23 C
Hubli
ಮೇ 17, 2024
eNews Land
ಸುದ್ದಿ

ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ: ಶಾಸಕ ಪ್ರಸಾದ ಅಬ್ಬಯ್ಯ “ಸನ್ಮಾನದ ಹಾರ ತುರಾಯಿಗಳ ಬದಲು, ಶೈಕ್ಷಣಿಕ ಸಾಮಗ್ರಿಗಳ ದೇಣಿಗೆ ನೀಡಿ”

ಇಎನ್ಎಲ್ ಹುಬ್ಬಳ್ಳಿ: ಸತತ ಮೂರನೇ ಬಾರಿ ವಿಜೇತರಾದ ಹುಬ್ಬಳ್ಳಿ ಧಾರವಾಡ-72 ಪೂರ್ವ ಮೀಸಲು ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಇವರು ತಮ್ಮ ವಿಜಯದ ನಂತರ ಮೊದಲ ಸಭೆಯನ್ನು ನಡೆಸಿದ್ದು, ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ. ಜೂ.10 ರಂದು ಹುಬ್ಬಳ್ಳಿ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಭಾಭವನದಲ್ಲಿ 72-ಹು ಧಾ ಪೂರ್ವ ಮೀಸಲು ಕ್ಷೇತ್ರದ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಕರೆದು ತಮ್ಮ ಎಲ್ಲಾ ಕೆಲಸಗಳಲ್ಲಿ ಮೊದಲ ಆದ್ಯತೆ ಶಿಕ್ಷಣ ಕ್ಷೇತ್ರಕ್ಕೆ ನೀಡುವುದಾಗಿ ತಿಳಿಸಿದರು. ಶಾಲೆಗಳಲ್ಲಿರುವ ಕೊರತೆಗಳ ಬೇಡಿಕೆ ಪಟ್ಟಿ ಪಡೆದರು. ಶಾಲೆಗಳಲ್ಲಿರುವ ಭೌತಿಕ ಕೊರತೆಗಳಾದ ಕೊಠಡಿ ನಿರ್ಮಾಣ, ನೀರಿನ ಕೊರತೆ, ಶೌಚಾಲಯಗಳ ಕೊರತೆ ಹಾಗೂ ಶೈಕ್ಷಣಿಕ ಕೊರತೆಗಳಾದ ಸ್ಮಾರ್ಟ್ ಬೋರ್ಡ್, ಡಿಜಿಟಲ್ ಗ್ರಂಥಾಲಯ ಮುಂತಾದುವುಗಳ ಬೇಡಿಕೆ ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು. ಹುಬ್ಬಳ್ಳಿ ಶಹರ ವಲಯದಲ್ಲಿ ಗುರುಭವನವನ್ನು ಸೆ.5 ರಂದು ಆಚರಿಸುವ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಂದು ಭೂಮಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು.

ಈಗಾಗಲೇ ಶಿಕ್ಷಕರು ಕೇಳುವ ಮೊದಲೇ ತಮ್ಮ ಕ್ಷೇತ್ರದ ೬ ಕನ್ನಡ ಶಾಲೆಗಳು ಮತ್ತು ೪ ಉರ್ದು ಶಾಲೆಗಳನ್ನು ತಾಂತ್ರಿಕತೆಯ ನಿಟ್ಟಿನಲ್ಲಿ ಸಂಪೂರ್ಣ ಡಿಜಿಟಲೈಸೇಷನ್ ಮತ್ತು ಕಾಗದ ರಹಿತ ಆಡಳಿತ ಕುರಿತು ಅನುಷ್ಠಾನಕ್ಕೆ ಈಗಾಗಲೇ ಸರ್ಕಾರದಿಂದ ೨೦ ಕೋಟಿಗಳ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು, ಅದಕ್ಕೆ ಸಂಬoಧಿಸಿದoತೆ ಶೀಘ್ರದಲ್ಲೇ ಪರಿಣಿತ ತಜ್ಞರನ್ನು ಕರೆಸುತ್ತಿರುವುದಾಗಿ ತಿಳಿಸಿದರು.
ತಮ್ಮ ಮಾತಿನುದ್ದಕ್ಕೂ ಶಿಕ್ಷಣ ಪರ ಕಾಳಜಿ ತೋರಿದ ಮಾನ್ಯರು ಕಾರ್ಯಕ್ರಮಗಳಲ್ಲಿ ತಮಗೆ ಮಾಡುವ ಸನ್ಮಾನಗಳ ಹಾರ ತುರಾಯಿಗಳ ಬದಲಾಗಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳಿಗಾಗಿ ದೇಣಿಗೆ ನೀಡುವಂತೆ ಕರೆ ನೀಡುವುದಲ್ಲದೇ ತಾವೂ ಅದನ್ನು ಅನುಸರಿಸುವ ಮೂಲಕ ಮಾದರಿಯಾದರು. ತಮಗೆ ಸನ್ಮಾನಿಸಲು ಶಿಕ್ಷಕರು ತಂದoತಹ ಸಾಮಾಗ್ರಿಗಳನ್ನು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಆರ್.ಕೆ.ಪಾಟೀಲ್ ಕೆಪಿಎಸ್ ಬಿಡನಾಳ ಶಾಲೆಯ ವಿದ್ಯಾರ್ಥಿನಿ ದಿವ್ಯಾ ವಾಲಿಕಾರ ಇವಳನ್ನು ಸನ್ಮಾನಿಸಿ, ವೈಯಕ್ತಿಕವಾಗಿ ಹತ್ತು ಸಾವಿರ ನಗದು ಬಹುಮಾನ ನೀಡುವ ಮೂಲಕ ಅಭಿಪ್ರೇರಿಸಿದರು.
ಸದರಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಪ್ಪಗೌಡ ಇವರು ತಾಲೂಕಿನಲ್ಲಿ ಕೈಗೊಂಡ ಶೈಕ್ಷಣಿಕ ಚಟುವಟಿಕೆಗಳ ಪಕ್ಷಿನೋಟ ನೀಡುವುದರೊಂದಿಗೆ, ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ಮಂಡಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್.ಶಿವಳ್ಳಿ ಮಠ ಇವರು ಸ್ವಾಗತಿಸಿದರು. ಈ ವೇಳೆ ಮೋಹನ್ ಅಸುಂಡಿ, ಪಿ.ಎಂ. ಪೋಷಣ್ ಸಹಾಯಕ ನಿರ್ದೇಶಕ ಎಸ್.ವಿ. ಬಂಗಾರಿಮಠ, ನೌಕರ ಸಂಘದ ಅಧ್ಯಕ್ಷ ಪ್ರಹ್ಲಾದ್ ಗೆಜ್ಜಿ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಚ್. ಜಂಗಳಿ, ಎನ್.ಯು. ಬದ್ದಿ, ಎಂ.ಯು. ಶಿರಹಟ್ಟಿ, ಎಸ್.ವೈ. ವಿಭೂತಿ ಹಾಗೂ ಬಿಇಓ ಮತ್ತು ಬಿಆರ್’ಸಿ ಕಛೇರಿಯ ಸಿಬ್ಬಂದಿಗಳು ಹಾಜರಿದ್ದರು.

Related posts

ಅಣ್ಣಿಗೇರಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಆಗ್ರಹ

eNEWS LAND Team

ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ

eNEWS LAND Team

ಕವಟಗಿಮಠ ಗೆಲುವು ನಿಶ್ಚಿತ : ಸಿಎಂ ವಿಶ್ವಾಸ

eNEWS LAND Team