25 C
Hubli
ಮೇ 25, 2024
eNews Land
ಸುದ್ದಿ

ಅಣ್ಣಿಗೇರಿ ತಾಲೂಕಿನಾದ್ಯಾಂತ ಗೃಹಲಕ್ಷ್ಮೀ ನೊಂದಣಿಗೆ ತುಂಬಿರುವ ಸೇವಾಕೇಂದ್ರಗಳು!!

ಇಎನ್‌ಎಲ್ ಅಣ್ಣಿಗೇರಿ: ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಕುಟುಂಬ ಮುಖ್ಯಸ್ಥ ಮಹಿಳೆಯಗೆ 2000 ರೂಗಳ ಧನಸಹಾಯ  ನೀಡಲು ಫಲಾನುಭವಿಗಳಿಗೆ ಆನ್ಲೈನ್ ಅರ್ಜಿ ಅಥವಾ ಅಧಿಕೃತ ವೆಬ್‌ಸೈಟಿನಲ್ಲಿ  ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದ ಪರಿಣಾಮ ನಿತ್ಯ 400 ನೂರಕ್ಕೂ ಅಧಿಕ ಮಹಿಳೆಯರು ಪ್ರತಿ ಸೇವಾ ಕೇಂದ್ರದಲ್ಲಿ ಸರದಿ ಪ್ರಕಾರ ಸಾಲುಗಟ್ಟಿ ನಿಂತು ಅರ್ಜಿ ಸಲ್ಲಿಸುತ್ತಿದ್ದಾರೆ.

ಪಟ್ಟಣದ ಪುರಸಭ ವಾಣಿಜ್ಯ ಮಳಿಗೆ-5, ಗಣೇಶಗುಡಿ ಹತ್ತಿರ, ವಿನ್ ಕಂಪ್ಯೂಟರ್ ಸೆಂಟರ್,   ಹಾಗೂ  ತಾಲೂಕಿನ ೯ ಗ್ರಾ.ಪಂ. ಕಛೇರಿ ಕೇಂದ್ರಗಳಲ್ಲಿ ಹಾಗೂ ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಗ್ರಾಮಗಳಲ್ಲಿ ಗ್ರಾಮ-1 ಕೇಂದ್ರದ ಮೂಲಕ ಗ್ರಾಪಂ ನಲ್ಲಿ ದಿನವಿಡಿ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಅರ್ಜಿ ಅನ್ಲೈನ ನೊಂದಣಿಗೆ ಮಹಿಳೆಯರು ಸರದಿ ಪ್ರಕಾರ ನಿತ್ಯ ಅರ್ಜಿ ಸಲ್ಲಿಸುತ್ತಿದ್ದು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಲು ಮಹಿಳೆಯರು ಕಿಕ್ಕಿರಿದು ಸೆರಿದ್ದು ಕಂಡುಬರುತ್ತಿದೆ.

ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳ ಮಹಿಳೆಯರು, ದಿನವಿಡಿ ಕಾಯ್ದು ಅರ್ಜಿ ಸಲ್ಲಿಸಲು ಪರದಾಡುತ್ತಿರೋದು ಒಂದಡೆಯಾದರೇ, ಗದ್ದಲ ಕಡಿಮೆಯಿರುವ ಬಾಪೂಜಿ ಸೇವಾಕೇಂದ್ರ, ಕರ್ನಾಟಕ ಒನ್, ಯು.ಎಲ್.ಬಿ. ಸೇವಾ ಕೇಂದ್ರಗಳಿಗೆ ತೆರಳಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುತ್ತಿರೋದು ಮತ್ತೊಂದಡೆ ಕಾಣುತ್ತಿದೆ.

