22.8 C
Hubli
ಜೂನ್ 13, 2024
eNews Land
ಅಪರಾಧ ಸುದ್ದಿ

ಧಾರವಾಡದಂವಗ ₹ 5 ಲಕ್ಷ‌ ಸಾಲ ಕೊಡ್ಸುದಾಗಿ ₹ 3 ಲಕ್ಷ ರು. ಟೋಪಿ ಹಾಕ್ಯಾರ ನೋಡಿ!

ಇಎನ್ಎಲ್ ಧಾರವಾಡ:

ಬಜಾಜ್ ಫೈನಾನ್ಸಿನಲ್ಲಿ ಕೇವಲ ಶೇ.₹ 5 ಬಡ್ಡಿ ದರದಲ್ಲಿ ₹ 5ಲಕ್ಷ  ಸಾಲ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ಅಗತ್ಯ ದಾಖಲೆ ಪಡೆದು 3ಲಕ್ಷ ರು. ಪಡೆದು ವಂಚಿಸಿದ ಬಗ್ಗೆ ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪಶ್ಚಿಮ ಬಂಗಾಳದ ಸದ್ಯ ಧಾರವಾಡ ನಿವಾಸಿ ಹಾರು ಆಸ್ಟೋಬೋರ್ ವಂಚನೆಗೆ ಒಳಗಾದವರು. ಕಲ್ಕತ್ತಾದಿಂದ ಕರೆ ಮಾಡುವುದಾಗಿ ಹೇಳಿದ ವಂಚಕ ಆಧಾರ, ಪಾನ್, ಐಟಿ ರಿಟರ್ನ್ ಪಾಡದು ಬಜಾಜ್ ಫೈನಾನ್ಸದಿಂದ ₹5ಲಕ್ಷ ಸಾಲ ಮಂಜೂರಾಗಿದೆ ಎಂದು ನಂಬಿಸಿದ್ದಾನೆ. ಬಳಿಕ ಲೋನ್ ಅಕೌಂಟ್ ತೆರೆಯಲು ತಿಳಿಸಿ ಅಪ್ರೂವಲ್ ಫೀಜ್, ಇನ್ಶ್ಯೂರೆನ್ಸ್ ಫೀಜ್ ಪಾಸ್‌ವರ್ಡ್ ಸೆಟ್ಟಿಂಗ್ ಚಾರ್ಜ್ ಎಂದು ಹಂತ ಹಂತವಾಗಿ ₹ 304100 ಆನ್‌ಲೈನ್, ಎಟಿಎಂ ಮೂಲಕ ಡ್ರಾಾ ಮಾಡಿಕೊಂಡು ಬಳಿಕ ಸಾಲವನ್ನೂ ವಂಚಿಸಿದ್ದಾನೆ ಎಂದು ದೂರಲ್ಲಿ ದಾಖಲಾಗಿದೆ.

Related posts

ಅಣ್ಣಿಗೇರಿ ಪುರಸಭೆ; ಬಿರುಸಿನ ಮತದಾನ

eNewsLand Team

ಹುಬ್ಬಳ್ಳಿಲಿ ಚಾಕು ಇರಿತ; ಗಾಯಾಳು ಕಿಮ್ಸನಲ್ಲಿ

eNewsLand Team

ಕೃಷಿ ವಿವಿ ವಿದೇಶಿ ವಿದ್ಯಾರ್ಥಿಗಳೊಂದಿಗೆ ರಾಜ್ಯಪಾಲರ ಸಂವಾದ

eNEWS LAND Team