24 C
Hubli
ಸೆಪ್ಟೆಂಬರ್ 27, 2023
eNews Land
ಸುದ್ದಿ

ಅವ್ನೌವ್ನ! ಹ್ಯಾಂಗ್ ಹ್ಯಾಂಗ್ ಆನ್ಲೈನ್ ದೋಖಾ ಮಾಡ್ತಾರ! ಹುಬ್ಳಿ ಮನಷ್ಯಾಗ ಹ್ಯಾಂಗ ಟೋಪಿ ಹಾಕ್ಯಾರ ನೋಡ್ರಿ

ಸೈಬರ್ ಕ್ರೈಂ ಹೀಗೂ ನಡೆಯತ್ತೆ: ಹುಬ್ಳಿ ಮನುಷ್ಯನ ದಾಖಲೆ, ಇನ್ಯಾರದ್ದೋ ಜಾತ್ರೆ! ನೀವೂ ಯಾಮಾರಬಹ್ದು!!

ಇಎನ್ಎಲ್ ಧಾರವಾಡ: ಆನ್ಲೈನ್ ಮೂಲಕ ಸಾಲಪಡೆಯಲು ನೀಡಿದ್ದ ದಾಖಲೆಗಳನ್ನು ಪಡೆದ ವಂಚಕರು, ಸಾಲ ನೀಡುವ ವಿವಿಧ ಆ್ಯಪ್‌ ಕಂಪನಿಗಳಿಗೆ ನೀಡಿ ₹1.78 ಲಕ್ಷ ಸಾಲ ಪಡೆದಿದು ವಂಚಿಸಿದ ಹೊಸ ರೂಪದ ಸೈಬರ್ ಕ್ರೈಮ್ ನಡೆದಿರುವುದು ಬೆಳಕಿಗೆ ಬಂದಿದೆ.

ಹಳೆ ಹುಬ್ಬಳ್ಳಿಯ ಪಿ.ಎನ್‌. ಕೊಟೆಣ್ಣವರ ರೂಪಿ ಕಿಂಗ್‌ ಎಂಬ ಆ್ಯಪ್‌ನಿಂದ ₹22 ಸಾವಿರ ಸಾಲ ಪಡೆದಿದ್ದರು. ಅದನ್ನು ಪಡೆಯುವಾಗ ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ವಿಳಾಸ, ಮೊಬೈಲ್‌ ನಂಬರ್‌, ಪ್ಯಾನ್‌ ಕಾರ್ಡ್‌, ಫೋಟೊ ನೀಡಿದ್ದರು.
ಆನ್‌ಲೈನ್‌ನಲ್ಲಿ ಅದನ್ನು ಪಡೆದುಕೊಂಡ ವಂಚಕರು ಸಿಲ್ವರ್‌ ಪಾಕೆಟ್‌, ಫೈನ್‌ ಲೋನ್‌,  ಫಿಶ್‌ ಕ್ಯಾಶ್‌, ಕ್ರೆಡಿಟ್‌ ಕಿಂಗ್‌, ಈಜಿ ಕ್ರೆಡಿಟ್‌, ನವೇಲ್‌ ಫೈನಾನ್ಸ್‌, ಅಪನಾ ಪೈಸಾ, ಇನ್ಫಿನಿಟಿ ಕ್ಯಾಶ್‌ ಆಸ್ಯಪ್‌ ಮೂಲಕ ಸಾಲ ಪಡೆದಿದ್ದಾರೆ. ಆ ಹಣ ತುಂಬುವಂತೆ ಬೇರೆ ಬೇರೆ ನಂಬರ್‌ಗಳಿಂದ ಅವರಿಗೆ ಕರೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

32 ಎಕರೆ ಕಬ್ಬು ಬೆಳೆ ಆಹುತಿ; ಎಷ್ಟು ರೈತರು ಕಣ್ಣೀರು ಹಾಕ್ತಿದ್ದಾರೆ ಗೊತ್ತಾ?

eNewsLand Team

ನೀರಿನಲ್ಲಿ ಮುಳುಗಿದ ರೈಲ್ವೇ ಬೋಗಿಗಳಿಂದ ಪಾರುಗಾಣಿಕಾ ಮತ್ತು ಮರುಪಡೆಯುವಿಕೆಗಾಗಿ ವಿಶೇಷ ತರಬೇತಿ

eNEWS LAND Team

ಅಸಮಾನತೆ ತೊಡೆಯುವಲ್ಲಿ ಅಂಬೇಡ್ಕರ್ ಬಸವಣ್ಣನವರ ಪಾತ್ರಮುಖ್ಯ: ಡಾ.ಎ.ಸಿ.ವಾಲಿ

eNewsLand Team