23.4 C
Hubli
ಜುಲೈ 2, 2022
eNews Land
ಸುದ್ದಿ

ಹುಬ್ಬಳ್ಳಿಲಿ ಝೋಮ್ಯಾಟೊ, ಸ್ವಿಗ್ಗಿ ರೀತಿ ಮನೆಮನೆಗೆ ಊಟ ಪೂರೈಸಲಿದೆ ಡಬ್ಬಾವಾಲಾ

Listen to this article

ಇಎನ್ಎಲ್ ಹುಬ್ಬಳ್ಳಿ:

ಹುಬ್ಬಳ್ಳಿಯಲ್ಲಿ ಮನೆ ಮನೆಗೆ ಊಟೋಪಹಾರ ವಿತರಣೆಗಾಗಿ ಡಬ್ಬಾವಾಲಾ ಆ್ಯಪ್ ರೂಪಿಸಲಾಗಿದ್ದು, ಮನೆಯಲ್ಲಿ ಆಹಾರ ತಯಾರಿಸುವವರು ಕೂಡ ಇದರಲ್ಲಿ ನೋಂದಣಿ ಮಾಡಿಕೊಂಡು ಸೇವೆ ಒದಗಿಸಬಹುದು ಎಂದು ಹುಬ್ಬಳ್ಳಿ ಫ್ರಾಂಚೈಸಿ ಚಂದ್ರಶೇಖರ ಹಿರೇಮಠ ತಿಳಿಸಿದರು.
ನಗರದ ಹೊಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಆಹಾರ ಪೂರೈಸಲಾಗುತ್ತದೆ. ಮುಂದಿನ ದಿನಗಳಲ್ಲಿ ಔಷಧ ಹಾಗೂ ಕಿರಾಣಿ ವಸ್ತುಗಳನ್ನು ಕೂಡ ತಲುಪಿಸುವ ವ್ಯವಸ್ಥೆ ಇದಾಗಿದೆ.
ಓಕಲ್ ಲೋಕಲ್ ಮಾದರಿಯ ಆನ್ಲೈನ್ ಫುಡ್ ಡಿಲಿವರಿ ವ್ಯವಸ್ಥೆ ಆಗಿದೆ. ಬೆಳಗ್ಗೆ 8ರಿಂದ 10ಗಂಟೆವರೆಗೆ ವಿತರಣೆ ಮಾಡಲಾಗುವುದು.
ಝೋಮ್ಯಾಟೊ, ಸ್ವಿಗ್ಗಿಯಲ್ಲಿ ಇರದ‌ ಅಂಶಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. 20-25 ಕೆಜಿಯಷ್ಟು ಒಮ್ಮೆ ನಾವು ವಿತರಣೆ ಮಾಡುವ ವ್ಯವಸ್ಥೆ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ತೂಕದ ವಸ್ತುಗಳನ್ನು ವಿತರಣೆ ಮಾಡಲಾಗುವುದು ಎಂದರು.
ಸದ್ಯಕ್ಕೆ 110 ಹೊಟೆಲ್ ಒಪ್ಪಂದ ಮಾಡಿಕೊಳ್ಳಲಾಗಿದೆ. 10 ನೌಕರರ ನೇಮಕ ಮಾಡಲಾಗಿದೆ ಎಂದು ಹುಬ್ಬಳ್ಳಿ ಹಿರೇಮಠ ತಿಳಿಸಿದರು.
ಈ ವೇಳೆ ನವನಗರದ ಷಟಸ್ಥಳ ಶಿವಾಚಾರ್ಯ ಮಹಾಸ್ವಾಮಿ, ಕೊಣ್ಣೂರು ಗವಿಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿ, ಡಾ.ಗುರುರಾಜ ಪಾಟೀಲ, ವೀರೇಶ ದೇಸಾಯಿಗೌಡ್ರು , ಅಜಯ ಜೋಶಿ, ಎಸ್.ಸಿ.ಪಾಟೀಲ ಇದ್ದರು.

Related posts

ರೈತರಿಗೆ ‘ಗಂಧ’ ಹಚ್ಚಿ ‘ನಾಮ’ ಹಾಕಿದ ವಂಚಕರು ! 

eNewsLand Team

ಹುಬ್ಬಳ್ಳಿ: ಗಬ್ಬೂರು ವೃತ್ತದಲ್ಲಿ ರಸ್ತೆ ತಡೆದು ರೈತರ ಪ್ರತಿಭಟನೆ

eNewsLand Team

ಕಂದಾಯ ಗ್ರಾಮವಾಗಿ ಲಂಬಾಣಿ ತಾಂಡಾ: ಸರ್ವೇ ಚುರುಕಿಗೆ ಕ್ರಮ- ಸಿಎಂ ಬೊಮ್ಮಾಯಿ

eNewsLand Team