಪೆಗಳನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ”ಕಪ್ಪೆ ಹಬ್ಬ’ ಆಚರಿಸಲಾಗುತ್ತಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಪರಿಸರವಾದಿಗಳು ರಾಜ್ಯ ಕಪ್ಪೆ ಘೋಷಣೆಗೆ ಚಿಂತನೆ ನಡೆಸಿದ್ದರು. ಪಶ್ಚಿಮಘಟ್ಟಗಳಲ್ಲಿ ಕಂಡು ಬರುವ ಮಲಬಾರ್ ಟ್ರೀ ಟೋಡ್ ಎಂಬ ಅಪರೂಪದ, ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಣೆ ಮಾಡಬೇಕೆಂದು ತಜ್ಞರು ಒತ್ತಾಯವನ್ನೂ ಮಾಡಿದ್ದರು.

ಅದರ ಮುಂದುವರೆದ ಭಾಗವಾಗಿ ಇದೀಗ ಕಪ್ಪೆಯ ಉಳಿವಿಗಾಗಿ ಜಾಗೃತಿ ಮೂಡಿಸಲೆಂದೇ ಇದೇ ಡಿ.18, 19 ಎರಡು ದಿನಗಳ ಕಾಲ ಕಪ್ಪೆ ಹಬ್ಬ ನಡೆಸಲು ಕರ್ನಾಟಕ ರಾಜ್ಯ ಅರಣ್ಯ, ವನ್ಯಜೀವಿ ಸಂರಕ್ಷಣೆ ಶಿವಮೊಗ್ಗ, ಸಾಗರ, ಕಾರ್ಗಲ್ ವಿಭಾಗ ದೇಶದಲ್ಲಿಯೇ ಮೊದಲ ಬಾರಿಗೆ ”ಕಪ್ಪೆ ಹಬ್ಬ” ವನ್ನು ಆಯೋಜಿಸುತ್ತಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮುಪ್ಪಾನೆ ಎಂಬ ನಿರ್ಜನ ಪ್ರವಾಸಿ ತಾಣದಲ್ಲಿ “ಕಪ್ಪೆ ಹಬ್ಬ”’ಕ್ಕೆ ಚಾಲನೆ ಸಿಗಲಿದ್ದು, ಸತತ 6 ತಿಂಗಳ ಕಾಲ ಕಪ್ಪೆ ಹಬ್ಬ ನಡೆಯಲಿದೆ.

Related posts

ಕಾರವಾರದ ಪ್ರಾಧ್ಯಾಪಕರೊಬ್ಬರು ಪುನೀತ್ ಮಣ್ಣಿನ ಮೂರ್ತಿ ಮಾಡಿದ್ದಾರೆ

eNEWS LAND Team

ರಾಡಿಹಳ್ಳ ಹೋರಾಟ ಸಮಿತಿಯಿಂದ ಪ್ರವಾಹದ ಸಮಸ್ಯೆಗೆ ಆಗ್ರಹ

eNEWS LAND Team

ಅಣ್ಣಿಗೇರಿ ನೀಲಗುಂದ ಪುಣ್ಯಪುರುಷ ಗುದ್ನೇಶ್ವರ ಶ್ರೀಗಳ ಬಗ್ಗೆ ಇನ್ನಷ್ಟು ಓದಿ ತಿಳಿಯಿರಿ. ರಥೋತ್ಸವಕ್ಕೆ ತಪ್ಪದೇ ನಾಳೆ ಬನ್ನಿ…

eNEWS LAND Team