27.5 C
Hubli
ಏಪ್ರಿಲ್ 19, 2024
eNews Land
ಸುದ್ದಿ

ಹುಬ್ಬಳ್ಳಿ ಅಂತಾರಾಜ್ಯ ಹಾಕಿ; ಶಾಹು ಮಣಿಸಿದ ನೈಋತ್ಯ ರೈಲ್ವೆ!

ಇಎನ್ಎಲ್ ಸ್ಪೋರ್ಟ್ಸ್ ಡೆಸ್ಕ್

ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯದ ಕೊನೆಯ ಕ್ವಾರ್ಟರ್ ಮುಕ್ತಾಯಕ್ಕೆ ಆರು ನಿಮಿಷದ ಇರುವಾಗ ಸತತ ಎರಡು ಗೋಲು ಗಳಿಸಿದ ಹುಬ್ಬಳ್ಳಿಯ ನೈಋತ್ಯ ರೈಲ್ವೆ ತಂಡವು ಕೊಲ್ಲಾಪುರ ಶಾಹು ಮಹಾರಾಜ ತಂಡದ ವಿರುದ್ಧ5-3 ಗೋಲುಗಳ ಅಂತರದಿಂದ ಗೆದ್ದು ಸಂಭ್ರಮಿಸಿತು.

ನಗರದ ಸೆಟ್ಲಮೆಂಟ್ ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಹಾಕಿ ಮೈದಾನದಲ್ಲಿ ಆಯೋಜಿಸಲಾದ ಅಂತರಾಜ್ಯ ಆಹ್ವಾನಿತ ಹಾಕಿ ಟೂರ್ನಮೆಂಟ್’ನ ಎರಡನೇ ದಿನದ ಲೀಗ್ ಹಂತದಲ್ಲಿ ಗೆದ್ದಿರುವ ನೈಋತ್ಯ ರೈಲ್ವೆ ಸೆಮಿಫೈನಲ್ಸ್’ನತ್ತ ಹೆಜ್ಜೆ ಇಟ್ಟಿರುವ ಏಕೈಕ ಸ್ಥಳೀಯ ತಂಡ ಎನ್ನಿಸಿದೆ.

ಪಂದ್ಯ ಆರಂಭದ ಮೊದಲ ಕ್ವಾರ್ಟರ್’ನ 13ನೇ ನಿಮಿಷದಲ್ಲಿ ರೈಲ್ವೆಯ ಶ್ರೀಧರ ಮೊದಲ ಗೋಲು ಗಳಿಸಿದರು. ಮುಂದಿನ 4 ನಿಮಿಷದ ಅಂತರದಲ್ಲಿ ಇನ್ನೊಂದು ಗೋಲು ದಾಖಲಿಸಿದ ಅವರು ಕೊಲ್ಲಾಪುರ ಆಟಗಾರರ ಮೇಲೆ ಒತ್ತಡ ಹೇರಿದರು. ಆದರೆ, 3ನೇ ಕ್ವಾರ್ಟರ್’ನ 35ನೇ ನಿಮಿಷದಲ್ಲಿ ಕೊಲ್ಲಾಪುರದ ಪಾರಸ್ ಹಾಗೂ 46ನೇ ನಿಮಿಷದಲ್ಲಿ ಸೌರಭ್ ಗೋಲು ಗಳಿಸಿ ಸಮಬಲ ಸಾಧಿಸಿದರು.

ಮುಂದಿನ ನಿಮಿಷದಲ್ಲಿ ಸಮಂತ ಕೊಲ್ಲಾಪುರದ ಗೋಲಕೀಪರ್ ವಂಚಿಸಿ ನೇರವಾಗಿ ಬಾಲನ್ನು ಗೋಲಿನೊಳಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು. 52ನೇ ನಿಮಿಷದಲ್ಲಿ ಸೌರಭ್ ಪುನಃ ಗೋಲುಗಳಿಸಿ ಮತ್ತೊಮ್ಮೆ ಪಂದ್ಯದಲ್ಲಿ ತಂಡ ಉಳಿಯುವಂತೆ ಮಾಡಿದರು. ಆದರೆ, ಶ್ರೀಧರ 55ನೇ ನಿಮಿಷದಲ್ಲಿ ಹಾಗೂ ಲಿಖಿತ್ 58ನೇ ನಿಮಿಷದಲ್ಲಿ ಒಂದರ ಹಿಂದೊಂದರಂತೆ ದಾಖಲಿಸಿದ ಗೋಲು ಶಾಹುಗಳು ತಲೆ ಬಾಗುವಂತೆ ಮಾಡಿತು. ಒಟ್ಟಾರೆ ಕೊನೆಯ ಕ್ವಾಟ್೯ರ್ನಲ್ಲಿ ಐದು ಗೋಲುಗಳು ದಾಖಲಾದವು.

