29 C
Hubli
ಏಪ್ರಿಲ್ 26, 2024
eNews Land
ಕೃಷಿ ಸುದ್ದಿ

ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ

ಇಎನ್ಎಲ್ ಅಣ್ಣಿಗೇರಿ:  ಪಟ್ಟಣದ ರೈತ ಹೋರಾಟ ಸಮಿತಿ ಮುಖಂಡರು ಗದಗ ವಿಭಾಗದ ಎಲ್.ಸಿ.ಗೇಟ್ ನಂ.18 ಬಂದ್ ಮಾಡಿ ಸಬ್ ವೇ (ಓವರ್ ಬ್ರಿಡ್ಜ್ ) ಮಾಡಬೇಕೆಂದು ಪ್ರತಿಟಿಸಿ ತಹಶೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಇದನ್ನು ಓದಿ: ಫ್ಯಾಷನ್‌ಯುಗ ಮಹಿಳೆಯರಿಗೆ ಪೂರಕ: ಭಾಗ್ಯಶ್ರೀ ಜಾಗೀರದಾರ

ಅಣ್ಣಿಗೇರಿ ತಾಲೂಕಿನ ನಾಗರಿಕರು ಸಮಸ್ತ ರೈತ ಮುಖಂಡರು ಸಭೆಯಲ್ಲಿ ಚರ್ಚಿಸಿ ತಿರ್ಮಾನಿಸಿದಂತೆ ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣಗೊಂಡರೆ ವಾಹನ ದಟ್ಟಣೆ ನಿಯಂತ್ರಣ ಹಾಗೂ ಅಪಘಾತ ನಿಯಂತ್ರಿಸಬಹುದು. ಬ್ರಿಡ್ಜ್ ನಿರ್ಮಿಸಿದ ನಂತರ ಕೃಷಿ ಚಟುವಟಿಗೆ ಹೋಗಿ ಬರಲು ಹೆಟ್ಟದ ದಾರಿ ಮಾರ್ಗವಿದ್ದು, 8ಕಿಮೀ. ವ್ಯಾಪ್ತಿಯ ಫಲವತ್ತಾದ ಭೂಮಿ ಒಳಗೊಂಡ ಕಾರಣ ಭೂಸ್ವಾಧೀನ ಮಾಡಿಕೊಂಡು ರೈತರು ಟ್ರಾಕ್ಟರ್, ಚಕ್ಕಡಿ, ಕುರಿ, ಜಾನವಾರುಗಳು, ಸುಗಮವಾಗಿ ಸಂಚರಿಸಲು ರಸ್ತೆ ನಿರ್ಮಾಣ ಮಾಡಬೇಕು. ಕೃಷಿ ಸಂಶೋಧನಾ ಕೇಂದ್ರಕ್ಕೆ ಹೊಂದಿಕೊoಡoತೆ ಭೂಸ್ವಾಧೀನ ಮಾಡಿಕೊಂಡು ರೈತರಿಗೆ ಸಂಚರಿಸಲು ದಾರಿ ಮಾಡಬೇಕು. ಅಪೂರ್ಣಗೊಂಡಿರುವ ಹಳ್ಳಿಕೇರಿ ಅಡ್ನೂರು ರಸ್ತೆ ರೈಲ್ವೆ ಒಳಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು. ಸರಕಾರಿ ಆಸ್ಪತ್ರೆಗೆ ಹೊಂದಿಕೊoಡoತೆ ಹೋಗುವ ಮೂಲ ರಸ್ತೆ ಮಾರ್ಗವಿದೆ.

ಇದನ್ನು ಓದಿ ಮನೆ ಮನೆಗೆ ಕೃಷಿ ಮಾಹಿತಿ ರಥ: ಶಾಸಕ ನಿಂಬಣ್ಣವರ

ಈ ಎಲ್ಲಾ ನಿರ್ಣಯಗಳಿಗೆ ಸೌಥ್ ವೆಸ್ಟರ್ನ ರೈಲ್ವೆ ಹುಬ್ಬಳ್ಳಿ ಚೀಫ್ ಇಂಜನಿಯರ್ ಹಾಗೂ ಜಿಲ್ಲಾಧಿಕಾರಿಗಳು ಎಪ್ರೀಲ್-27 ಹಾಗೂ ಮೇ-24 ರಂದು ನೀಡಿದ ಆದೇಶ ಪ್ರಕಾರ  ಗದಗ ವಿಭಾಗದ ಎಲ್.ಸಿ.ಗೇಟ್ ನಂ.18 ಬಂದ್ ಮಾಡಿ ಸಬ್ ವೇ (ಓವರ್ ಬ್ರಿಡ್ಜ್ ) ನಿರ್ಮಾಣ ಮಾಡಲು ಅನುಮೋದನೆ ಹಾಗೂ ನಿರಪೇಕ್ಷಣೆ ಪತ್ರ ನೀಡುವಂತೆ ತಿಳಿಸಿದ ಪ್ರಕಾರ ನಮ್ಮ ಬೇಡಿಕೆಗಳನ್ನು ಪರೀಶಿಲಿಸಿ ಕಾಮಗಾರಿಗಳಿಗೆ ಕ್ರಮಕೈಗೊಳ್ಳದಿದ್ದರೇ ತಾಲೂಕಿನಾದ್ಯಾಂತ ಉಗ್ರ ಹೋರಾಟ ಮಾಡಲಾಗುವುದೆಂದು ರೈತ ಮುಖಂಡರು ಎಚ್ಚರಿಕೆ ಕೊಟ್ಟರು.
ಈ ಸಂದರ್ಭದಲ್ಲಿ ಭಗವಂತ ಪುಟ್ಟಣ್ಣವರ, ನಿಂಗಪ್ಪ ಬಡೆಪ್ಪನವರ, ಗುರುಸಿದ್ದಪ್ಪ ಕೊಪ್ಪದ, ರವಿರಾಜ ವೇರ್ಣೆಕರ, ಶಿವಶಂಕರ ಕಲ್ಲೂರ, ಎ.ಪಿ.ಗುರಿಕಾರ, ಯಲ್ಲಪ್ಪ ಮೊರಬಸಿ, ಮಲ್ಲಪ್ಪ ಬ್ಯಾಹಟ್ಟಿ, ಶೇಖಪ್ಪ ಸೊಟಕನಾಳ, ಭರತೇಶ ಜೈನ, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ರೈತರಿದ್ದರು.

ಇದನ್ನು ಓದಿ ಇಎನ್ಎಲ್ ಎಕ್ಸಕ್ಲೂಸಿವ್: ವಾಸ್ತು ಪುರುಷ ಮಟಾಶ್ ಹಿಂದಿನ ಮಸಲತ್ತಿನ ಇಂಚಿಂಚು ಇನ್ಫಾರ್ಮೇಶನ್!! ಸ್ಕೆಚ್, ಮಟಾಶ್

Related posts

ರೈತರಿಗೆ ಆಸರೆಯಾದ ಪಿಎಂ ಫಸಲ ಬೀಮಾ ಯೋಜನೆ: ಕಟ್ಟೇಗೌಡರ

eNEWS LAND Team

ಬ್ಲೈಂಡ್ ಲವ್; ಮಾತುಕತೆಗೆ ಕರೆದು ಯುವಕನ ಮರ್ಡರ್ ಮಾಡಿದ್ರು.‌!! ಘೋರ ವಿಧಿಬರಹ

eNewsLand Team

ಪದ್ಮಶ್ರೀ ನಿರಾಕರಿಸಿದ್ದ ಸಿದ್ದೇಶ್ವರ ಸ್ವಾಮೀಜಿ

eNEWS LAND Team