24 C
Hubli
ಮಾರ್ಚ್ 29, 2024
eNews Land
ಸುದ್ದಿ

ಹು-ಧಾ ಮೇಯರ್, ಉಪಮೇಯರ್ ಯಾರು? ಇಲ್ಲಿದೆ ನೋಡಿ, ಅಂಚಟಗೇರಿ ಬಹುತೇಕ ಖಚಿತ

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಂದು ಒಂಬತ್ತು ತಿಂಗಳ ಬಳಿಕ 21ನೇ ಅವಧಿಯ ಪಾಲಿಕೆ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆ ಇಂದು ನಡೆಯಲಿದ್ದು, ವೀರೇಶ ಆಂಚಟಗೇರಿ ಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಹುಬ್ಬಳ್ಳಿ: ಹುಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಬೆಳಿಗ್ಗೆ 9.30ರಿಂದ‌ 11.30ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ಮಧ್ಯಾಹ್ನ 1ರವರೆಗೆ ಹಿಂಪಡೆಯಲು ಅವಕಾಶವಿದೆ.

ನಾಮಪತ್ರ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು:

ಬಿಜೆಪಿ: ಈರೇಶ ಅಂಚಟಗೇರಿ (ಮೇಯರ್, ವಾರ್ಡ್ ನಂ. 2), ಉಮಾ ಮುಕುಂದ(ಉಪಮೇಯರ್, ವಾರ್ಡ್ ನಂ. 44).

ಕಾಂಗ್ರೆಸ್:
ಮಯೂರ ಮೋರೆ(ಮೇಯರ್, ವಾರ್ಡ್ ನಂ. 24), ದೀಪಾ ನೀರಕಟ್ಟಿ(ಉಪಮೇಯರ್, ವಾರ್ಡ್ ನಂ. 7)

ಎಐಎಂಐಎಂ:
ನಜೀರ್ ಅಹ್ಮದ್ ಹೊನ್ಯಾಳ(ಮೇಯರ್, ವಾರ್ಡ್ ನಂ. 71), ವಹೀದಾಖಾನಂ ಕಿತ್ತೂರು(ಉಪಮೇಯರ್, ವಾರ್ಡ್ ನಂ. 76). ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕೇಂದ್ರಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ ನೇತೃತ್ವದಲ್ಲಿ ಶನಿವಾರ ನಗರದ ಖಾಸಗಿ ಹೋಟೆಲ್’ನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈರೇಶ ಅಂಚಟಗೇರಿ ಹೆಸರು ಅಂತಿಮಗೊಳಿಸಲಾಗಿದೆ

ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿರುವುದರಿಂದ ಆ ಪಕ್ಷದವರಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಹೀಗಾಗಿ ಬಿಜೆಪಿಯಲ್ಲಿ ಶುಕ್ರವಾರ ತಡರಾತ್ರಿ ತನಕವೂ ಚುರುಕಿನ ಚಟುವಟಿಕೆ ನಡೆದಿದ್ದವು. ಧಾರವಾಡದ ಈರೇಶ ಅಂಚಟಗೇರಿ ಮತ್ತು ವಿಜಯಾನಂದ ಶೆಟ್ಟಿ ಮತ್ತು ವೀರಣ್ಣ ಸವಡಿ ನಡುವೆ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ಪಾಲಿಕೆ ಸದಸ್ಯರ ವೈಯಕ್ತಿಕ ಅಭಿಪ್ರಾಯ ಹಾಗೂ ಪಕ್ಷದ ಮುಖಂಡ ನಿರ್ಧಾರದ ಮೇಲೆ ಅಂಚಟಗೇರಿ ಹೆಸರು ಅಂತಿಮಗೊಳಿಸಲಾಗಿದೆ. ಅದೇ ರೀತಿ ಉಪಮೇಯರ್ ಸ್ಥಾನಕ್ಕೆ ಹುಬ್ಬಳ್ಳಿಯ ಉಮಾ ಮುಕುಂದ ಅವರ ಹೆಸರನ್ನು ಅಂತಿಮ ಮಾಡಲಾಗಿದೆ.

ಬಹುಮತದ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಅಂತಿಮ ಹಂತದ ಸರ್ಕಸ್‌ ನಡೆಸುತ್ತಿದೆ. ಪಾಲಿಕೆ ಆವರಣದಲ್ಲಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರ ಕಚೇರಿಯಲ್ಲಿ ಸಭೆ ಸೇರಿರುವ ಮುಖಂಡರು ರಾಜಕೀಯ ತಂತ್ರ ಹೆಣೆಯುತ್ತಿದ್ದಾರೆ. ಅಬ್ಬಯ್ಯ ನೇತೃತ್ವದಲ್ಲಿ ಮೇಯರ್ ಸ್ಥಾನಕ್ಕೆ ಮಯೂರ್ ಮೋರೆ ಹಾಗೂ ಉಪಮೇಯರ್‌ ಸ್ಥಾನಕ್ಕೆ ದೀಪಾ ನೀರಲಕಟ್ಟಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

Related posts

ಪ್ರತಿಭೆ ಗುರುತಿಸುವುದೇ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶ: ಆಸಿಫ್ಅಲಿ ನದಾಫ್

eNEWS LAND Team

ಹುಬ್ಬಳ್ಳಿ ಕಂಜಾರ ಬಾಟ್ ಮತ್ತು ಚಪ್ಪರಬಂದನಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

eNEWS LAND Team

ಅಣ್ಣಿಗೇರಿ ಪುರಸಭೆ ಚುನಾವಣೆಗೆ 37 ನಾಮಪತ್ರ ಸಲ್ಲಿಕೆ.

eNEWS LAND Team