37 C
Hubli
ಮಾರ್ಚ್ 28, 2024
eNews Land
ಪ್ರವಾಸ ಸುದ್ದಿ

ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು

ಕಟ್ಟುನಿಟ್ಟಾಗಿ ಪಾರದರ್ಶಕ ನಿಷ್ಪಕ್ಷಪಾತ ಚುನಾವಣೆಗೆ ಕ್ರಮವಹಿಸಿ: ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ

ಇಎನ್ಎಲ್ ಹುಬ್ಬಳ್ಳಿ:

I. ಸ್ಪೇಷಲ್‌ ರೈಲುಗಳು ಸೂಪರ್‌ಫಾಸ್ಟ್‌ ಆಗಿ ಬದಲಾವಣೆ

ಇತ್ತೀಚೆಗೆ ಪ್ರಾರಂಭಿಸಲಾದ ಎಸ್‌.ಎಸ್‌.ಎಸ್ ಹುಬ್ಬಳ್ಳಿ ಮತ್ತು ಕೆ.ಎಸ್‌.ಆರ್‌ ಬೆಂಗಳೂರು ನಿಲ್ದಾಣಗಳ ನಡುವೆ ಸಂಚರಿಸುವ ರೈಲುಗಳ ಸಂಖ್ಯೆ 07339/07340 ಮತ್ತು 07353/07354 ದೈನಂದಿನ ಸ್ಪೇಷಲ್‌ ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಾಗಿ ಏಪ್ರಿಲ್ 2, 2023 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ.

*II. ಡೆಮು ವಿಶೇಷ ರೈಲುಗಳ ಸೇವೆ ವಿಸ್ತರಣೆ:*

1. ಬಳ್ಳಾರಿ ಮತ್ತು ಹರಿಹರ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07395/07396 ಡೆಮು ವಿಶೇಷ ರೈಲುಗಳ ಸೇವೆಯನ್ನು ಏಪ್ರಿಲ್ 17 ರಿಂದ ಅಕ್ಟೋಬರ್ 14, 2023 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 15 ರವರೆಗೆ ಓಡಿಸಲು ಸೂಚಿಸಲಾಗಿತ್ತು.

2. ಹೊಸಪೇಟೆ ಮತ್ತು ಬಳ್ಳಾರಿ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07397/07398 ಡೆಮು ವಿಶೇಷ ರೈಲುಗಳ ಸೇವೆಯನ್ನು ಏಪ್ರಿಲ್ 17 ರಿಂದ ಅಕ್ಟೋಬರ್ 14, 2023 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 15 ರವರೆಗೆ ಓಡಿಸಲು ಸೂಚಿಸಲಾಗಿತ್ತು.

3. ಹೊಸಪೇಟೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07393 ಡೆಮು ವಿಶೇಷ ರೈಲು ಸೇವೆಯನ್ನು ಏಪ್ರಿಲ್ 22 ರಿಂದ ಅಕ್ಟೋಬರ್ 14, 2023 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 15 ರವರೆಗೆ ಓಡಿಸಲು ಸೂಚಿಸಲಾಗಿತ್ತು.

4. ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಹೊಸಪೇಟೆ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07394 ಡೆಮು ವಿಶೇಷ ರೈಲು ಸೇವೆಯನ್ನು ಏಪ್ರಿಲ್ 16 ರಿಂದ ಅಕ್ಟೋಬರ್ 8, 2023 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 9 ರವರೆಗೆ ಓಡಿಸಲು ಸೂಚಿಸಲಾಗಿತ್ತು.

ಈ ಮೇಲಿನ ವಿಶೇಷ ಡೆಮು ರೈಲುಗಳ ಸೇವೆಯಲ್ಲಿನ ದಿನ, ವೇಳಾಪಟ್ಟಿ ಮತ್ತು ದರಗಳಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ.

Related posts

ವಿದೇಶ ಪ್ರವಾಸಕ್ಕೆ ಹೋಗಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

eNewsLand Team

ಕಾನೂನು ವಿವಿ ಘಟಿಕೋತ್ಸವ; 5188 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

eNEWS LAND Team

ಹುಬ್ಬಳ್ಳಿ : ಹಳೇ ವಿದ್ಯಾರ್ಥಿಗಳಿಂದ ಸ್ಮಶಾನ ಪಕ್ಕದ ಗೋಡೆಗೆ ಸುಣ್ಣ ಬಣ್ಣದ ರಂಗೋಲಿ!

eNEWS LAND Team