22 C
Hubli
ಸೆಪ್ಟೆಂಬರ್ 27, 2023
eNews Land
ಜಿಲ್ಲೆ ಸುದ್ದಿ

ಕಲಘಟಗಿ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳ ಭೇಟಿ

ಇಎನ್ಎಲ್ ಕಲಘಟಗಿ:

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಸಿ.ಎಂ. ಅವರು ಇಂದು ಕಲಘಟಗಿಗೆ ಭೇಟಿ ನೀಡಿ, ತರಹದ ಕಚೇರಿ,ತಾಲೂಕು ಆಸ್ಪತ್ರೆ,ಪೊಲೀಸ್ ಠಾಣೆ,ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಯಾಲಯ ಹಾಗೂ ತಹಸೀಲ್ದಾರ ಕಚೇರಿಗಳಿಗೆ ಆಕಸ್ಮಿಕ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿದರು.

ಕೌಟುಂಬಿಕ ದೌರ್ಜನ್ಯ ಕಾಯ್ದೆ ಪ್ರಕರಣಗಳಲ್ಲಿ ವರದಿಗಳನ್ನು ನ್ಯಾಯಾಲಯಗಳಿಗೆ ತ್ವರಿತವಾಗಿ ತಲುಪಿಸಲು ಸಿಡಿಪಿಓ ಅವರಿಗೆ ನಿರ್ದೇಶನ ನೀಡಿದರು‌.ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಳ ಮತ್ತು ಹೊರ ಭಾಗಗಳಲ್ಲಿ ನೈರ್ಮಲ್ಯ ಕಾಪಾಡುವುದು,ರೋಗಿಗಳಿಗೆ ಸಮರ್ಪಕ ಚಿಕಿತ್ಸೆ, ಔಷಧೋಪಚಾರ ಕಲ್ಪಿಸಲು ಸೂಚಿಸಿದರು. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರಿಗೆ ಕಾನೂನು ಸೇವಾ ಸಮಿತಿಗಳ ಪ್ಯಾನಲ್ ವಕೀಲರ ಉಚಿತ ನೆರವು ಪಡೆಯಲು ಸೂಕ್ತ ಮಾರ್ಗದರ್ಶನ ಒದಗಿಸಬೇಕು. ತಹಸೀಲ್ದಾರ ಕಚೇರಿಗೆ ಬರುವ ಸಾರ್ವಜನಿಕರಿಗೆ ಆಡಳಿತಾಂಗ ತ್ವರಿತ ಸ್ಪಂದನೆ ನೀಡಲು ತಿಳಿಸಿದರು.

ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾನೂನು ಜಾಗೃತಿಯ ಮಾತುಗಳನ್ನಾಡಿದರು.

ಇದನ್ನು ಓದಿ

ಬ್ಲಾಕ್ ಆ್ಯಂಡ್ ವೈಟ್ ನಂಬಿ ಕಲಘಟಗಿ ಕೆಲಸ ಬಿಟ್ಟ ವೈದ್ಯೆಗೆ ₹ 50 ಲಕ್ಷ ಪಂಗನಾಮ!!

Related posts

ನರೇಗಾ : ಧಾರವಾಡದಲ್ಲಿ ಶೇ.91 ರಷ್ಟು ಸಾಧನೆ ಮಾಡಲಾಗಿದೆ: ಸಿಇಒ

eNewsLand Team

ಜಮೀರ್ ಬಸ್ ಒರೆಸಿಕೊಂಡು ಇದ್ದ, ಶಾಸಕನಾಗಿ ಮಾಡಿದ್ದು ಹೆಚ್ಡಿಕೆ….

eNEWS LAND Team

SOUTH WESTERN RAILWAY SERVICE CANCELLATION

eNEWS LAND Team