24 C
Hubli
ಸೆಪ್ಟೆಂಬರ್ 27, 2023
eNews Land
ಸುದ್ದಿ

ಫೆ.4 ರಂದು ಹು-ಧಾ ಪಾಲಿಕೆ ಆಯವ್ಯಯ ಕುರಿತು ಸಾರ್ವಜನಿಕ ಸಭೆ

ಇಎನ್ಎಲ್ ಹುಬ್ಬಳ್ಳಿ: ಕರ್ನಾಟಕ ಮುನಿಸಿಪಲ್ ಅಕೌಂಟಿಂಗ್ ಮತ್ತು ಬಜೆಟಿಂಗ್ ನಿಯಮ 2006 ಅನ್ವಯ 2022-23 ನೇ ಸಾಲಿನ ಪಾಲಿಕೆ ಆಯವ್ಯಯವನ್ನು ಸಿದ್ದಪಡಿಸಲು ಫೆ.4 ರಂದು ಸಾರ್ವಜನಿಕ ಸಭೆ ಕರೆಯಲಾಗಿದೆ.

ಪಾಲಿಕೆಯ ಆದಾಯ ಹೆಚ್ಚಿಸಲು ಮತ್ತು ನಾಗರಿಕ ಸ್ನೇಹಿ ಆಯವ್ಯಯವನ್ನು ಸಿದ್ದಪಡಿಸಿ, ನಾಗರಿಕರಿಗೆ ಅವಶ್ಯಕ ಸೇವೆಗಳನ್ನು ಒದಗಿಸಲು ಅನುಕೂಲವಾಗುವಂತೆ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅಗತ್ಯ ಸಲಹೆ, ಅಭಿಪ್ರಾಯ ಮತ್ತು ಮನವಿಗಳನ್ನು ಸಭೆಯಲ್ಲಿ ಪಡೆಯಲಾಗುವುದು.

ಬೆಳಿಗ್ಗೆ 11 ಗಂಟೆಗೆ ಧಾರವಾಡ ಮಹಾನಗರ ಪಾಲಿಕೆ ಸಭಾಭವನ, ಸಂಜೆ 4 ಗಂಟೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ನಾಗರಿಕರು hdmccao2017@gmail.com ಇ-ಮೇಲ್ ಮುಖಾಂತರ ಸಲಹೆ ಸೂಚನೆಗಳನ್ನು ಕಳುಹಿಸಬಹುದು ಎಂದು ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Related posts

ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಮ್ಯಾಟ್‌ ಕಬಡ್ಡಿ ಟೂರ್ನಿ ನಾಳೆಯಿಂದ

eNewsLand Team

ಅವ್ನೌವ್ನ! ಹ್ಯಾಂಗ್ ಹ್ಯಾಂಗ್ ಆನ್ಲೈನ್ ದೋಖಾ ಮಾಡ್ತಾರ! ಹುಬ್ಳಿ ಮನಷ್ಯಾಗ ಹ್ಯಾಂಗ ಟೋಪಿ ಹಾಕ್ಯಾರ ನೋಡ್ರಿ

eNewsLand Team

ಕೆ.ಐ.ಎ ನಲ್ಲಿ ನವೀನ್ ಪಾರ್ಥಿವ ಶರೀರ ಬರಮಾಡಿಕೊಂಡ: ಸಿಎಂ ಬೊಮ್ಮಾಯಿ

eNEWS LAND Team