29 C
Hubli
ಅಕ್ಟೋಬರ್ 8, 2024
eNews Land
ಸುದ್ದಿ

ಹುರಕಡ್ಲಿ ಅಜ್ಜನವರ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗಿ: ಡಾ.ಅಲ್ಲಮ ಪ್ರಭು ಸ್ವಾಮೀಜಿ

ಇಎನ್ಎಲ್ ನವಲಗುಂದ : ಈ ಭಾಗದಲ್ಲಿ ಮಹಾಶರಣರ ನಾಡಾಗಿದೆ. ಒಳ್ಳೇಯ ಶರಣರು ಚಿಂತಕರ ಜನ್ಮದಾಳೆರುವುದು ನಿಮ್ಮ ಪುಣ್ಯ ತಾವುಗಳು ಹುರಕಡ್ಲಿ ಅಜ್ಜನವರ ಪುಣ್ಯ ಸ್ಥಾನದಲ್ಲಿ ಅವರು ನೀಡಿದ ಸಂದೇಶಗಳು, ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗಿರೆಂದು ಬೆಳಗಾವ್ ನಾಗನೂರ ರುದ್ರಾಕ್ಷಿಮಠದ ಡಾ : ಅಲ್ಲಮ್ಮಪ್ರಭು ಮಹಸ್ವಾಮಿಗಳು ಆಶೀರ್ವಚನ ನೀಡಿದರು.
ಅವರು ಸೋಮವಾರ ಪರಮಪೂಜ್ಯ ಹುರಕಡ್ಲಿ ಅಜ್ಜನವರ 32 ನೇ ಪುಣ್ಯ ಸ್ಮರಣೋತ್ಸವದಲ್ಲಿ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಆದ್ಯಾತ್ಮವನ್ನು ಅರಿತುಕೊಂಡು ತಮ್ಮ ಕಷ್ಟಗಳಿಗೆ ಪರಿಹಾರವನ್ನು ಪಡೆಯಬೇಕಾದರೆ ಮಹಾತ್ಮ ಚಿಂತನೆಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹುರಕಡ್ಲಿ ಅಜ್ಜನವರು ನಾಗನೂರ ರುದ್ರಾಕ್ಷಿಮಠಕ್ಕೆ ಮೂರು ತಲೆಮಾರಿನಿಂದ ನಮ್ಮ ಮಠದ ಜೊತೆ ಅಭಿನವ ಸಂಬಂಧ ಇರುತ್ತದೆ. ಅವರ ದಿವ್ಯ ದ್ರಷ್ಟಿಯಿಂದ ಇವತ್ತು ಮಠದ ಹಲವಾರು ಅಭಿವೃದ್ದಿ ಕಾರ್ಯಗಳಾಗಲು ಸಾದ್ಯವಾಗಿದೆ. ಇದರ ಜೊತೆಗೆ ಅಜ್ಜನವರ ಭಕ್ತ ಸಮೂಹ ಅಪಾರವಾಗಿದೆ ಶ್ರೀ ಹುರಕಡ್ಲಿ ಅಜ್ಜನವರ ಧಾರ್ಮಿಕ ಕಾರ್ಯಗಳು ಹೀಗೆ ಮುಂದುವರಿಯಲಿ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹುರಕಡ್ಲಿ ಅಜ್ಜನವರ ಕೃಪ ಆಶೀರ್ವದದಿಂದ ನನ್ನ ಜೀವನ ಪ್ರಗತಿಯಲ್ಲಿದೆ. ಸದಾ ಅಜ್ಜನವರ ನೆನೆದು ನನ್ನ ಕಾಯಕವನ್ನು ಪ್ರಾರಂಭಿಸುತ್ತೇನೆ ಹುರಕಡ್ಲಿ ಅಜ್ಜನವರ ಭಕ್ತರು ಸಮೂಹ ರಾಜ್ಯಾದ್ಯಂತ ಪಸರಿಸಿದ್ದು ಇನ್ನು ಅನೇಕ ಧಾರ್ಮಿಕ ಹಾಗೂ ಆದ್ಯಾತ್ಮಿಕ ಕಾರ್ಯಕ್ರಮ ನಡೆಯಲಿವೆ ಅವರ ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿರುವುದು ನನ್ನ ಪುಣ್ಯವೆಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಉಸ್ತುವಾರ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಮಾತನಾಡಿ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಹುರಕಡ್ಲಿ ಅಜ್ಜನವರ ಶ್ರೀರಕ್ಷೆ ಇದೆ ಅವರ ಆಶೀರ್ವದ ಒಂದೇ ಸಾಕು ನನಗೆ ಯಾವ ಸನ್ಮಾನವು ಅವಶ್ಯಕತೆ ಇಲ್ಲವೆಂದು ಹೇಳಿದರು.
32ನೇ ಹುರಕಡ್ಲಿ ಅಜ್ಜನವರ ಅಡ್ಡಪಲ್ಲಕ್ಕಿ ಉತ್ಸವವು ಜ-2 ರಂದು ರಾತ್ರಿ ಸರಳ ಸಂಕ್ಷಿಪ್ತವಾಗಿ ಜರುಗಿತು. ಹಾಲಕೆರೆ ಅನ್ನದಾನೇಶ್ವರ ಮಠದ ಶ್ರೀಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶೀರ್ವದಿಸಿದರು.
ಬೆಳಗಾವ್ ವಿಧಾನ ಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್.ತಡಹಾಳ, ನ್ಯಾಯವಾದಿ ವಿ.ಜಿ.ಪಾಟೀಲ, ಸಂಸ್ಥಯ ಅಧ್ಯಕ್ಷ ಶಂಕರ ಕೌಜಲಗಿ, ಸದಾನಂದ ಡಂಗನವರ, ದೇವೆಂದ್ರ ರತ್ನಾಕರ, ಟಿ.ವಿ.ಮಹಾಂತೇಶ, ವಿ.ಎಮ್.ಹುರಕಡ್ಲಿ, ಟಿ.ಎಮ್.ವಿನಯ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಗೀತಾಂಜಲಿ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು. ಟಿ.ವಿ.ಮಹಾಂತೇಶ ವಂದಿಸಿದರು.

Related posts

SWR: CONTINUATION OF EXPERIMENTAL STOPPAGES

eNEWS LAND Team

ಬೆಂಬಲ ಬೆಲೆ ಯೋಜನೆ: ಬ್ಯಾಹಟ್ಟಿಯಲ್ಲಿ ಕಡಲೆ ಖರೀದಿ ಕೇಂದ್ರ ಉದ್ಘಾಟನೆ

eNEWS LAND Team

ಹುಧಾ ಪಾಲಿಕೆ ವಿರುದ್ಧ ದೂರು ಕೊಟ್ಟವಗೆ ₹ 20 ಸಾವಿರ ದಂಡ!!

eNewsLand Team