33 C
Hubli
ಏಪ್ರಿಲ್ 25, 2024
eNews Land
ಸುದ್ದಿ

ಅಂಗವಿಕರಿಗೆ ತ್ರಿಚಕ್ರ ವಾಹನ ವಿತರಿಸಿದ: ಶಾಸಕಿ ಕುಸುಮಾವತಿ

ಇಎನ್ಎಲ್ ಕುಂದಗೋಳ: 2018-19ನೇ ಸಾಲಿನಲ್ಲಿ ಕೋವಿಡ್ ಮಹಾಮಾರಿಯಿಂದ ವಿಳಂಬವಾದ ಅಂಗವಿಕಲರಿಗೆ ತ್ರಿಚಕ್ರ ವಾಹನ ಯೋಜನೆ ಎಂದ ಶಾಸಕಿ ಕುಸುಮಾವತಿ ಶಿವಳ್ಳಿ.
       ಪಟ್ಟಣದ ಶಾಸಕರ ಜನಸಂಪರ್ಕ ಕೇಂದ್ರದಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಏರ್ಪಡಿಸಿದ್ದ. ವಿಕಲಚೇತನರಿಗೆ 13ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
      ಈ ವೇಳೆ ಮಾತನಾಡಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳಾದ ದೊಡ್ಡಪ್ಪಾ ಮೂಲಿಮನಿ ಅವರ ಇಲಾಖೆಯಿಂದ 21 ಅಂಗವಿಕಲರನ್ನು ಗುರುತಿಸಲಾಗಿದೆ. ಪ್ರತಿಯೊಬ್ಬರಿಗೂ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಅಂಗವಿಕಲತೆ ಹೊಂದಿರುವ  ಫಲಾನುಭವಿಗಳನ್ನು ಗುರುತಿಸಿ ಸಮಾಜದ ಮುಂದೆ ಬರಲು ಸ್ಥಳೀಯ ಶಾಸಕರಿಂದ ಸೌಲಭ್ಯಗಳನ್ನು ದೊರಕಿಸುವಂತೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
       ಕಾಂಗ್ರೆಸ್ ಮುಖಂಡ ಅರವಿಂದ್ ಕಟಗಿ ಮಾತನಾಡಿ ಇಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿದಿನ ಏರುತ್ತಿದೆ. ಸರ್ಕಾರ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳನ್ನು ವಿತರಿಸುವ ಯೋಜನೆಯನ್ನು ಜಾರಿಗೆ ತರಬೇಕು, ದುಡಿಯಲು ಅಸಹಾಯಕರು ಆಗಿರುವ ಅಂಗವಿಕಲರಿಗೆ ದುಡ್ಡಿನ ಹೊರೆಯನ್ನು ತಪ್ಪಿಸಿದಂತಾಗುತ್ತದೆ ಎಂದರು.
       ಈ ವೇಳೆ ಪ.ಪಂ ಸದಸ್ಯರಾದ ಮಲ್ಲಿಕಾರ್ಜುನ ಕಿರೇಸೂರ, ಮಲಿಕ್ ಶಿರೂರು, ಬಸವರಾಜ ತಳವಾರ, ಹನುಮವ್ವಾ ಕೋರಿ, ಲಕ್ಷ್ಮಣ ಚುಳಕಿ, ಗುರು ಚಲವಾದಿ, ಬಸವರಾಜ್ ಶಿರಸಂಗಿ, ಹರೀಶ್ ಲಕ್ಷ್ಮೇಶ್ವರ, ಶಂಕ್ರಪ್ಪ ಹಡಪದ, ಕೆ.ಬಿ.ಕೋರಿ ಸೇರಿದಂತೆ ಇತರರಿದ್ದರು.

Related posts

ತಾಲೂಕಾದರೂ ಬದಲಾಗದ ಅಣ್ಣಿಗೇರಿ ಹಣೆಬರಹ

eNEWS LAND Team

ಹುಬ್ಳಿಗೆ ಬಂತು ಎಲೆಕ್ಟ್ರಾನಿಕ್ ರೈಲು! ಎಸ್ಎಸ್ಎಸ್ ನಿಲ್ದಾಣದಲ್ಲಿ ಹೊಸ ಅಧ್ಯಾಯ ಆರಂಭ

eNewsLand Team

ಲಿಂಗಾಯತ ಸಿಎಂಗಳಬಗ್ಗೆ ಸಿದ್ರಾಮಯ್ಯ ಹೇಳಿಕೆಗೆ ಜನ ಪಾಠ ಕಲಿಸುತ್ತಾರೆ: ಸಿಎಂ ಬೊಮ್ಮಾಯಿ‌

eNEWS LAND Team