27 C
Hubli
ಮಾರ್ಚ್ 4, 2024
eNews Land
ಸುದ್ದಿ

ಹುಬ್ಬಳ್ಳಿ: ಹಸಿರು ಬಣ್ಣದ ಬ್ಯಾಗಲ್ಲಿ ಅದನ್ನು ತರ್ತಿದ್ದ ಆಸಾಮಿ ಅಂದರ್!

ಇಎನ್ಎಲ್ ಧಾರವಾಡ

ಹುಬ್ಬಳ್ಳಿಯ ಸೊನೀಯಾ ಗಾಂಧಿ ನಗರ ಹತ್ತಿರದ ಹಳ್ಯಾಳ ರೋಡದ ಕೆಇಬಿ ಗ್ರೀಡ್ ಸಮೀಪ ದಾಳಿ ನಡೆಸಿದ ಪೊಲೀಸರು ಒಬ್ಬನನ್ನು ಬಂಧಿಸಿ 430 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಾದಕ ದ್ರವ್ಯ ಮಾರಾಟ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಡಿಗೇರಿ ಪೊಲೀಸ್ ಇನ್ಸ್ಪೆಕ್ಟರ್ ಶ್ಯಾಂರಾಜ್ ಎಸ್. ಸಜ್ಜನ್ ಕಾರ್ಯಾಚರಣೆ ನಡೆಸಿದರು.

ಆರೋಪಿ ವಶಕ್ಕೆ ತೆಗೆದುಕೊಂಡು ಆತನ ಬಳಿ ಇದ್ದ
ಒಂದು ಹಸಿರು ಬಣ್ಣದ ಬ್ಯಾಗಿನಲ್ಲಿದ್ದ 15ಸಾವಿರ ಮೌಲ್ಯದ 430 ಗ್ರಾಂ ಗಾಂಜಾ ವಶಪಡಿಸಿಕೊಂಡರು. ಜತೆಗೆ ನಗದು 2350 ರು. ಜಪ್ತು ಮಾಡಿದ್ದಾರೆ.

ಪ್ರಸ್ತುತ ಆರೋಪಿ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ಪ್ರಕರಣ ಬೇಧಿಸಿದ ಇನ್ಸ್ಪೆಕ್ಟರ್ ಶ್ಯಾಂರಾಜ ಎಸ್ ಸಜ್ಜನ್, ಪ್ರೊ. ಪಿಎಸ್ಐ ಮಾರುತಿ ಆರ್., ಕಾರ್ಯ ವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Related posts

ಅತಿಕ್ರಮಣ ವಾಣಿಜ್ಯ ಅಂಗಡಿ ಮುಚ್ಚಿಸಿ ತೆರವುಗೊಳಿಸಲು ಸೂಚನೆ

eNEWS LAND Team

ನಿಮ್ಮದು ಕಳಂಕ ರಹಿತ ಸೇವೆ: ಸಿ.ಎಮ್.ನಿಂಬಣ್ಣವರ

eNEWS LAND Team

ಕಾಂಗ್ರೆಸ್ 40 ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ. ಯಾರ್ಯಾರು ಪ್ರಚಾರಕರು ನೋಡಿ!

eNEWS LAND Team