27 C
Hubli
ಮೇ 25, 2024
eNews Land
ಸುದ್ದಿ

“ಪತ್ರಿಕೋದ್ಯಮ ರತ್ನ” ಪ್ರಭುಲಿಂಗಪ್ಪ ರಂಗಾಪೂರ

ಇಎನ್ಎಲ್ ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಪತ್ರಕರ್ತ ಪ್ರಭುಲಿಂಗಪ್ಪ ವಿ ರಂಗಾಪೂರ ಅವರು ಪತ್ರಿಕೋದ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಷ್ಟ್ರಜಾಗೃತಿಯ ದೈನಿಕ ವಾದ “ಹೊಸದಿಗಂತ ” ದಿನ ಪತ್ರಿಕೆಯ ವರದಿಗಾರನಾಗಿ ಉತ್ತಮ ಸೇವೆಸಲ್ಲಿಸಿದ ಸಲುವಾಗಿ ರಾಜ್ಯದ ಮೂಲೆ ಮೂಲೆಗಳಿಂದ 52 ಸನ್ಮಾನ ಪ್ರಶಸ್ತಿ ಪುರಸ್ಕಾರ ಗಳು ಲಭಿಸಿವೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ರಾಜಕುಮಾರ್ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ನಾಡಿನ ಅನೇಕ ಶರಣರ ಸ್ವಾಮೀಜಿಗಳ ರಾಜಕಾರಣಿಗಳ ಸಂತರ ಸಾಹಿತಿಗಳ ಕಲಾವಿದರ ಸಂಪರ್ಕದಿಂದ ಪ್ರಾಣ ಸ್ನೇಹಿತ ಈರಪ್ಪ ದನಿಗೊಂಡ್ ಜೊತೆಗೆ ಸೇರಿ” ಸಿಪಾಯಿ ರಾಜ” ಎಂಬ ನೈಜ ಘಟನೆಗಳ ಆಧಾರಿತ ಕಿರು ಕಾದಂಬರಿ ರಚನೆ ಮಾಡಿ ಅದನ್ನು ಕರ್ನಾಟಕ ಸರ್ಕಾರದ ಗ್ರಂಥಾಲಯ ಇಲಾಖೆಗೆ ತಲುಪಿಸುವ ಮೂಲಕ ರಾಜ್ಯದ ನಾನಾ ಭಾಗಗಳಿಗೆ ಸರಬರಾಜು ಮಾಡಿದರು.

ಕರ್ನಾಟಕ ಸರ್ಕಾರದ ಸ್ವಾಮಿತ್ವದ MSIL ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ದೀನದಲಿತರ ಮಹಿಳೆಯರ ನೊಂದವರ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕಾಯಕ, ದಾಸೋಹ, ಸೇವಾ ಮನೋಭಾವನೆ ಗಳೊಂದಿಗೆ ಜೀವನಪೂರ್ತಿ ನಾಡಿನ ಸಂಘಸಂಸ್ಥೆಗಳಲ್ಲಿ ಟ್ರಸ್ಟ್ ಗಳಲ್ಲಿ ತನು ಮನ ಧನ ದಿಂದ ಯುವಜನತೆಗೆ ಮೌಲ್ಯ ವಿದ್ಯಾಭ್ಯಾಸ ಹಾಗೂ ಮೌಲ್ಯವಿತ ಜನರಲ್ಲಿ ನೇತ್ರದಾನ ರಕ್ತದಾನ ನೀರು ಗಾಳಿ ಮಣ್ಣಿನ ಸಂಸ್ಕರಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ದೃಢಸಂಕಲ್ಪ ದೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಹಿಂದೂಳಿದ ತಾಲೂಕಾದ ಕಲಘಟಗಿ ಪಕ್ಕದ ಗ್ರಾಮವಾದ ಹಿರೇಹೊನ್ನಳ್ಳಿ ಯಲ್ಲಿ ಶ್ರೀ ವೀರೂಪಾಕ್ಷಪ್ಪ ಮತ್ತು ಪಾರವ್ವ ಪ್ರಗತಿಪರ ರೈತ ದಂಪತಿಗಳ ಜೇಷ್ಠ ಸುಪುತ್ರನಾಗಿ 2-6-1980 ರಲ್ಲಿ ಜನಿಸಿದರು.ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮವಾದಲ್ಲಿ ಪ್ರಥಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ ನಂತರ ವ್ಯವಸಾಯ ಕಾಯಕದೊಂದಿಗೆ ತಮ್ಮ ಗ್ರಾಮದ ಮಡಿವಾಳ ಪ್ರೌಢಶಾಲೆಯಲ್ಲಿ ಮುಗಿಸಿ ಮನೆಯವರ ವಿರೋಧದ ನಡುವೆಯೇ ಧಾರವಾಡದ ಮದಿನಾ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದರು.
ಒಕ್ಕಲುತನ ಜೊತೆಗೆ ಬಿಎ 1ವರೆಗೆ ವಿದ್ಯಾಭ್ಯಾಸ ಕಲಿತು. ತಮ್ಮ ಆಪ್ತಮಿತ್ರರ ಜೊತೆಗೆ ಕೂಡಿಕೊಂಡು ಕಲಘಟಗಿ ತಾಲೂಕಿನ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಕನ್ನಡ ಸಾಂಸ್ಕೃತಿಕ ವೇದಿಕೆ ಸ್ಥಾಪಿಸಿ ಜಿಲ್ಲೆಯ ಹಾಗೂ ತಾಲೂಕಿನಾದ್ಯಂತ ಸಮುದಾಯ ಅಭಿವೃದ್ಧಿ ಕಾರ್ಯ ಚಟುವಟಿಕೆಗಳಲ್ಲಿ ಸ್ನೇಹಿತರೊಂದಿಗೆ ಪಾಲ್ಗೊಂಡು ಸೇವೆ ಸಲ್ಲಿಸಿದ ಪರಿಣಾಮ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ” ಯುವ ಪ್ರಶಸ್ತಿ”ಪುರಸ್ಕಾರ ನೀಡಿದೆ.

Related posts

ಗರ್ಭಿಣಿ‌ ಪತ್ನಿಯ ಪತಿ ಮರ್ಡರ್; ನಡೆದಿದೆ ತನಿಖೆ

eNewsLand Team

ಬಿಜೆಪಿ ಬಹುಮತದಿಂದ ಗೆಲ್ಲುವ ವಿಶ್ವಾಸ: ನಂದಿನಿ ಅಮೂಲಗೆ ಸವಾಲಾಗಲಿದೆ: ಸಿಎಂ ಬೊಮ್ಮಾಯಿ

eNEWS LAND Team

ಹುಬ್ಬಳ್ಳಿ ವಾ.ಕ.ರ.ಸಾ.ಸಂಸ್ಥೆಯಲ್ಲಿ : ವಾಲ್ಮೀಕಿ ಜಯಂತಿ

eNEWS LAND Team