29 C
Hubli
ಸೆಪ್ಟೆಂಬರ್ 26, 2023
eNews Land
ಸುದ್ದಿ

ಅವಶ್ಯಕತೆ ಅನುಸಾರವಾಗಿ ಯೋಜನಾ ವರದಿ ತಯಾರಿಸಿ: ಎನ್.ಎಫ್.ಕಟ್ಟೆಗೌಡರ

ಇಎನ್ಎಲ್ ಕಲಘಟಗಿ:

ಸರ್ಕಾರದ ನಿರ್ದೇಶನದಂತೆ ಗ್ರಾಮ ಸಭೆಗಳನ್ನು ಮಾಡುತ್ತೇವೆ, ನಿಮ್ಮ ಗ್ರಾಮಗಳ ಅವಶ್ಯಕತೆ ಅನುಸಾರವಾಗಿ ಯೋಜನಾ ವರದಿ ತಯಾರಿಸಿಕೊಂಡು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಮಾಡಿರಿ ಎಂದು ಕೃಷಿ ವಿಸ್ತರಣಾ ಅಧಿಕಾರಿ ಎನ್.ಎಫ್.ಕಟ್ಟೇಗೌಡರ್ ಹೇಳಿದರು.

    ತಾಲೂಕಿನ ಬೇಗೂರ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ನ್ಯೂಡೆಲ್ ಅಧಿಕಾರಿಯಾಗಿ ಮಾತನಾಡಿ ತಾವೆಲ್ಲರೂ ಹೊಸದಾಗಿ ಆಯ್ಕೆಯಾದ ಸದಸ್ಯರಿದ್ದೀರಿ, ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಸಹಜ, ಈಗ ನಿಮಗೆ ಹೊಸ ಪಿಡಿಓ ಇದ್ದಾರೆ, ಸಂಪೂರ್ಣ ಸಹಕಾರ ಕೊಡಿ, ಜನರ ಕಷ್ಟಗಳನ್ನು ಅರಿತು ಸ್ಪಂದಿಸಿರಿ, ಮಾದರಿ ಪಂಚಾಯತಿಯನ್ನಾಗಿ ಮಾಡಿರಿ ಎಂದರು.

ಗ್ರಾ. ಪಂ. ಪಿಡಿಓ ಶಂಕರ ಗೌಳೇರ್ ಮಾತನಾಡಿ ವಿವಿಧ ವಸತಿ ಯೋಜನೆಗಳಿಗೆ, ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ, ಸಮುದಾಯ ಕಾಮಗಾರಿಗಳಾದ ಸಿ.ಸಿ.ರಸ್ತೆ, ಪಕ್ಕಾ ಗಟಾರ, ಕೆರೆ ಹೂಳೆತ್ತುವುದು, ಕೃಷಿ ಹೊಂಡ, ಬದು ನಿರ್ಮಾಣ, ತೋಟಗಾರಿಕೆ ಬೆಳೆಗಳಿಗೆ, ಹಾಗೂ ಶೌಚಾಲಯ ನಿರ್ಮಾಣಕ್ಕೆ ಹೆಸರು ನೊಂದಣಿ ಮಾಡಿಸಿರಿ ಎಂದರು. ಫೆ.15 ರಿಂದ ಕರ ವಸೂಲಿ ಮಾಸಾಚರಣೆ ಇದ್ದು ತಾವೆಲ್ಲರೂ ಸಹಕರಿಸಿರಿ ಎಂದರು. ಸಭೆಯಲ್ಲಿ ಕೆಲವು ಸಮುದಾಯ ಕಾಮಗಾರಿಗಳ ವಿಷಯಕ್ಕೆ ವಿವಾದಗಳು ವ್ಯಕ್ತವಾದವು. ನಂತರ ಅಧಿಕಾರಿಗಳು ಸಮಜಾಯಿಸಿ ಸಭೆ ನಡೆಸಿದರು. ಗ್ರಾ.ಪಂ. ಅಧ್ಯಕ್ಷೆ ನಾಗವ್ವ ಅಂಗಡಿ, ಉಪಾಧ್ಯಕ್ಷ ಬಸವರಾಜ ಮಿಕ್ಕಿತ, ಸದಸ್ಯರಾದ ನಿಂಗಪ್ಪ ಸುಳ್ಳದ, ಶಂಕ್ರವ್ವ ಬಡಿಗೇರ, ದ್ಯಾಮವ್ವ ಬಡಿಗೇರ, ಹನುಮಂತಪ್ಪ ಗೌರಿ, ಶಂಕ್ರಪ್ಪ ಬೋಳಣ್ಣವರ, ರೇಣುಕಾ ಬಿಸರಳ್ಳಿ, ಚನಬಸವ್ವ ಮುಕ್ಕಲಕಟ್ಟಿ, ರೇಣುಕಾ ಮುನವಳ್ಳಿ, ದ್ರಾಕ್ಷಾಯಣಿ ಹಡಪದ, ಹುಲ್ಲಂಬಿ ಗ್ರಾಮದ ರಾಚಪ್ಪ ಬಿಸರಳ್ಳಿ, ಗುರುನಾಥ ಹರಿಜನ, ಸಾವಕ್ಕ ಸುತಗಟ್ಟಿ, ಸಿದ್ದವ್ವ ಶಿಗ್ಗಟ್ಟಿ, ತುಮರಿಕೊಪ್ಪ ಗ್ರಾಮದ ಮಂಜವ್ವ ಸಂತಪ್ಪನವರ, ತಿಪ್ಪಣ್ಣ ಕುರಬರ, ತುಕಾರಾಮ ಹೂಗಾಡಿ, ಶಕುಂತಲ ಹರಿಜನ, ಮತ್ತು ಯಲ್ಲಪ್ಪ ಸಂತಪ್ಪನವರ, ಪರಶುರಾಮ ಪೂಜಾರ, ಗ್ರಾ.ಪಂ. ಸಿಬ್ಬoದಿ, ಶಿವಾನಂದ ಧನಿಗೊಂಡ, ಪ್ರಭು ಅಂಗಡಿ, ಕಾರ್ಯದರ್ಶಿಯಾದ ಚನ್ನಪ್ಪ ನವಣಿ, ಮಹಿಳೆಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ನೀತಿ ನಿಯಮಗಳ ಆಡಳಿತ ಬೇಕು: ಶಾಸಕ ನಿಂಬಣ್ಣವರ

eNEWS LAND Team

ಮತದಾರರ ಜಾಗೃತಿ ಅಭಿಯಾನಕ್ಕೆ ಜಿಪಂ ಸಿಇಒ ಸ್ವರೂಪ ಟಿ.ಕೆ ಚಾಲನೆ: ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ

eNEWS LAND Team

ಇಂದಿನಿಂದ ಜಿಲ್ಲಾದ್ಯಂತ 15 ರಿಂದ 18 ವರ್ಷದೊಳಗಿನವರಿಗೆ ಕೋವಿಡ್-19 ಲಸಿಕೆ

eNEWS LAND Team