ಮೊದಲನೇ ಪಂದ್ಯದಲ್ಲಿ ಕೋಲ್ಹಾಪುರದ ದೇವಗಿರಿ ಫೈಟರ್ಸ್ ಹಾಗೂ ಹೈದ್ರಾಬಾದನ ಆರ್ಟಲರೀ ಸೆಂಟರ್ ತಂಡಗಳ ನಡುವೆ ನಡೆದ ಪಂದ್ಯವು 1-1ರ ಸಮಾಬಲದೊಂದಿಗೆ ಡ್ರಾದಲ್ಲಿ ಕೊನೆಗೊಂಡಿತು. ರೋಚಕವಾಗಿ ನಡೆದ ಈ ಪಂದ್ಯದಲ್ಲಿ ದೇವಗಿರಿ ಫೈಟರ್ಸ್ ತಂಡದ ಗಣೇಶ ಪಂದ್ಯ ಆರಂಭವಾದ 7ನೇ ನಿಮಿಷದಲ್ಲಿ ಗೋಲು ಬಾರಿಸಿದರೇ, ಆರ್ಟಲರೀ ಸೆಂಟರ್ ತಂಡದ ಕೌಶೀಕ 17ನೇ ನಿಮಿಷದಲ್ಲಿ ಗೋಲ್ ದಾಖಲಿಸಿದರು.

ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಗದಗನ ಹನುಮಾನ ಬ್ಲೆಸಿಂಗ್ ತಂಡ ಕೊಲ್ಹಾಪೂರದ ವಿರುದ್ಧ ೨-೧ರ ಅಂತರದಲ್ಲಿ ಗೆಲುವು ಸಾಧಿಸಿತು. ಪಂದ್ಯ ಆರಂಭವಾದ 12ನೇ ನಿಮಿಷಕ್ಕೆ ಪರಾಜಿತ ಎಂಕೆಎಂ ತಂಡದ ಸಮೀರ ಭೋಸ್ಲೆ ಗೋಲು ಭಾರಿಸಿದರೇ, ಮುಂದಿನ 55 ಹಾಗೂ 59ನೇ ನಿಮಿಷಕ್ಕೆ ಹನುಮಾನ ಬ್ಲೆಸಿಂಗ್ ತಂಡದ ಹರೀಷ ಮುಟಗಾರ್ ಸತತ ಎರಡು ಗೋಲು ಭಾರಿಸುವ ಮೂಲಕ ಗೆಲುವಿನ ನಗೆ ಬೀರಿದರು.

ನಾಲ್ಕನೇ ಪಂದ್ಯದಲ್ಲಿ ಬೆಂಗಳೂರಿನ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಂಡದ ವಿರುದ್ಧ ಕೊಲ್ಹಾಪೂರ ಪೊಲೀಸ್ ಇಲಾಖೆ ತಂಡವು 4-1ರ ಅಂತರದಲ್ಲಿ ಗೆಲವು ಸಾಧಿಸಿತು. ವಿಜೇತ ತಂಡದ ವಿನೋದ 28ಹಾಗೂ51, ಸತ್ಯಜೀತ 38ಹಾಗೂ 59 ನಿಮಿಷಕ್ಕೆ ಗೋಲು ಹೊಡೆದರು, ಪರಾಜಿತ ತಂಡದ ಪ್ರಣಾಮಗೌಡ 28ನಿಮಿಷಕ್ಕೆ ಒಂದು ಗೋಲು ಮಾತ್ರ ಹೊಡೆಯಲು ಸಫಲರಾದರು.
ಕೊನೆಯದಾಗಿ ನಡೆದ 5ನೇ ಪಂದ್ಯದಲ್ಲಿ ಕೊಲ್ಹಾಪೂರದ ದೇವಗಿರಿ ಫೈಟರ್ಸ್ ತಂಡವು ಹುಬ್ಬಳ್ಳಿಯ ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಪರಾಭವಗೊಳಿಸಿತು. ಆರಂಭದ 6 ನಿಮಿಷಕ್ಕೆ ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್’ನ ವಿನಾಯಕ ಬೀಜವಾಡ್ ಏಕೈಕ ಗೋಲು ಬಾರಿಸಿದರೇ, ಮುಂದೆ ಮಯೂರ್ 7 ಹಾಗೂ ಅಭಿಷೇಕ್ 36ನಿಮಿಷಕ್ಕೆ ಗೋಲು ಹೊಡೆಯುವ ಮೂಲಕ ದೇವಗಿರಿ ತಂಡವು ಗೆಲವು ಸಾಧಿಸಲು ಕಾರಣರಾದರು.

Related posts

ಸುಳ್ಳು ಭರವಸೆಗಳನ್ನು ಪಡಿತರದಲ್ಲಿ ವಿತರಿಸುವುದೊಂದೇ ಬಾಕಿ ಉಳಿದಿದೆ ಬಿಜೆಪಿಗೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

eNEWS LAND Team

ಅಂತಾರಾಜ್ಯ ಜಲವಿವಾದ: ಏಪ್ರಿಲ್’ನಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ: ಬೊಮ್ಮಾಯಿ

eNewsLand Team

ವೀಕೆಂಡ್ ಕರ್ಫ್ಯೂ; ಧಾರವಾಡದಲ್ಲಿ ಏನಿರತ್ತೆ, ಏನಿರಲ್ಲ?

eNewsLand Team