ಗ್ರಾ.ಪಂ ಪಿಡಿಓಗಳು, ಡಿಇಓಗಳು,  ಗ್ರಾ.ಪಂ.ಆಡಳಿತ ಮಂಡಳಿ, ಪುರಸಭೆ ಆಡಳಿತ ಮಂಡಳಿ, ಸದಸ್ಯರು ಅಧ್ಯಕ್ಷರು, ಬಂದ0ತಹ ಮಹಿಳೆಯರಿಗೆ ಅರ್ಜಿ ನೊಂದಣಿ ಮಾಡಿ ಕಳಿಸುವಲ್ಲಿ ಸಹಕಾರ ನೀಡುತ್ತಿದ್ದು,ಗ್ರಾಹಕರಿಂದ ಯಾವುದೇ ತಂಟೆ ತಕರಾರು ಜರಗದಂತೆ ಅರ್ಜಿ ಸ್ವೀಕರಿಸುತ್ತಿರೋದಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ತಾಲೂಕಿನ ಭದ್ರಾಪೂರ ಗ್ರಾಮ ಪಂಚಾಯತಿಗೆ ಒಳಪಟ್ಟ ಬಸಾಪೂರ, ಮಜ್ಜಿಗುಡ್ಡ, ಸೈದಾಪೂರ ಗ್ರಾಮದ ಮಹಿಳೆಯರು ಗ್ರಾ.ಪಂ ಕಛೇರಿಗೆ ಬಂದಾಗ ಸಹಕಾರ ನೀಡಿ ಅರ್ಜಿ ಸ್ವೀಕರಿಸುತ್ತಿದ್ದು, ಸರ್ಕಾರಿ ರಜೆಯನ್ನು ಪರಿಗಣಿಸದೇ ಹಗಲಿರುಳು ಸಿಬ್ಬಂದಿ ವರ್ಗ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಪಂಚತ0ತ್ರ -2 ಮತ್ತು ನರೇಗಾ ಯೋಜನೆ 2022-23 ನೇ ಸಾಲಿನಲ್ಲಿ ಎಪ್ರೀಲ್ ರಿಂದ ಜೂನ್ ವರೆಗೆ ನಿಗದಿತ ಸಮಯದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ ಜಿಪಂ ಸಿಇಓ ಅಧಿಕಾರಿಗಳಿಂದ ಅಭಿನಂದನಾ ಪತ್ರಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

Grilahakshmi Sevakendras are full of registration all over Annigeri Taluk!!

ENL Annigeri: As a result of the government’s order for the beneficiaries to apply online or apply on the official website for the grant of Rs 2000 to the woman head of the household for the implementation of the Grilahakshmi Yojana, more than 400 hundred women are queuing up and applying at each service center daily.

Town Municipal Commercial Shop-5, Near Ganesh Gudi, Win Computer Centre, and Taluk 9 Gram.Pt. In the office centers and in all the villages under the jurisdiction of the village, women are applying regularly for the registration of Dinavidi Govt. Grilahakshmi Yojana application online in the village through village-1 center. Women are seen thronging to apply in every gram panchayat.

While the women of the villages under the Gram Panchayat are scrambling to apply for daily reservation, Bapuji Sevakendra, Karnataka One, ULB, where there is less noise, Going to the service centers and applying for the Grilahakshmi Yojana is seen differently.

Village PDOs, DEOs, Village Board of Directors, Municipal Board of Directors, Members, Presidents, are cooperating in registering and sending applications to the women, and the district administration has taken strict action to receive applications from customers without any dispute.

The women of Basapura, Majjigudda and Saidapur villages under Bhadrapura Gram Panchayat of taluk are cooperating and receiving applications when they come to Gram Panchayat office and they are working day and night as staff members regardless of government holidays. In the past Panchatra-2 and Narega Yojana 2022-23 achieved 100% progress within the stipulated time from April to June and got congratulatory letters from CEO officials of ZP.

Related posts

ಬೆಂಬಲ ಬೆಲೆ ಯೋಜನೆ: ಬ್ಯಾಹಟ್ಟಿಯಲ್ಲಿ ಕಡಲೆ ಖರೀದಿ ಕೇಂದ್ರ ಉದ್ಘಾಟನೆ

eNEWS LAND Team

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನದ ಕುರಿತು ಜಾಥಾ ಕಾರ್ಯಕ್ರಮಕ್ಕೆ ಚಾಲನೆ: ಹಿರಿಯ ದಿವಾಣಿ ನ್ಯಾಯಾಧೀಶ ಡಿ.ಆರ್.ಮಂಜುನಾಥ

eNEWS LAND Team

ಇದು ಅನು ಇಮ್ಯಾನುಯೆಲ್ ಕಮಾಲ್!!

eNewsLand Team